ಬುರ್ಖಾ ಒಂದು ಅನಿಷ್ಠ, ಕೆಟ್ಟ ಪದ್ಧತಿ.. ಖಂಡಿತ ನಾವದನ್ನು ನಿಷೇಧ ಮಾಡುತ್ತೇವೆ ಎಂದ ಉತ್ತರಪ್ರದೇಶ ಸಚಿವ

ಇಂದು ಬುರ್ಖಾ ಬಗ್ಗೆ ಮಾತನಾಡಿದ ಶುಕ್ಲಾ ಇತ್ತೀಚೆಗಷ್ಟೇ, ಮುಸ್ಲಿಮರು ಮಸೀದಿಗಳಲ್ಲಿ ನಮಾಜ್​ ಮಾಡುವಾಗ ಧ್ವನಿ ವರ್ಧಕ ಬಳಕೆ ಮಾಡುತ್ತಿರುವುದರಿಂದ ತೊಂದರೆಯಾಗುತ್ತದೆ ಎಂದು ಸ್ಥಳೀಯ ಜಿಲ್ಲಾಧಿಕಾರಿಗೆ ದೂರು ನೀಡಿದ್ದರು.

ಬುರ್ಖಾ ಒಂದು ಅನಿಷ್ಠ, ಕೆಟ್ಟ ಪದ್ಧತಿ.. ಖಂಡಿತ ನಾವದನ್ನು ನಿಷೇಧ ಮಾಡುತ್ತೇವೆ ಎಂದ ಉತ್ತರಪ್ರದೇಶ ಸಚಿವ
ಆನಂದ್​ ಸ್ವರೂಪ್ ಶುಕ್ಲಾ
Follow us
Lakshmi Hegde
|

Updated on:Mar 25, 2021 | 6:52 PM

ವಾರಾಣಸಿ: ಮುಸ್ಲಿಂ ಮಹಿಳೆಯರು ಧರಿಸುವ ಬುರ್ಕಾ ಬಗ್ಗೆ ಈಗಾಗಲೇ ಹಲವರು ಮಾತನಾಡಿ, ವಿವಾದ ಸೃಷ್ಟಿಸಿದ್ದಾರೆ. ಅವರ ಸಾಲಿಗೆ ಇದೀಗ ಉತ್ತರ ಪ್ರದೇಶ ಸಂಸದೀಯ ವ್ಯವಹಾರಗಳ ಸಚಿವ ಆನಂದ್​ ಸ್ವರೂಪ್​ ಶುಕ್ಲಾ ಸೇರಿದ್ದಾರೆ. ಬುರ್ಖಾ ಧರಿಸುವ ಪದ್ಧತಿಯನ್ನು ಕೆಟ್ಟ ಹಾಗೂ ಅಮಾನವೀಯ ಎಂದು ಕರೆದಿದ್ದಾರೆ. ಮುಸ್ಲಿಂ ಮಹಿಳೆಯರ ಮೇಲೆ ಬುರ್ಕಾ ಎಂಬ ಅಮಾನವೀಯ, ಪಾಪಕರ ಪದ್ಧತಿಯನ್ನು ಹೇರಲಾಗುತ್ತಿದೆ. ಇದನ್ನು ಹಲವು ರಾಷ್ಟ್ರಗಳು ಈಗಾಗಲೇ ನಿಷೇಧಿಸಿವೆ. ನಾವು ನಮ್ಮ ದೇಶದಲ್ಲಿ ತ್ರಿವಳಿ ತಲಾಖ್​ ಅನಿಷ್ಠ ಪದ್ಧತಿಯನ್ನು ತೆಗೆದುಹಾಕಿದಂತೆ ಖಂಡಿತ ಬುರ್ಖಾವನ್ನೂ ನಿಷೇಧ ಮಾಡುತ್ತೇವೆ ಎಂದಿದ್ದಾರೆ.

ನಮಾಜ್ ಬಗ್ಗೆಯೂ ಕ್ಯಾತೆ ತೆಗೆದಿದ್ದರು ಇಂದು ಬುರ್ಖಾ ಬಗ್ಗೆ ಮಾತನಾಡಿದ ಶುಕ್ಲಾ ಇತ್ತೀಚೆಗಷ್ಟೇ, ಮುಸ್ಲಿಮರು ಮಸೀದಿಗಳಲ್ಲಿ ನಮಾಜ್​ ಮಾಡುವಾಗ ಧ್ವನಿ ವರ್ಧಕ ಬಳಕೆ ಮಾಡುತ್ತಿರುವುದರಿಂದ ತೊಂದರೆಯಾಗುತ್ತದೆ ಎಂದು ಸ್ಥಳೀಯ ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ಬಲ್ಲಿಯಾದಲ್ಲಿರುವ ಮದೀನಾ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುವಾಗ ಧ್ವನಿ ವರ್ಧಕ ಬಳಸುತ್ತಾರೆ. ದಿನಕ್ಕೆ 5ಬಾರಿ ನಮಾಜ್​ ಮಾಡುತ್ತಾರೆ. ಅಷ್ಟೂ ಬಾರಿಯೂ ಮೈಕ್​​ ಬಳಕೆ ಮಾಡುತ್ತಾರೆ. ಇದರಿಂದ ನನ್ನ ಕೆಲಸಕ್ಕೆ ತೊಂದರೆಯಾಗುತ್ತದೆ. ಯೋಗ, ಧ್ಯಾನ, ಪೂಜೆ, ಕಚೇರಿಗೆ ಸಂಬಂಧಪಟ್ಟ ಕೆಲಸಗಳನ್ನು ಮಾಡಲು ತೊಂದರೆಯಾಗುತ್ತದೆ. ಬರೀ ನನಗಷ್ಟೇ ಅಲ್ಲ, ಸಮೀಪ ಇರುವ ಉಳಿದ ಮನೆಯವರಿಗೆ, ಶಿಕ್ಷಣ ಸಂಸ್ಥೆಗಳಿಗೂ ಇದು ಸಮಸ್ಯೆ. ಇದರಿಂದ ಮಕ್ಕಳ ಆರೋಗ್ಯದ ಮೇಲೆ ಕೂಡ ಪ್ರಭಾವ ಬೀರುತ್ತಿದೆ. ಹಾಗಾಗಿ ಈ ಶಬ್ದವನ್ನು ತಗ್ಗಿಸಬೇಕು. ಧ್ವನಿ ವರ್ಧಕಗಳ ಪ್ರಮಾಣ ಕಡಿಮೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ತಿಳಿಸಿದ್ದರು.

ಇದನ್ನೂ ಓದಿ:  ‘ಸೂಪರ್ ಕಾಪ್‘ ಆಗಲು ನಾನೇ ಮುಕೇಶ್ ಅಂಬಾನಿ ಮನೆ ಮುಂದೆ ಸ್ಫೋಟಕ ಇಟ್ಟಿದ್ದೆ; ತಪ್ಪೊಪ್ಪಿಗೆ ಹೇಳಿಕೆ ನೀಡಿದ ಸಚಿನ್ ವಾಜೆ

ಉಪಸಮರಕ್ಕೆ ಸಜ್ಜಾದ ‘ಕೈ’ ಪಡೆ: ಕಾಂಗ್ರೆಸ್​ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆಗೆ ಮುಹೂರ್ತ ಫಿಕ್ಸ್

Published On - 6:49 pm, Thu, 25 March 21