ಮಂಗಳೂರು: ಬೃಹತ್ ಕಾಳಿಂಗ ಸರ್ಪವೊಂದು ಹೆಬ್ಬಾವನ್ನು ನುಂಗಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಸೋಮಂತಡ್ಕದಲ್ಲಿ ನಡೆದಿದೆ. ಮನೆಯೊಂದರ ಹಿತ್ತಲಿನಲ್ಲಿದ್ದ ಹೆಬ್ಬಾವನ್ನು ಬೃಹತ್ ಕಾಳಿಂಗ ನುಂಗಿದೆ. ಬಳಿಕ ಹರಿದಾಡಲು ಸಾಧ್ಯವಾಗದೆ ನುಂಗಿದ ಹಾವನ್ನು ಹೊರಹಾಕಿದೆ. ಹೆಬ್ಬಾವನ್ನು ನುಂಗಿ ವಾಪಾಸು ಹೊರ ಹಾಕಿದ ಚಿತ್ರಣವೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ.
ಸುಮಾರು 14 ಫೀಟ್ ಉದ್ದದ ಕಾಳಿಂಗ ಸರ್ಪವು ಹೆಬ್ಬಾವನ್ನು ನುಂಗಿತ್ತು. ಅಚ್ಚರಿಯ ವಿಷಯ ಅಂದರೆ, ಕಾಳಿಂಗ ಸರ್ಪ ಎರಡು ದಿನದಿಂದ ಇದ್ದಲ್ಲೇ ಇತ್ತು ಎಂದು ತಿಳಿದು ಬಂದಿರುವುದು. ದೈತ್ಯ ಹೆಬ್ಬಾವನ್ನು ನುಂಗಿದ್ದರಿಂದ ಕಾಳಿಂಗ ಸರ್ಪಕ್ಕೆ ಹರಿದಾಡಲು ಆಗುತ್ತಿರಲಿಲ್ಲ. ನೆರೆಯ ಮನೆಯವರು ಉರಗತಜ್ಞ ಬೆಳ್ತಂಗಡಿಯ ಸ್ನೇಕ್ ಅಶೋಕ್ಗೆ ಈ ಬಗ್ಗೆ ಮಾಹಿತಿ ನೀಡಿದ್ದರು.
ವಿವರ ತಿಳಿದು ಸ್ಥಳಕ್ಕೆ ಬಂದ ಸ್ನೇಕ್ ಅಶೋಕ್ ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಿದ್ದಾರೆ. ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಿ ಮತ್ತೆ ಕಾಡಿಗೆ ಬಿಟ್ಟಿದ್ದಾರೆ. ಆದರೆ, ಘಟನೆಯಲ್ಲಿ ಹೆಬ್ಬಾವು ಮೃತಪಟ್ಟಿದೆ.
ಇದನ್ನೂ ಓದಿ: ಕಸ ತೆಗೆಯುತ್ತಿದ್ದಾಗ ಕಂತೆಕಂತೆ ನೋಟು ಕಂಡು ಕಂಗಾಲಾದ ಪೌರಕಾರ್ಮಿಕರು; ಸ್ಥಳಕ್ಕೆ ಓಡೋಡಿ ಬಂದ ಪೊಲೀಸರು ಬಿದ್ದುಬಿದ್ದು ನಕ್ಕರು !
ಇದನ್ನೂ ಓದಿ: Viral Video: ಕೋಳಿ ಕಾಲಿನ ವ್ಯಕ್ತಿಯಿಂದ ಜಿಮ್ನಲ್ಲಿ ಭರ್ಜರಿ ವರ್ಕೌಟ್; ಅವರ ಕಾಲು ಹಾಗಾಗಿದ್ದು ಯಾಕೆ ಗೊತ್ತಾ?
Published On - 3:45 pm, Sat, 3 April 21