ಕಸ ತೆಗೆಯುತ್ತಿದ್ದಾಗ ಕಂತೆಕಂತೆ ನೋಟು ಕಂಡು ಕಂಗಾಲಾದ ಪೌರಕಾರ್ಮಿಕರು; ಸ್ಥಳಕ್ಕೆ ಓಡೋಡಿ ಬಂದ ಪೊಲೀಸರು ಬಿದ್ದುಬಿದ್ದು ನಕ್ಕರು !
ಕೆಲಸಗಾರರ ಮಾತು ಕೇಳಿ ಅಧಿಕಾರಿ ಕೂಡ ಲಘುಬಗೆಯಿಂದಲೇ ಸ್ಥಳಕ್ಕೆ ಆಗಮಿಸಿದರು. ಅಲ್ಲಿ ಇದ್ದ ಸುಮಾರು 30 ಕಂತೆ ಹಣವನ್ನು ನೋಡಿದ ಅವರು ಪೊಲೀಸರಿಗೆ ಕರೆ ಮಾಡಿದರು. ಸ್ಥಳಕ್ಕೆ ಬಂದ ಪೊಲೀಸರು ಸಹ ಹಣವನ್ನು ಪರಿಶೀಲಿಸಿದ್ದಾರೆ.
ಗುಂಟೂರು: ಎಂದಿನಂತೆ ಬೆಳಗ್ಗೆ ಸ್ವಚ್ಛತಾ ಕೆಲಸಕ್ಕೆ ಹೋದ ಪೌರ ಕಾರ್ಮಿಕರು ಕಂತೆಕಂತೆ ನೋಟನ್ನು ನೋಡಿ ಶಾಕ್ಗೆ ಒಳಗಾದ ಘಟನೆ ಆಂಧ್ರಪ್ರದೇಶದ ಗುಂಟೂರಿನಲ್ಲಿ ನಡೆದಿದೆ. ಸೋಮವಾರ ಬೆಳಗ್ಗೆ ಎಸ್ಬಿಐ ಶಾಖೆ ಬಳಿ ಕಸ ತೆಗೆಯುತ್ತಿದ್ದ ಪೌರ ಕಾರ್ಮಿಕರಿಗೆ 2,000, 500 ಮತ್ತು 200 ರೂಪಾಯಿಯ ಪ್ರತ್ಯೇಕ ಕಂತೆಗಳು ಮೊದಲು ಸಿಕ್ಕಿವೆ. ತ್ಯಾಜ್ಯಗಳನ್ನು ತೆಗೆಯುತ್ತ ಹೋದಂತೆ 500 ರೂ.ನ ಮತ್ತಷ್ಟು ಬಂಡಲ್ಗಳು ಪತ್ತೆಯಾಗಿವೆ. ಇಷ್ಟು ಪ್ರಮಾಣದ ಹಣ ನೋಡಿ ಅವರು ಅಕ್ಷರಶಃ ಕಂಗಾಲಾಗಿ ತಮ್ಮ ಮೇಲಧಿಕಾರಿಗೆ ಕರೆ ಮಾಡಿದ್ದಾರೆ.
ಕೆಲಸಗಾರರ ಮಾತು ಕೇಳಿ ಅಧಿಕಾರಿ ಕೂಡ ಲಘುಬಗೆಯಿಂದಲೇ ಸ್ಥಳಕ್ಕೆ ಆಗಮಿಸಿದರು. ಅಲ್ಲಿ ಇದ್ದ ಸುಮಾರು 30 ಕಂತೆ ಹಣವನ್ನು ನೋಡಿದ ಅವರು ಪೊಲೀಸರಿಗೆ ಕರೆ ಮಾಡಿದರು. ಸ್ಥಳಕ್ಕೆ ಬಂದ ಪೊಲೀಸರು ಸಹ ಹಣವನ್ನು ಪರಿಶೀಲಿಸಿದ್ದಾರೆ. ಆದರೆ ಅಷ್ಟಾದ ಮೇಲೆ ದೊಡ್ಡದಾಗಿ ನಗಲು ಪ್ರಾರಂಭಿಸಿದರು. ಬಿದ್ದುಬಿದ್ದು ನಕ್ಕರು. ಕಾರಣ ಆ ನೋಟುಗಳ ಮೇಲೆ ಫಾರ್ ಸ್ಕೂಲ್ ಝೋನ್ ಓನ್ಲಿ( ಶಾಲಾ ವಲಯಕ್ಕೆ ಮಾತ್ರ), Children’s Bank of India ಎಂದು ಬರೆದುಕೊಂಡಿತ್ತು. ಅವೆಲ್ಲವೂ ಡಮ್ಮಿ ನೋಟುಗಳು ಎಂದು ಸಾಬೀತಾಗಿತ್ತು. ಪೊಲೀಸರಿಂದ ವಿಷಯ ತಿಳಿದ ಪೌರಕಾರ್ಮಿಕರೂ ಕೂಡ ಬಿದ್ದುಬಿದ್ದು ನಗತೊಡಗಿದರು. ಮತ್ತೆ ಅದನ್ನೆಲ್ಲ ಕಸಕ್ಕೆ ಸೇರಿ, ತೆಗೆದುಕೊಂಡು ಹೋದರು.
ಇದನ್ನೂ ಓದಿ: HD Deve Gowda Covid 19: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹಾಗೂ ಚನ್ನಮ್ಮಗೆ ಕೊರೊನಾ ಸೋಂಕು
Rakshita Prem: ‘ನಿಮ್ಮಂತಹ ಸ್ನೇಹಿತರು ಒಮ್ಮೆ ಮಾತ್ರ ಬರುತ್ತಾರೆ’: ರಕ್ಷಿತಾ ಜನ್ಮದಿನಕ್ಕೆ ದರ್ಶನ್ ವಿಶೇಷ ಮಾತು!