AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕೋಳಿ ಕಾಲಿನ ವ್ಯಕ್ತಿಯಿಂದ ಜಿಮ್​​ನಲ್ಲಿ ಭರ್ಜರಿ ವರ್ಕೌಟ್​; ಅವರ ಕಾಲು ಹಾಗಾಗಿದ್ದು ಯಾಕೆ ಗೊತ್ತಾ?

ಮೊದಲು ಈ ವಿಡಿಯೋವನ್ನು @TheoShantonas ಎಂಬುವರು ಶೇರ್ ಮಾಡಿಕೊಂಡಿದ್ದು, ಜಿಮ್​​ನಲ್ಲಿ ಚಿಕನ್​ ಲೆಗ್​ ಡೇ ಇದೆ.. ನಾನದನ್ನು ಖರೀದಿಸಲು ಹೋಗುತ್ತಿದ್ದೇನೆ ಎಂದು ಫನ್ನಿಯಾಗಿ ಕ್ಯಾಪ್ಷನ್​ ಬರೆದುಕೊಂಡಿದ್ದಾರೆ.

Viral Video: ಕೋಳಿ ಕಾಲಿನ ವ್ಯಕ್ತಿಯಿಂದ ಜಿಮ್​​ನಲ್ಲಿ ಭರ್ಜರಿ ವರ್ಕೌಟ್​; ಅವರ ಕಾಲು ಹಾಗಾಗಿದ್ದು ಯಾಕೆ ಗೊತ್ತಾ?
ಲೆಗ್​ ಡೇ ನಿಮಿತ್ತ ವರ್ಕೌಟ್ ಮಾಡುತ್ತಿರುವ ವ್ಯಕ್ತಿ
Lakshmi Hegde
|

Updated on:Mar 25, 2021 | 7:27 PM

Share

ಜಿಮ್​ಗೆ ಹೋಗುವವರಿಗೆ ಲೆಗ್​ ಡೇ ಬಗ್ಗೆ ಖಂಡಿತ ಗೊತ್ತಿರುತ್ತದೆ. ಜಿಮ್​​ನಲ್ಲಿ ಎಲ್ಲ ರೀತಿಯ ವರ್ಕೌಟ್​ಗಳನ್ನೂ ಒಂದೇ ದಿನ ಮಾಡಿಸುವುದಿಲ್ಲ. ಬದಲಾಗಿ ಒಂದು ದಿನ ಕೈಗಳಿಗೆ ಸಂಬಂಧಪಟ್ಟ, ಇನ್ನೊಂದು ದಿನ ಬೆನ್ನು, ಎದೆ ಸದೃಢತೆಗೆ ಸಂಬಂಧಪಟ್ಟ, ಹಾಗೇ ಮತ್ತೊಂದು ದಿನ ಕಾಲಿಗೆ ಸಂಬಂಧಪಟ್ಟ ವ್ಯಾಯಾಮದ ತರಬೇತಿ ನೀಡುತ್ತಾರೆ. ಹಾಗೇ, ಕಾಲಿನ ಮಾಂಸಖಂಡಗಳ ಬಲಕ್ಕೆ ವರ್ಕೌಟ್ ಮಾಡಿಸುವ ದಿನವನ್ನು ಲೆಗ್​ ಡೇ ಎಂದು ಕರೆಯಲಾಗುತ್ತದೆ. ಈ ಲೆಗ್​ ಡೇ ದಿನ ಚಿತ್ರೀಕರಿಸಲಾದ ವಿಡಿಯೋವೊಂದು ಸೋಷಿಯಲ್​ ಮೀಡಿಯಾಗಳಲ್ಲಿ ಇದೀಗ ಭರ್ಜರಿ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ನೆಟ್ಟಿಗರು ಮೊದಲು ಫುಲ್ ಶಾಕ್ ಆದರೂ, ನಂತರ ಸಿಕ್ಕಾಪಟೆ ನಗುಬಂತು ಎಂದು ಹೇಳಿಕೊಂಡಿದ್ದಾರೆ.

ವ್ಯಕ್ತಿಯೊಬ್ಬ ಕಾಲುಗಳ ವ್ಯಾಯಾಮ (Leg Press) ಮಾಡುತ್ತಿರುವುದನ್ನು ನೀವು ಈ ವಿಡಿಯೋದಲ್ಲಿ ನೋಡಬಹುದು. ಆದರೆ ನೀವು ಒಮ್ಮೆಲೆ ಆತನ ಕಾಲುಗಳನ್ನು ನೋಡಿದರೆ ಅಲ್ಲಿ ಕೋಳಿ ಕಾಲು ಕಾಣಿಸುತ್ತದೆ. ವ್ಯಕ್ತಿಗೂ, ಕಾಲುಗಳಿಗೂ ಸಂಬಂಧವೇ ಇಲ್ಲದಂತೆ ಭಾಸವಾಗುತ್ತದೆ. ನೀವದನ್ನು ನೋಡಿದ ತಕ್ಷಣ, ಅಯ್ಯೋ ಈ ಮನುಷ್ಯನಿಗೆ ಕೋಳಿ ಕಾಲಾ? ಎಂಬ ಪ್ರಶ್ನೆ ಉದ್ಭವ ಆಗದೆ ಇರದು. ಆದರೆ ವಾಸ್ತವವೇ ಬೇರೆ.. ವಿಡಿಯೋ ಝೂಮ್ ಆಗುತ್ತಿದ್ದಂತೆ ಅಲ್ಲಿ ನಿಜಕ್ಕೂ ಏನಾಗಿದೆ ಎಂಬುದು ತಿಳಿಯುತ್ತದೆ. ಕಾಲು ಕೋಳಿ ಕಾಲಲ್ಲ.. ಬದಲಿಗೆ ಅವರು ಧರಿಸಿದ ಸಾಕ್ಸ್​ ಇರುವುದೇ ಹಾಗೆ. ಕಪ್ಪುಬಣ್ಣದ ಸಾಕ್ಸ್​ ಮೇಲೆ ಹಳದಿ ಬಣ್ಣದಲ್ಲಿ ಕೋಳಿ ಕಾಲನ್ನು ಚಿತ್ರಿಸಲಾಗಿದೆ ಎಂಬುದು ಅರಿವಾಗುತ್ತದೆ. ವಿಡಿಯೋವನ್ನು ತುಂಬ ಜನರು ಶೇರ್​ ಮಾಡಿಕೊಳ್ಳುತ್ತಿದ್ದು, ಕ್ರಿಯೇಟಿವಿಟಿ ನೋಡಿ ಖುಷಿಯನ್ನೂ ವ್ಯಕ್ತಪಡಿಸುತ್ತಿದ್ದಾರೆ.

ಮೊದಲು ಈ ವಿಡಿಯೋವನ್ನು @TheoShantonas ಎಂಬುವರು ಶೇರ್ ಮಾಡಿಕೊಂಡಿದ್ದು, ಜಿಮ್​​ನಲ್ಲಿ ಚಿಕನ್​ ಲೆಗ್​ ಡೇ ಇದೆ.. ನಾನದನ್ನು ಖರೀದಿಸಲು ಹೋಗುತ್ತಿದ್ದೇನೆ ಎಂದು ಫನ್ನಿಯಾಗಿ ಕ್ಯಾಪ್ಷನ್​ ಬರೆದುಕೊಂಡಿದ್ದಾರೆ. ವಿಡಿಯೋ ಮಾರ್ಚ್​ 24ರಂದು ಪೋಸ್ಟ್​ ಆಗಿದ್ದು, ಇಲ್ಲಿಯವರೆಗೆ 19 ಸಾವಿರಕ್ಕೂ ಅಧಿಕ ವೀವ್ಸ್​ ಪಡೆದಿದೆ.

ಇದನ್ನೂ ಓದಿ: ಬುರ್ಖಾ ಒಂದು ಅನಿಷ್ಠ, ಕೆಟ್ಟ ಪದ್ಧತಿ.. ಖಂಡಿತ ನಾವದನ್ನು ನಿಷೇಧ ಮಾಡುತ್ತೇವೆ ಎಂದ ಉತ್ತರಪ್ರದೇಶ ಸಚಿವ

ಫಿಶ್​​ಕರಿಯಲ್ಲಿ ಥಾಲಿಯಂ ವಿಷ ಹಾಕಿ ಪತ್ನಿ, ಆಕೆಯ ಇಡೀ ಕುಟುಂಬಕ್ಕೆ ಉಣಿಸಿದ ಉದ್ಯಮಿ; ಅತ್ತೆ, ನಾದಿನಿ ಸಾವು..ಮಾವನಿಂದಲೇ ಹೊರಬಿತ್ತು ಸತ್ಯ

Published On - 7:26 pm, Thu, 25 March 21