ಪದವಿ ಕನಸು ಕಾಣುತ್ತಿರುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ನೀಡಿದ ಉನ್ನತ್ತ ಶಿಕ್ಷಣ ಇಲಾಖೆ
ರಾಜ್ಯದ ಖಾಸಗಿ ಕಾಲೇಜುಗಳಲ್ಲಿ ಇನ್ಮುಂದೆ 40% ಸರ್ಕಾರಿ ಕೋಟಾದಡಿಯಲ್ಲಿ ಪದವಿ ಸೀಟ್ ಗಳನ್ನ ಸರ್ಕಾರಕ್ಕೆ ಪಡೆಯಲು ಉನ್ನತ್ತ ಶಿಕ್ಷಣ ಇಲಾಖೆ ಮುಂದಾಗಿದೆ. ಆ ಮೂಲಕ ಉನ್ನತ್ತ ಶಿಕ್ಷಣ ಇಲಾಖೆ ಪದವಿ ಶಿಕ್ಷಣದ ಕನಸ್ಸು ಕಾಣುತ್ತಿರುವ ವಿದ್ಯಾರ್ಥಿಗಳಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ.
ಬೆಂಗಳೂರು, ಆಗಸ್ಟ್ 08: ಪಿಯುಸಿ ಬಳಿಕ ಪದವಿ ಶಿಕ್ಷಣದ (Graduate Education) ಕನಸು ಕಂಡ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇನ್ಮುಂದೆ ಪ್ರತಿಷ್ಠಿತ ಖಾಸಗಿ ಕಾಲೇಜುಗಳಲ್ಲಿಯೂ ಸರ್ಕಾರಿ ಕೋಟಾದ ಪದವಿ ಸೀಟ್ಗಳು ಸಿಗಲಿವೆ. ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ಸೀಟ್ ಹಂಚಿಕೆ ಮಾದರಿಯಂತೆ ಪದವಿ ಕೋರ್ಸ್ಗಳಿಗೂ ಸೀಟ್ ಹಂಚಿಕೆಗೆ ಉನ್ನತ್ತ ಶಿಕ್ಷಣ ಇಲಾಖೆ (Department of Higher Education) ಮುಂದಾಗಿದೆ. ರಾಜ್ಯದ ಖಾಸಗಿ ಕಾಲೇಜುಗಳಲ್ಲಿ ಇನ್ಮುಂದೆ 40% ಸರ್ಕಾರಿ ಕೋಟಾದಡಿಯಲ್ಲಿ ಪದವಿ ಸೀಟ್ ಗಳನ್ನ ಸರ್ಕಾರಕ್ಕೆ ಪಡೆಯಲು ಉನ್ನತ್ತ ಶಿಕ್ಷಣ ಇಲಾಖೆ ಮುಂದಾಗಿದೆ.
ಈ ಹಿಂದೆ ಖಾಸಗಿ ಪದವಿ ಕಾಲೇಜುಗಳು 100 ಕ್ಕೆ 100 ಮ್ಯಾನೇಜಮೆಂಟ್ ಕೋಟಾದಡಿ ಸೀಟ್ ನೀಡಿ ಪದವಿ ದಾಖಲಾತಿ ಪಡೆಯುತ್ತಿದ್ದು ಇದ್ದರಿಂದ ಪ್ರತಿಷ್ಠಿತ ಖಾಸಗಿ ಕಾಲೇಜುಗಳಲ್ಲಿ ಓದಲು ಪ್ರತಿಭಾವಂತ ಬಡ ವಿದ್ಯಾರ್ಥಿಗಳು ಶುಲ್ಕ ಕಟ್ಟಲಾಗದೆ ಪರದಾಡುತ್ತಿದ್ದರು. ಹೀಗಾಗಿ ಸರ್ಕಾರ ಪದವಿ ಖಾಸಗಿ ಕಾಲೇಜುಗಳಲ್ಲಿ ಕಾನೂನಾತ್ಮಕವಾಗಿ ಬರಬೇಕಾದ 40% ಸರ್ಕಾರಿ ಕೋಟಾದ ಸೀಟ್ಗಳನ್ನ ಈ ವರ್ಷದಿಂದ ಪಡೆಯಲು ಮುಂದಾಗಿದೆ. ಈ ಸೀಟ್ಗಳನ್ನ ಕೆಇಎ ಅಥವಾ ಕಾಮೆಡಕೆ ಮಾದರಿಯಲ್ಲಿ ಪರೀಕ್ಷೆ ಅಥವಾ ಆಯ್ಕೆ ನಡೆಸಿ ವಿದ್ಯಾರ್ಥಿಗಳಿಗೆ ಖಾಸಗಿ ಕಾಲೇಜುಗಳಲ್ಲಿ ಪದವಿ ಕೋರ್ಸ್ ಸೀಟ್ಗಳನ್ನ ಹಂಚಿಕೆ ಮಾಡಲು ಮುಂದಾಗಿದೆ.
ಇದನ್ನೂ ಓದಿ: ಸರ್ಕಾರಕ್ಕೆ ರುಪ್ಸಾ ಡೆಡ್ ಲೈನ್: ಆಗಸ್ಟ್ 21ರ ನಂತರ ಖಾಸಗಿ ಶಾಲೆ ಬಂದ್ ಎಚ್ಚರಿಕೆ
ಈಗಾಗಲೇ ಎಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣ ಪಡೆಯಲು ಸಿಇಟಿ ಪರೀಕ್ಷೆ ಬರೆಯಬೇಕಿದೆ ರ‍್ಯಾಂಕ್ ಆಧಾರದ ಮೇಲೆ ಸೀಟ್ ಜೊತೆಗೆ ಇಚ್ಛೆಯ ಕಾಲೇಜು ನೀಡುವ ವೆವಸ್ಥೆ ಇದೆ. ಸದ್ಯ ಇದೇ ವ್ಯವಸ್ಥೆಯನ್ನ ಪದವಿ ಕೋರ್ಸ್ ತರವು ಚಿಂತನೆಗೆ ಉನ್ನತ್ತ ಶಿಕ್ಷಣ ಇಲಾಖೆ ಪ್ಲಾನ್ ಮಾಡಿದೆ. ಇದರಿಂದ ಖಾಸಗಿ ಕಾಲೇಜುಗಳಲ್ಲಿ ಓದಬೇಕಂಬ ಕನಸ್ಸು ಕಂಡಿರುವ ಹಾಗೂ ಸರ್ಕಾರಿ ಕಾಲೇಜುಗಳಿಲ್ಲದ ಭಾಗಗಳಲ್ಲಿನ ವಿದ್ಯಾರ್ಥಿಗಳಿಗೆ ವರದಾನವಾಗಲಿದೆ.
ಇದನ್ನೂ ಓದಿ: ಕಂಪ್ಯೂಟರ್ ಆಧಾರಿತ ಪರೀಕ್ಷೆಗಳನ್ನು ನಡೆಸಲು KEA ತಯಾರಿ, ಹೊಸ ತಂತ್ರಜ್ಞಾನಕ್ಕೆ 10 ಕೋಟಿ ಟೆಂಡರ್
ಈ ವರ್ಷದಿಂದಲೇ ಖಾಸಗಿ ಕಾಲೇಜುಗಳಲ್ಲಿ ಕಾನೂನಾತ್ಮಕವಾಗಿ ಬರಬೇಕಿರುವ ಪದವಿ ಸೀಟ್ ಪಡೆಯಲು ಮುಂದಾಗಿದೆ. ಆದರೆ ಕೆಲವು ಖಾಸಗಿ ಕಾಲೇಜು ಹಾಗೂ ವಿವಿಗಳು ಈಗಾಗಲೇ ದಾಖಲಾತಿ ಮಾಡಿಕೊಂಡಿವೆ. ಹೀಗಾಗಿ ಕೆಲವು ಸಮಯವಾಕಾಶ ಕೇಳಿದ್ದಾರೆ ಈ ಹಿನ್ನಲೆ ಈ ವರ್ಷ ಕೆಲವು ಕಾಲೇಜುಗಳಲ್ಲಿ ಜಾರಿ ಜೊತೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಕಡ್ಡಾಯವಾಗಿ ಖಾಸಗಿ ಕಾಲೇಜುಗಳಲ್ಲಿ ಶೇ 40% ಸರ್ಕಾರಿ ಸೀಟ್ ಪಡೆಯಲು ಮುಂದಾಗಿದೆ.
ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.