ಮಹಾರಾಷ್ಟ್ರದಲ್ಲಿ ಹೆಚ್ಚಿದ ಮಳೆ, ತುಂಬಿದ ಆಲಮಟ್ಟಿ ಡ್ಯಾಂನಿಂದ ಕೃಷ್ಣಾ ನದಿಗೆ ನೀರು
ನೀರು ಹರಿಯುತ್ತಿರಲಿ ಅಥವಾ ಸ್ತಬ್ಧವಾಗಿ ನಿಂತಿರಲಿ ಅದು ಕಣ್ಣಿಗೆ ಆಹ್ಲಾದತೆಯನ್ನು ನೀಡುವ ದೃಶ್ಯ. ನೀರು ಶಾಂತನಾಗಿ ಹರಿಯುತ್ತದೆ ,ಅಬ್ಬರದೊಂದಿಗೆ ರಭಸದಲ್ಲೂ ಹರಿಯುತ್ತದೆ. ಅವೆರೆಡು ನೋಟಗಳು ಮನಸ್ಸಿಗೆ ಮುದ ನೀಡುತ್ತವೆ. ಜಲಪಾತಗಳಲ್ಲಿ ಮೇಲಿಂದ ಬೋರ್ಗರೆಯುತ್ತಾ ಕೆಳಗೆ ಬೀಳುವ ದೃಶ್ಯವೂ ರುದ್ರ ರಮಣೀಯ. ಅದರೆ ನೀರಿನೊಂದಿಗೆ ಚೆಲ್ಲಾಟಕ್ಕಿಳಿದರೆ ಅಪಾಯ ತಪ್ಪಿದ್ದಲ್ಲ.
ವಿಜಯಪುರ: ಜಿಲ್ಲೆಯ ಆಲಮಟ್ಟಿ ಆಣೆಕಟ್ಟುನಲ್ಲಿ ಒಳಹರಿವು ಹೆಚ್ಚಿರುವ ಕಾರಣ ಕ್ರೆಸ್ಟ್ ಗೇಟ್ ಗಳ ಮೂಲಕ ನೀರನ್ನು ಕೃಷ್ಣಾ ನದಿಗೆ ಹರಿ ಬಿಡಲಾಗುತ್ತಿದೆ. ನೀರು ನದಿಗೆ ಹರಿದು ಹೋಗುತ್ತಿರುವ ರಮಣೀಯ ದೃಶ್ಯವನ್ನು ವಿಡಿಯೋದಲ್ಲಿ ನೋಡಬಹುದು. ಈಗಾಗಲೇ ವರದಿ ಮಾಡಿರುವಂತೆ ನೆರೆರಾಜ್ಯ ಮಹಾರಾಷ್ಟ್ರದ ಅನೇಕ ಪ್ರದೇಶಗಳಲ್ಲಿ ಒಂದೇ ಸಮನೆ ಮಳೆ ಸುರಿಯುತ್ತಿದೆ. ಕೃಷ್ಣಾ ನದಿಯ ಉಗಮಸ್ಥಾನವಾಗಿರುವ ಮಹಾಬಲೇಶ್ವರ, ರತ್ನಗಿರಿ, ಚಿಪ್ಲೂನ್ ಮೊದಲಾದ ಕಡೆ ಮಳೆ ಧಾರಾಕಾರವಾಗಿ ಸುರಿಯುತ್ತಿದೆ. ಹಾಗಾಗಿ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಸಂತಸದ ಸಂಗತಿಯೆಂದರೆ ರಾಜ್ಯದಲ್ಲಿ ಹರಿಯುವ ನದಿಗಳಲ್ಲಿ ಭಾರೀ ಪ್ರಮಾಣನದಲ್ಲಿ ನೀರು ಹರಿದು ಬರುತ್ತಿದೆ. ಎಲ್ಲೆಡೆ ಉತ್ತಮ ಮಳೆಯಾಗುತ್ತಿರುವ ವರದಿಗಳಿದ್ದರೂ ಒಂದೆರಡು ಜಿಲ್ಲೆಗಳಲ್ಲಿ ಕೊರತೆ ಮಳೆಯಾಗಿದೆ ಇಲ್ಲವೇ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮಹಾರಾಷ್ಟ್ರ ಪಶ್ಚಿಮ ಘಟ್ಟಗಳಲ್ಲಿ ಸುರಿಯುತ್ತಿರುವ ಮಳೆಗೆ ಬೆಳಗಾವಿಯಲ್ಲಿ ಮಹಾ ಪ್ರವಾಹದ ಆತಂಕ