1 ದಿನದ ಲೈಸೆನ್ಸ್​ ಪಡೆದು ಮದ್ಯ ಮಾರುವವರಿಗೆ ಶಾಕ್: ಬೆಂಗಳೂರಿನಲ್ಲಿ ಲೈಸೆನ್ಸ್​​ ಸಿಗದೇ ವ್ಯಾಪಾರಿಗಳು ಕಂಗಾಲು

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದ ಹಿನ್ನೆಲೆಯಲ್ಲಿ ದೇಶಾದ್ಯಂತ ಏಳು ದಿನಗಳ ರಾಷ್ಟ್ರೀಯ ಶೋಕವನ್ನು ಘೋಷಿಸಲಾಗಿದೆ. ಇದರಿಂದಾಗಿ ಬೆಂಗಳೂರಿನಲ್ಲಿ ಹೊಸ ವರ್ಷದ ಆಚರಣೆಗೆ ಒಂದು ದಿನದ ಮದ್ಯ ಪರವಾನಗಿ ನೀಡಲು ಸರ್ಕಾರ ನಿರಾಕರಿಸಿದೆ. ಇದರಿಂದಾಗಿ ನೂರಾರು ವ್ಯಾಪಾರಿಗಳು ತೀವ್ರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

1 ದಿನದ ಲೈಸೆನ್ಸ್​ ಪಡೆದು ಮದ್ಯ ಮಾರುವವರಿಗೆ ಶಾಕ್: ಬೆಂಗಳೂರಿನಲ್ಲಿ ಲೈಸೆನ್ಸ್​​ ಸಿಗದೇ ವ್ಯಾಪಾರಿಗಳು ಕಂಗಾಲು
1 ದಿನದ ಲೈಸೆನ್ಸ್​ ಪಡೆದು ಮದ್ಯ ಮಾರುವವರಿಗೆ ಶಾಕ್: ಬೆಂಗಳೂರಿನಲ್ಲಿ ಲೈಸೆನ್ಸ್​​ ಸಿಗದೇ ವ್ಯಾಪಾರಿಗಳು ಕಂಗಾಲು
Follow us
Kiran HV
| Updated By: ಗಂಗಾಧರ​ ಬ. ಸಾಬೋಜಿ

Updated on: Dec 30, 2024 | 10:56 PM

ಬೆಂಗಳೂರು, ಡಿಸೆಂಬರ್​ 30: ಹೊಸ ವರ್ಷ (New Year) ಸಂಭ್ರಮಾಚರಣೆಗೆ ಕೌಂಟ್‌ಡೌನ್ ಶುರುವಾಗಿದೆ. ಬೆಂಗಳೂರಿನಲ್ಲೂ ನ್ಯೂ ಇಯರ್​ಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೆ ಈ ಮದ್ಯ 1 ದಿನದ ಲೈಸೆನ್ಸ್​ ಪಡೆದು ಮದ್ಯ ಮಾರುವವರಿಗೆ ಸರ್ಕಾರ ಶಾಕ್ ಕೊಟ್ಟಿದೆ. ಪರಿಣಾಮ ಲೈಸೆನ್ಸ್​​ ಸಿಗದೇ ವ್ಯಾಪಾರಿಗಳು ಕಾಂಗಾಲಾಗಿದ್ದಾರೆ.

ನ್ಯೂ ಇಯರ್ ಸೆಲೆಬ್ರೇಷನ್​ಗೆ ಎಂ.ಜಿ ರೋಡ್, ಬ್ರಿಗೇಡ್‌ ರೋಡ್‌ ಸೇರಿದಂತೆ ಪಬ್​ಗಳು, ರೆಸ್ಟೋರೆಂಟ್​ಗಳು ಎಲ್ಲವೂ ಸಜ್ಜಾಗಿವೆ. ಇವುಗಳ ಜೊತೆಗೆ 1 ದಿನದ ಲೈಸೆನ್ಸ್​ ಪಡೆದು ಮದ್ಯ ಮಾರಾಟ ಮಾಡುವವರು ಸಿದ್ಧರಾಗಿದ್ದರು. ಆದರೆ ಕೊನೆ ಕ್ಷಣದಲ್ಲಿ ಸರ್ಕಾರ ಲೈಸೆನ್ಸ್​​ಗೆ ಅನುಮತಿ ನೀಡಿಲ್ಲ.

ಇದನ್ನೂ ಓದಿ: ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಸಿಎಂ ಡಿಕೆ ಶಿವಕುಮಾರ್

ಮಾಜಿ ಪ್ರಧಾನಿ ಮನಮೋಹನ್​ಸಿಂಗ್ ನಿಧನ ಹಿನ್ನೆಲೆ ದೇಶದಲ್ಲಿ 7 ದಿನ ಶೋಕಚಾರಣೆ ಘೋಷಿಸಲಾಗಿದೆ. ಹಾಗಾಗಿ 1 ದಿನದ ಲೈಸೆನ್ಸ್​​ ನೀಡಲಾಗದು ಎಂದು ಸರ್ಕಾರದ ಮುಖ್ಯಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಹಾಗಾಗಿ 100ಕ್ಕೂ ಹೆಚ್ಚು ವ್ಯಾಪಾರಿಗಳು ಒಂದು ದಿನದ ಪರವಾನಗಿ ಸಿಗದೇ ಸಮಸ್ಯೆಗೆ ಸಿಲುಕಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಹೊಸ ವರ್ಷಾರಣೆಗೆ ದಿನದ ಲೈಸೆನ್ಸ್​ ​ಇಲ್ಲದೇ ಸಮಸ್ಯೆ ಉಂಟಾಗಿದ್ದು, ಆನ್​ಲೈನ್​ ಮುಖಾಂತರ ಅನುಮತಿಗೆ ಅರ್ಜಿಸಲ್ಲಿಸಿದ್ದರು ಸರ್ಕಾರ ಮಾತ್ರ ಅನುಮತಿ ನೀಡಿಲ್ಲ. ಅನೇಕ ಕಡೆಗಳಲ್ಲಿ ಮೊದಲೇ ಟಿಕೆಟ್​ ಸೋಲ್ಡ್ ​ಔಟ್​ ಆಗಿದ್ದು, ಬರುವ ಜನರಿಗೆ ಟಿಕೆಟ್​​ ಬುಕ್​​ ಮಾಡಿದವರಿಗೆ ಏನು ಮಾಡಬೇಕು ಎಂದು ವ್ಯಾಪಾರಿಗಳು ತಲೆಕೆಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ನಾಳೆ ಸಂಜೆಯಿಂದ ನಂದಿ ಬೆಟ್ಟಕ್ಕೆ ಪ್ರವಾಸಿಗರಿಗೆ ನಿರ್ಬಂಧ; ಈ ಪ್ರವಾಸಿ ತಾಣಗಳಿಗೂ ನಿಷೇಧ

ನ್ಯೂ ಇಯರ್ ಸೆಲೆಬ್ರೇಷನ್​ಗೆ ಕ್ಷಣಗಣನೆಗೆ ಶುರುವಾಗ್ತಿದ್ದಂತೆಯೇ, ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್​​ಸ್ಟ್ರೀಟ್​ನಲ್ಲಿ ತಯಾರಿಯೂ ನಡೆದಿದೆ. ಹೆಚ್ಚು ಜನ ಸೇರೋ ಜಾಗಗಳಲ್ಲಿ ಕಟ್ಟುನಿಟ್ಟಿನ ನಿಗಾ ಇಡೋಕೆ ಖಾಕಿ ಸಜ್ಜಾಗಿದೆ. ಪೊಲೀಸ್ ಇಲಾಖೆ ಕೈ ಜೋಡಿಸಿರೋ ಬಿಬಿಎಂಪಿಯೂ ಗೈಡ್​ಲೈನ್ಸ್ ಜಾರಿ ಮಾಡಿದೆ.

ಫೀಲ್ಡಿಗಿಳಿದ ಪೊಲೀಸ್ ಆಯುಕ್ತ ದಯಾನಂದ್ ರೌಂಡ್ಸ್

ಹೊಸ ವರ್ಷದ ದಿನ ಜನರಿಗೆ ತೊಂದರೆಯಾಗದಿರಲೆಂದು, ಬಿಬಿಎಂಪಿ, ಬೆಸ್ಕಾಂ, BWSSB ಸಿಬ್ಬಂದಿಗೆ ರಜೆ ನೀಡದಂತೆ ಡಿಸಿಎಂ ಡಿಕೆ ಶಿವಕುಮಾರ್​ ಖಡಕ್ ಸೂಚನೆ ನೀಡಿದ್ದಾರೆ. ಇಂದಿನಿಂದ್ಲೇ ಫೀಲ್ಡಿಗಿಳಿದ ಪೊಲೀಸ್ ಆಯುಕ್ತ ದಯಾನಂದ್, ರೌಂಡ್ಸ್ ಹಾಕಿದ್ದಾರೆ. ರಾಜಧಾನಿಯ ಪಬ್, ಬಾರ್ ಮಾಲೀಕರ ಜೊತೆ ಪೊಲೀಸರು ಸಭೆ ನಡೆಸಿದ್ದು, ಪಬ್​​​ಗಳಲ್ಲಿ ಲೇಡಿ ಬೌನ್ಸರ್ಸ್ ನಿಯೋಜಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.