ಬೆಳಗಾವಿ: ಇಂದು. 3 ಮಹಾನಗರ ಪಾಲಿಕೆಗಳಿಗೆ ಮತದಾನ ಆರಂಭವಾಗಿದ್ದು ಬೆಳಗಾವಿ ಮಹಾನಗರ ಪಾಲಿಕೆ, ಕಲಬುರಗಿ ಮಹಾನಗರ ಪಾಲಿಕೆ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ಮತದಾನ ಶುರುವಾಗಿದೆ. ಅಭಿಮಾನಿಗಳು, ನಾಯಕರು ಮತಕಟ್ಟೆಗೆ ಪೂಜೆ ಸಲ್ಲಿಸಿ ಕೆಲವು ಕಡೆ ಮತದಾನ ಶುರು ಮಾಡಿದ್ದಾರೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. ಕೊವಿಡ್ ಮಾರ್ಗಸೂಚಿ ಪಾಲಿಸಿ ಪಾಲಿಕೆಗಳ ಚುನಾವಣೆ ನಡೆಯುತ್ತಿದೆ. ಸೆಪ್ಟೆಂಬರ್ 6ರಂದು ಪಾಲಿಕೆ ಚುನಾವಣೆ ಫಲಿತಾಂಶ ಪ್ರಕಟಗೊಳ್ಳಲಿದೆ. ಈ ಪಾಲಿಕೆ ಚುನಾವಣಾ ಜಿದ್ದಾಜಿದ್ದಿನಲ್ಲಿ ಯಾವ ಪಕ್ಷ ಗೆಲ್ಲುತ್ತದೆ ಕಾದು ನೋಡಬೇಕಿದೆ.
ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ
ಬೆಳಗಾವಿ ಪಾಲಿಕೆಯ 58 ವಾರ್ಡ್‌ಗಳಿಗೆ ಚುನಾವಣೆ ನಡೆಯುತ್ತಿದೆ. ಪಾಲಿಕೆ ಚುನಾವಣಾ ಕಣದಲ್ಲಿ 385 ಅಭ್ಯರ್ಥಿಗಳಿದ್ದಾರೆ. ಇಂದು 4,28,364 ಮತದಾರರು ಮತ ಚಲಾಯಿಸಲಿದ್ದಾರೆ. ಮತದಾನಕ್ಕಾಗಿ ಒಟ್ಟು 415 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 162 ಸೂಕ್ಷ್ಮ, 42 ಅತಿ ಸೂಕ್ಷ್ಮ ಮತಗಟ್ಟೆಗಳಿವೆ. ಚುನಾವಣೆ ಕರ್ತವ್ಯಕ್ಕೆ 1,828 ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು 58 ವಾರ್ಡ್‌ಗಳ ಪೈಕಿ 55ರಲ್ಲಿ ಬಿಜೆಪಿ, 45ರಲ್ಲಿ ಕಾಂಗ್ರೆಸ್, 11 ವಾರ್ಡ್‌ಗಳಲ್ಲಿ ಜೆಡಿಎಸ್, 21ರಲ್ಲಿ ಎಂಇಎಸ್, 27 ವಾರ್ಡ್‌ಗಳಲ್ಲಿ ಎಎಪಿ ಅಭ್ಯರ್ಥಿಗಳು ಸ್ಪರ್ಧೆ ನಡೆಸುತ್ತಿದ್ದಾರೆ.
ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ
ಕಲಬುರಗಿ ಪಾಲಿಕೆಯ 55 ವಾರ್ಡ್‌ಗಳಿಗೆ ಚುನಾವಣೆ ನಡೆಯುತ್ತಿದೆ. ಪಾಲಿಕೆ ಚುನಾವಣಾ ಕಣದಲ್ಲಿ 300 ಅಭ್ಯರ್ಥಿಗಳಿದ್ದಾರೆ. ಇಂದು 5,19,464 ಮತದಾರರು ಮತ ಚಲಾಯಿಸಲಿದ್ದಾರೆ. 55 ವಾರ್ಡ್‌ಗಳ ಪೈಕಿ 47ರಲ್ಲಿ ಬಿಜೆಪಿ, 55ರಲ್ಲಿ ಕಾಂಗ್ರೆಸ್, 45 ವಾರ್ಡ್‌ಗಳಲ್ಲಿ ಜೆಡಿಎಸ್, 20ರಲ್ಲಿ ಎಐಎಂಐಎಂ, 26 ವಾರ್ಡ್‌ಗಳಲ್ಲಿ ಎಎಪಿ ಅಭ್ಯರ್ಥಿಗಳು ಸ್ಪರ್ಧೆ ನಡೆಸುತ್ತಿದ್ದಾರೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ
ಹುಬ್ಬಳ್ಳಿ-ಧಾರವಾಡ ಪಾಲಿಕೆಯ 82 ವಾರ್ಡ್‌ಗಳಿಗೆ ಚುನಾವಣೆ ನಡೆಯುತ್ತಿದ್ದು ಪಾಲಿಕೆ ಚುನಾವಣಾ ಕಣದಲ್ಲಿ 420 ಅಭ್ಯರ್ಥಿಗಳಿದ್ದಾರೆ. ಇಂದು 8,11,632 ಮತದಾರರು ಮತ ಚಲಾಯಿಸಲಿದ್ದಾರೆ. 82 ವಾರ್ಡ್‌ಗಳ ಪೈಕಿ 82ರಲ್ಲಿ ಬಿಜೆಪಿ, 65ರಲ್ಲಿ ಕಾಂಗ್ರೆಸ್, 49 ವಾರ್ಡ್‌ಗಳಲ್ಲಿ ಜೆಡಿಎಸ್, 11ರಲ್ಲಿ ಎಐಎಂಐಎಂ, 41 ವಾರ್ಡ್‌ಗಳಲ್ಲಿ ಎಎಪಿ ಅಭ್ಯರ್ಥಿಗಳು, 122 ವಾರ್ಡ್‌ಗಳಲ್ಲಿ ಪಕ್ಷೇತರ ಅಭ್ಯರ್ಥಿಗಳ ಸ್ಪರ್ಧೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Petrol Price Today: ಇಂದು ನಿಮ್ಮೂರಿನಲ್ಲಿ ಪೆಟ್ರೋಲ್, ಡೀಸೆಲ್ ರೇಟ್ ಎಷ್ಟಿದೆ ಗೊತ್ತಾ?
Published On - 7:28 am, Fri, 3 September 21