ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ರಕ್ಷಣೆ, ಮೀನುಗಾರನ ಸಾಹಸದ ವಿಡಿಯೋ ವೈರಲ್
ಯಾದಗಿರಿ: ಭೀಮಾ ನದಿಯಲ್ಲಿ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ಸಿನಿಮೀಯ ರೀತಿಯಲ್ಲಿ ರಕ್ಷಣೆ ಮಾಡಿರುವ ವಿಡಿಯೋ ವೈರಲ್ ಆಗಿದೆ. ಯಾದಗಿರಿ ನಗರದ ಹೊರ ವಲಯದ ಭೀಮಾ ಸೇತುವೆ ಬಳಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಹಿಳೆಯೊಬ್ಬರು ವೈಯಕ್ತಿಕ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಭೀಮಾ ನದಿಗೆ ಹಾರಿದ್ದಾರೆ. ಇನ್ನೇನು ಮುಳುಗುದ್ರು ಎನ್ನುವಷ್ಟರಲ್ಲಿ ಹೀರೋ ಹಾಗೇ ಬಂದ ಮೀನುಗಾರ ಮಹಿಳೆಯ ಜೀವ ಉಳಿಸಿದ್ದಾನೆ. ಸ್ಥಳೀಯ ಮೀನುಗಾರರೊಬ್ಬರು ಜೀವ ಉಳಿಸಿದ ದೃಶ್ಯವನ್ನು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ. ಮಹಿಳೆಯನ್ನು […]
Follow us on
ಯಾದಗಿರಿ: ಭೀಮಾ ನದಿಯಲ್ಲಿ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ಸಿನಿಮೀಯ ರೀತಿಯಲ್ಲಿ ರಕ್ಷಣೆ ಮಾಡಿರುವ ವಿಡಿಯೋ ವೈರಲ್ ಆಗಿದೆ. ಯಾದಗಿರಿ ನಗರದ ಹೊರ ವಲಯದ ಭೀಮಾ ಸೇತುವೆ ಬಳಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮಹಿಳೆಯೊಬ್ಬರು ವೈಯಕ್ತಿಕ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಭೀಮಾ ನದಿಗೆ ಹಾರಿದ್ದಾರೆ. ಇನ್ನೇನು ಮುಳುಗುದ್ರು ಎನ್ನುವಷ್ಟರಲ್ಲಿ ಹೀರೋ ಹಾಗೇ ಬಂದ ಮೀನುಗಾರ ಮಹಿಳೆಯ ಜೀವ ಉಳಿಸಿದ್ದಾನೆ. ಸ್ಥಳೀಯ ಮೀನುಗಾರರೊಬ್ಬರು ಜೀವ ಉಳಿಸಿದ ದೃಶ್ಯವನ್ನು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ. ಮಹಿಳೆಯನ್ನು ಮೀನುಗಾರ ಕಾಪಾಡಿದ ಸಾಹಸಮಯ ದೃಶ್ಯ ಈಗ ಫುಲ್ ವೈರಲ್ ಆಗಿದೆ.