AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೇಜಾವರು ಶ್ರೀಗಳು ನಡೆದು ಬಂದ ಹಾದಿ

ಉಡುಪಿ: ಅಷ್ಟಮಠಗಳಲ್ಲಿ ಒಂದಾದ ಪೇಜಾವರ ಮಠದ ಮುಖ್ಯಸ್ಥರಾಗಿದ್ದ ವಿಶ್ವೇಶತೀರ್ಥ ಶ್ರೀಗಳು(88) ಇಂದು ಇಹಲೋಕ ತ್ಯಜಿಸಿದ್ದಾರೆ. ಪೇಜಾವರು ಶ್ರೀಗಳು ನಡೆದು ಬಂದ ಹಾದಿಯ ಬಗ್ಗೆ ಮಾಹಿತಿ ಇಲ್ಲಿದೆ. 1931ರಲ್ಲಿ ರಾಮಕುಂಜದಲ್ಲಿ ಜನನ: 1931ರ ಏಪ್ರಿಲ್ 27ರಂದು ಉಡುಪಿಯಿಂದ 120 ಕಿ.ಮೀ ದೂರದ ಸುಬ್ರಹ್ಮಣ್ಯ ಬಳಿಯ ರಾಮಕುಂಜ ಗ್ರಾಮದಲ್ಲಿ ಪೇಜಾವರ ಶ್ರೀಗಳು ಜನಿಸಿದ್ದರು. ನಾರಾಯಣಾಚಾರ್ಯ, ಕಮಲಮ್ಮ ದಂಪತಿಯ 2ನೇ ಪುತ್ರರಾಗಿದ್ದ ಇವರ ಪೂರ್ವಾಶ್ರಮದ ಹೆಸರು ವೆಂಕಟರಮಣ. ರಾಮಕುಂಜದ ಹಳ್ಳಿಯ ಸಂಸ್ಕೃತ ಎಲಿಮೆಂಟರಿ ಶಾಲೆಯಲ್ಲೇ ಪ್ರಾಥಮಿಕ ಶಿಕ್ಷಣ ಮುಗಿಸಿದರು. ಪೇಜಾವರ ಮಠದಲ್ಲಿ […]

ಪೇಜಾವರು ಶ್ರೀಗಳು ನಡೆದು ಬಂದ ಹಾದಿ
ಸಾಧು ಶ್ರೀನಾಥ್​
|

Updated on: Dec 29, 2019 | 11:24 AM

Share

ಉಡುಪಿ: ಅಷ್ಟಮಠಗಳಲ್ಲಿ ಒಂದಾದ ಪೇಜಾವರ ಮಠದ ಮುಖ್ಯಸ್ಥರಾಗಿದ್ದ ವಿಶ್ವೇಶತೀರ್ಥ ಶ್ರೀಗಳು(88) ಇಂದು ಇಹಲೋಕ ತ್ಯಜಿಸಿದ್ದಾರೆ. ಪೇಜಾವರು ಶ್ರೀಗಳು ನಡೆದು ಬಂದ ಹಾದಿಯ ಬಗ್ಗೆ ಮಾಹಿತಿ ಇಲ್ಲಿದೆ.

1931ರಲ್ಲಿ ರಾಮಕುಂಜದಲ್ಲಿ ಜನನ: 1931ರ ಏಪ್ರಿಲ್ 27ರಂದು ಉಡುಪಿಯಿಂದ 120 ಕಿ.ಮೀ ದೂರದ ಸುಬ್ರಹ್ಮಣ್ಯ ಬಳಿಯ ರಾಮಕುಂಜ ಗ್ರಾಮದಲ್ಲಿ ಪೇಜಾವರ ಶ್ರೀಗಳು ಜನಿಸಿದ್ದರು. ನಾರಾಯಣಾಚಾರ್ಯ, ಕಮಲಮ್ಮ ದಂಪತಿಯ 2ನೇ ಪುತ್ರರಾಗಿದ್ದ ಇವರ ಪೂರ್ವಾಶ್ರಮದ ಹೆಸರು ವೆಂಕಟರಮಣ. ರಾಮಕುಂಜದ ಹಳ್ಳಿಯ ಸಂಸ್ಕೃತ ಎಲಿಮೆಂಟರಿ ಶಾಲೆಯಲ್ಲೇ ಪ್ರಾಥಮಿಕ ಶಿಕ್ಷಣ ಮುಗಿಸಿದರು.

ಪೇಜಾವರ ಮಠದಲ್ಲಿ ಪರ್ಯಾಯ: ಉಪನಯನಕ್ಕೂ ಮುಂಚೆ ಪೋಷಕರು ವೆಂಕಟರಮಣರನ್ನ ಉಡುಪಿಗೆ ಕರೆತಂದಿದ್ದರು. ಬಾಲಕ ವೆಂಕಟರಮಣ ಬಂದ ವೇಳೆ ಪೇಜಾವರ ಮಠದಲ್ಲಿ ಪರ್ಯಾಯ ನಡೆಯುತ್ತಿತ್ತು. ಬಾಲಕ ವೆಂಕಟರಮಣ ಮಠದ ಸ್ವಾಮೀಜಿ ಕೃಷ್ಣ ಪೂಜೆ ಮಾಡುವುದನ್ನು ಗಮನಿಸಿದ ಸ್ವಾಮೀಜಿಯನ್ನು ನಾನು ಹೀಗೆ ಕೃಷ್ಣನನ್ನು ಪೂಜಿಸಬಹುದೆ ಎಂದು ಕೇಳಿದರು. ಪೋಷಕರು ವೆಂಕಟರಮಣನನ್ನು ಸ್ವಾಮಿಗಳ ಭೇಟಿಗೆ ಕರೆದುಕೊಂಡು ಹೋದರು. ಬಾಲಕ ವೆಂಕಟರಮಣ ಭಕ್ತಿಯಿಂದ ಮಠದ ಸ್ವಾಮಿಗಳಿಗೆ ನಮಸ್ಕರಿಸಿದರು. ಈ ವೇಳೆ ಬಾಲಕ ವೆಂಕಟರಮಣನ ಮುಗ್ಧ ಮುಖ, ಭಕ್ತಿ ಭಾವ, ಚುರುಕುತನವನ್ನು ಸ್ವಾಮೀಜಿ ಗಮನಿಸಿದರು. ಸ್ವಾಮಿಗಳಿಗೆ ಆಕಸ್ಮಿಕವಾಗಿ ನೀನು ನನ್ನಂತೆ ಸ್ವಾಮಿಯಾಗುತ್ತೀಯಾ ಎಂದಿದ್ದರು. ಆಗ ಬಾಲಕ ವೆಂಕಟರಮಣ ಸ್ವಲ್ಪವೂ ತಡಮಾಡದೇ ಹೌದು ಎಂದು ಉತ್ತರಿಸಿದರಂತೆ.

ಉಡುಪಿ ಮಠದಲ್ಲಿ ಕೈಗೊಂಡಿದ್ದ ಪರ್ಯಾಯದ ಅವಧಿ ಮುಗಿಯಿತು. ಆಗಿನ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಮಾನ್ಯ ತೀರ್ಥರು ಸಂಚಾರಕ್ಕೆ ಹೊರಟರು. ಶ್ರೀ ವಿಶ್ವಮಾನ್ಯ ತೀರ್ಥರು ಪಯಣದ ಹಾದಿಯಲ್ಲಿ ಹಂಪಿ ತಲುಪಿದರು. ವ್ಯಾಸತೀರ್ಥರ ತಪೋಭೂಮಿಯಾದ ಹಂಪಿಯಲ್ಲಿ ಶ್ರೀಗಳ ನಿರ್ಧಾರ ಗಟ್ಟಿಗೊಂಡಿತು. ಶ್ರೀ ವಿಶ್ವಮಾನ್ಯ ತೀರ್ಥರು ವೆಂಕಟರಮಣನನ್ನು ಹಂಪಿಗೆ ಕರೆಸಿಕೊಂಡರು. ಕರೆ ಬಂದ ಕೂಡಲೇ ವೆಂಕಟರಮಣ ಹಿರಿಯರ ಜತೆ ಹಂಪಿಗೆ ತೆರಳಿದರು.

1938ರಲ್ಲಿ ಶ್ರೀಗಳಿಗೆ ದೀಕ್ಷೆ: 1938ರ ಡಿಸೆಂಬರ್ 3ರಂದು ಬಹುಧಾನ್ಯ ಸಂವತ್ಸರದ ಮಾರ್ಗಶಿರ ಶುದ್ಧ ಪಂಚಮಿಯಂದು ಹಂಪಿಯ ಯಂತ್ರೋದ್ಧಾರ ಮುಖ್ಯಪ್ರಾಣ ಸನ್ನಿಧಿಯಲ್ಲಿ ಶ್ರೀಗಳಿಗೆ ದೀಕ್ಷೆ ನಡೆಯಿತು. ಅಧೋಕ್ಷಜ ತೀರ್ಥರ ಸಂಸ್ಥಾನದ ಉತ್ತರಾಧಿಕಾರಿಯಾದ್ರು. ಪೇಜಾವರ ಮಠದ ಪರಂಪರೆಯ 32ನೇ ಯತಿಯಾಗಿ ಶ್ರೀಗಳು ಆಚಾರ್ಯ ಮಧ್ವರ ವೇದಾಂತ ಪೀಠವನ್ನೇರಿದ್ದರು. ಶ್ರೀ ವಿದ್ಯಾಮಾನ್ಯ ತೀರ್ಥರ ಬಳಿ ಶ್ರೀಗಳ ಹೆಚ್ಚಿನ ವ್ಯಾಸಂಗ ಮಾಡಿದ್ದರು. ಬಳಿಕ ಭಂಡಾರಕೇರಿಯ ಗುರುಕುಲದಲ್ಲಿ ಅಧ್ಯಯನ ನಡೆಸಿದರು. 1952ರ ಜ.18ರಂದು ಮೊದಲ ಪಱಯ ಪೀಠಾರೋಹಣ ಮತ್ತು 1956 ಜುಲೈ 28ರಂದು ಪೂರ್ಣಪ್ರಜ್ಞ ವಿದ್ಯಾಪೀಠ ಸ್ಥಾಪನೆ ಮಾಡಿದ್ದರು.