ಮತ್ತೆ ಹಳದಿ ಬಣ್ಣಕ್ಕೆ ತಿರುಗಿದ ವೃಷಭಾವತಿ ನದಿ ನೀರು!

|

Updated on: Sep 23, 2019 | 5:05 PM

ಬೆಂಗಳೂರು: ರಾಜ್ಯ ರಾಜಾಧಾನಿ ಬೆಂಗಳೂರಿನಲ್ಲಿ ಹರಿಯುವ ಏಕೈಕ ನದಿಯೆಂದರೆ ವೃಷಭಾವತಿ ನದಿ. ಈ ಹಿಂದೆ ವೃಷಭಾವತಿ ನೀರನ್ನೇ ಬೆಂಗಳೂರಿನ ಜನ ಬಳಸುತ್ತಿದ್ದರು. ಸಾವಿರಾರು ರೈತರಿಗೆ ಈ ನದಿ ವರದಾನವಾಗಿತ್ತು. ಆದ್ರೆ ದಿನದಿಂದ ದಿನಕ್ಕೆ ಬೆಂಗಳೂರಿನಲ್ಲಿ ಕಾರ್ಖಾನೆಗಳು ಹೆಚ್ಚಾದ ಕಾರಣ ನೀರಿನ ಬಣ್ಣವೇ ಬದಲಾಗಿದೆ. ನದಿಯಲ್ಲಿ ಕೊಳಚೆ ನೀರು ಹರಿಯುತ್ತಿರುವ ಕಾರಣ ವೃಷಭಾವತಿ ನದಿ ಉಳಿವಿಗಾಗಿ ಇತ್ತೀಚಿನ ದಿನಗಳಲ್ಲಿ ಹಲವು ಆಂದೋಲನಗಳನ್ನು ಹಮ್ಮಿಕೊಳ್ಳಲಾಗಿತ್ತು. ಆದ್ರೆ, ಇದೀಗ ಮತ್ತೆ ವೃಷಭಾವತಿ ನದಿ ನೀರು ಹಳದಿ ಬಣ್ಣದಲ್ಲಿ ಹರಿಯುತ್ತಿದೆ. ಇದರಿಂದ ವೃಷಭಾವತಿ […]

ಮತ್ತೆ ಹಳದಿ ಬಣ್ಣಕ್ಕೆ ತಿರುಗಿದ ವೃಷಭಾವತಿ ನದಿ ನೀರು!
Follow us on

ಬೆಂಗಳೂರು: ರಾಜ್ಯ ರಾಜಾಧಾನಿ ಬೆಂಗಳೂರಿನಲ್ಲಿ ಹರಿಯುವ ಏಕೈಕ ನದಿಯೆಂದರೆ ವೃಷಭಾವತಿ ನದಿ. ಈ ಹಿಂದೆ ವೃಷಭಾವತಿ ನೀರನ್ನೇ ಬೆಂಗಳೂರಿನ ಜನ ಬಳಸುತ್ತಿದ್ದರು. ಸಾವಿರಾರು ರೈತರಿಗೆ ಈ ನದಿ ವರದಾನವಾಗಿತ್ತು. ಆದ್ರೆ ದಿನದಿಂದ ದಿನಕ್ಕೆ ಬೆಂಗಳೂರಿನಲ್ಲಿ ಕಾರ್ಖಾನೆಗಳು ಹೆಚ್ಚಾದ ಕಾರಣ ನೀರಿನ ಬಣ್ಣವೇ ಬದಲಾಗಿದೆ. ನದಿಯಲ್ಲಿ ಕೊಳಚೆ ನೀರು ಹರಿಯುತ್ತಿರುವ ಕಾರಣ ವೃಷಭಾವತಿ ನದಿ ಉಳಿವಿಗಾಗಿ ಇತ್ತೀಚಿನ ದಿನಗಳಲ್ಲಿ ಹಲವು ಆಂದೋಲನಗಳನ್ನು ಹಮ್ಮಿಕೊಳ್ಳಲಾಗಿತ್ತು.

ಆದ್ರೆ, ಇದೀಗ ಮತ್ತೆ ವೃಷಭಾವತಿ ನದಿ ನೀರು ಹಳದಿ ಬಣ್ಣದಲ್ಲಿ ಹರಿಯುತ್ತಿದೆ. ಇದರಿಂದ ವೃಷಭಾವತಿ ನದಿ ಪಾತ್ರದ ಗ್ರಾಮಗಳ ಜನರಲ್ಲಿ ಆತಂಕ ಉಂಟಾಗಿದೆ. ಇಷ್ಟು ದಿನಗಳವರೆಗೆ ಕಪ್ಪು ಬಣ್ಣದಲ್ಲಿ ಹರಿಯುತ್ತಿದ್ದ ನೀರು, ಇದೀಗ ಹಳದಿ ಬಣ್ಣದಲ್ಲಿ ಹರಿಯುತ್ತಿದೆ. ಇದಕ್ಕೆ ಪ್ರಮುಖ ಕಾರಣ ನದಿ ಪಾತ್ರದ ಕಾರ್ಖಾನೆಗಳ ರಾಸಾಯನಿಕ ಮಿಶ್ರಿತ ನೀರು. ಬೆಂಗಳೂರು ಹೊರವಲಯದ ಅಂಚೆಪಾಳ್ಯ, ಕುಂಬಳಗೋಡು ಸಮೀಪದ ಕಾರ್ಖಾನೆಗಳು ರಾಸಾಯನಿಕ ಮಿಶ್ರಿತ ನೀರನ್ನು ನದಿಗೆ ಬಿಡುತ್ತಿವೆ.

ವೃಷಭಾವತಿ ನದಿ ಪುನಶ್ಚೇತನಕ್ಕೆ ಇತ್ತೀಚೆಗಷ್ಟೇ ಮ್ಯಾರಥಾನ್ ಆಯೋಜಿಸಲಾಗಿತ್ತು. ಈ ಮೂಲಕ ವೃಷಭಾವತಿ ನದಿ ಉಳಿಸುವ ಬಗ್ಗೆ ಅರಿವು ಮೂಡಿಸಲಾಗಿತ್ತು. ಆದ್ರೆ ಇದೀಗ ಮತ್ತೆ ನದಿಗೆ ಕಾರ್ಖಾನೆಗಳು ರಾಸಾಯನಿಕ ಮಿಶ್ರಿತ ನೀರನ್ನು ಬಿಟ್ಟಿವೆ.

Published On - 5:03 pm, Mon, 23 September 19