ಬೆಂಗಳೂರು, ಆಗಸ್ಟ್ 09: ನೀರಿನ ದರ (Water bill) ಏರಿಕೆಯಾಗುತ್ತೆ ಅಂತ ಆತಂಕದಲ್ಲಿದ್ದ ಸಿಲಿಕಾನ್ ಸಿಟಿ ಜನರಿಗೆ ಇದೀಗ ಜಲಮಂಡಳಿ (BWSSB) ಗುಡ್ ನ್ಯೂಸ್ ಕೊಡುವುಕ್ಕೆ ಮುಂದಾಗಿದೆ. ಬೆಂಗಳೂರಿನಲ್ಲಿ ಕೋಟಿ ಕೋಟಿ ರೂ ಬಾಕಿ ಇರುವ ಬಿಲ್ ವಸೂಲಿಗೆ ಹೊಸ ಪ್ಲ್ಯಾನ್ ಹುಡುಕಲು ಹೊರಟಿರುವ ಜಲಮಂಡಳಿ, ಬಿಬಿಎಂಪಿ ಹಾಗೂ ಟ್ರಾಫಿಕ್ ಪೊಲೀಸ್ ಇಲಾಖೆಯ ಹಾದಿ ಹಿಡಿದು ಬಿಲ್ ವಸೂಲಿಗೆ ಪ್ಲ್ಯಾನ್ ಮಾಡಿದೆ. ಹಾಗಿದ್ರೆ ಜಲಮಂಡಳಿಯ ಹೊಸ ಪ್ಲ್ಯಾನ್ ಏನು ಎಂಬ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ ಮುಂದೆ ಓದಿ.
ಅಗತ್ಯ ವಸ್ತುಗಳ ದರಗಳ ಏರಿಕೆ ಈಗಾಗಲೇ ಜನ ಸಾಮಾನ್ಯರನ್ನ ಹೈರಾಣಾಗಿಸಿದೆ. ಇದರ ಮಧ್ಯೆ ನೀರಿನ ದರ ಏರಿಕೆ ಕೂಡ ಶೀಘ್ರದಲ್ಲೇ ಆಗಬಹುದು ಅನ್ನೋ ಚರ್ಚೆ ನಗರ ವಾಸಿಗಳನ್ನ ಆತಂಕಕ್ಕೆ ದೂಡಿತ್ತು. ಆದರೆ ಇದೀಗ ಜಲ ಮಂಡಳಿ ನಗರದ ಜನರಿಗೆ ಸಿಹಿ ಸುದ್ದಿ ನೀಡುವ ಪ್ಲ್ಯಾನ್ ಮಾಡ್ತಿದೆ. ನಗರದಲ್ಲಿ ನೀರಿನ ಬಿಲ್ ಬಾಕಿ ಉಳಿಸಿಕೊಂಡಿರುವವರಿಗೆ ಆಫರ್ ನೀಡೋಕೆ ಜಲಮಂಡಳಿ ಮುಂದಾಗಿದ್ದು, ಕೊಟ್ಯಾಂತರ ರೂ. ಬಾಕಿ ಹಣ ವಸೂಲಿ ಜೊತೆಗೆ ಜನರ ಮೇಲಿನ ಸಾಲದ ಹೊರೆಯನ್ನ ಕೂಡ ತಗ್ಗಿಸೋಕೆ ಚಿಂತನೆ ನಡೆಸಿದೆ.
ಇದನ್ನೂ ಓದಿ: ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಬಿಬಿಎಂಪಿಯಿಂದ ಗುಡ್ನ್ಯೂಸ್: ಒಟಿಎಸ್ ಕಾಲಾವಕಾಶ 2 ತಿಂಗಳು ವಿಸ್ತರಣೆ
ಜಲಮಂಡಳಿ ವ್ಯಾಪ್ತಿಯಲ್ಲಿ ಸದ್ಯ ನೀರಿನ ಬಾಕಿ ಪಾವತಿ ಮಾಡದವರ ಸಂಖ್ಯೆ ಏರಿಕೆಯಾಗ್ತಲೇ ಇದೆ. ಅದೆಷ್ಟೇ ಸರ್ಕಸ್ ಮಾಡಿದ್ರು ಜನ ಮಾತ್ರ ನೀರಿನ ಬಾಕಿ ಸಾಲದ ಹಣ ಪಾವತಿಗೆ ಮನಸ್ಸೆ ಮಾಡ್ತಿಲ್ಲ. ಈ ಮಧ್ಯೆ ಬಾಕಿ ವಸೂಲಿಗೆ ಈ ಹಿಂದೆ ಪೊಲೀಸ್ ಇಲಾಖೆ ಹಾಗೂ ಪಾಲಿಕೆ ಅನುಸರಿಸಿದ್ದ ಮಾರ್ಗವನ್ನ ಅನುಸರಿಸೋಕೆ ಜಲಮಂಡಳಿ ಪ್ಲ್ಯಾನ್ ಮಾಡ್ತಿದೆ. ಟ್ರಾಫಿಕ್ ರೂಲ್ಸ್ ಫೈನ್ ಪಾವತಿಗಾಗಿ ಪೊಲೀಸ್ ಇಲಾಖೆ ನೀಡಿದ್ದ 50% ಆಫರ್ ಮತ್ತು ಪಾಲಿಕೆ ತೆರಿಗೆದಾರರಿಗೆ ನೀಡಿದ್ದ ಒನ್ ಟೈಂ ಸೆಟಲ್ ಮೆಂಟ್ ನಂತೆ ತಾನೂ ಕೂಡ ಜನರಿಗೆ ಆಫರ್ ಕೊಡೋ ಮೂಲಕ ತೆರಿಗೆ ವಸೂಲಿಗೆ ಚಿಂತನೆ ನಡೆಸಿದೆ.
ಇದನ್ನೂ ಓದಿ: ಸಹಕಾರ ಸಂಘಗಳ ಕಾಯ್ದೆ ತಿದ್ದುಪಡಿ ಸಂವಿಧಾನಬಾಹಿರ: ಹೈಕೋರ್ಟ್ ಮಹತ್ವದ ತೀರ್ಪು
ಸದ್ಯ ಸರ್ಕಾರಿ, ಖಾಸಗಿ, ಎಲ್ಲಾ ಸೇರಿ ಸುಮಾರು 600 ಕೋಟಿಯಷ್ಟು ಬಾಕಿ ಬಿಲ್ ಜಲಮಂಡಳಿಗೆ ಪಾವತಿಯಾಗಬೇಕಿದೆ. ಸದ್ಯ ಇದರಲ್ಲಿ ಸರ್ಕಾರಿ ಕಚೇರಿಗಳಿಂದಲೂ ಕೋಟಿ ಕೋಟಿ ನೀರಿನ ಬಿಲ್ ಬಾಕಿ ಉಳಿದಿರೋದು ಜಲಮಂಡಳಿಗೆ ತಲೆನೋವು ತಂದಿಟ್ಟಿದೆ.
ಇದನ್ನ ಹೊರತುಪಡಿಸಿ ಡೊಮೆಸ್ಟಿಕ್, ಇಂಡಸ್ಟ್ರೀಸ್, ಬಲ್ಕ್ ಸಫ್ಲೈ ಈ ಎಲ್ಲಾ ಭಾಗಗಳಿಂದ ಸುಮಾರು 220 ಕೋಟಿ ಬಾಕಿ ಸಂದಾಯ ಆಗಬೇಕಿದ್ದು ,ಸದ್ಯ ಈ ಎಲ್ಲಾ ಬಾಕಿ ಬಿಲ್ ವಸೂಲಿಗೆ ಇದೀಗ 50% ಆಫರ್ ಅಥವಾ ಒಟಿಎಸ್ ವ್ಯವಸ್ಥೆ ನೀಡಲು ಪ್ಲಾನ್ ನಡೆದಿದ್ದು, ಶೀಘ್ರದಲ್ಲೇ ಸರ್ಕಾರಕ್ಕೆ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸೋಕೆ ಜಲಮಂಡಳಿ ತಯಾರಿ ನಡೆಸಿದೆ. ಸದ್ಯ ಜಲಮಂಡಳಿಯ ಪ್ಲಾನ್ ಗೆ ಸರ್ಕಾರ ಎಸ್ ಅನ್ನುತ್ತಾ ಇಲ್ಲ ನೋ ಅನ್ನುತ್ತಾ ಅನ್ನೋದನ್ನ ಕಾದುನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.