ಮಹಾರಾಷ್ಟ್ರ ಪಶ್ಚಿಮ‌ ಘಟ್ಟಗಳಲ್ಲಿ ಸುರಿಯುತ್ತಿರುವ ಮಳೆಗೆ ಬೆಳಗಾವಿಯಲ್ಲಿ ಮಹಾ ಪ್ರವಾಹದ ಆತಂಕ

ಮಹಾರಾಷ್ಟ್ರ ಪಶ್ಚಿಮ ಘಟ್ಟಗಳಲ್ಲಿ ನಿರಂತರ ಮಳೆಯಿಂದ ಬೆಳಗಾವಿ ಜಿಲ್ಲೆಯ ಸಪ್ತ ನದಿಗಳು ತುಂಬಿ ಹರಿಯುತ್ತಿವೆ. ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಕೆಳ ಹಂತದ ಸೇತುವೆಗಳು ಮುಳುಗಡೆಯಾಗಿದ್ರೆ, ಮುಲ್ಕಾನಿ ಬಾಬಾ ದರ್ಗಾಗೆ ದೂದಗಂಗೆ ಸುತ್ತುವರಿದಿದ್ದಾಳೆ.‌ ದತ್ತಾತ್ರೇಯನಿಗೂ ಮುಳುಗವ ಭೀತಿ ಶುರುವಾಗಿದೆ. ಇತ್ತ ರಾಕಸಕೊಪ್ಪ ಜಲಾಶಯ ಭರ್ತಿ ಆಗೋಕೆ ಇನ್ನು ಐದೇ ಅಡಿ ಬಾಕಿ ಇದೆ.

ಮಹಾರಾಷ್ಟ್ರ ಪಶ್ಚಿಮ‌ ಘಟ್ಟಗಳಲ್ಲಿ ಸುರಿಯುತ್ತಿರುವ ಮಳೆಗೆ ಬೆಳಗಾವಿಯಲ್ಲಿ ಮಹಾ ಪ್ರವಾಹದ ಆತಂಕ
ಬೆಳಗಾವಿಯಲ್ಲಿ ಮಹಾ ಪ್ರವಾಹದ ಆತಂಕ; ನದಿಗಳಿಗೆ ಜೀವ ಕಳೆ, ಸೇತುವೆ ಮುಳುಗಡೆ
Follow us
Sahadev Mane
| Updated By: ಆಯೇಷಾ ಬಾನು

Updated on: Jul 17, 2024 | 11:23 AM

ಬೆಳಗಾವಿ, ಜುಲೈ.17: ಬೆಳಗಾವಿ (Belagavi)ಜಿಲ್ಲೆಯಲ್ಲಿ ಹೆಚ್ಚು ಮಳೆ ಇರದಿದ್ದರೂ ಸಹ ಮಹಾರಾಷ್ಟ್ರ ಪಶ್ಚಿಮ‌ ಘಟ್ಟಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ನದಿಗಳಿಗೆ ಜೀವ ಕಳೆ‌ಬಂದಿದೆ. ಕೃಷ್ಣಾ, ವೇದಗಂಗಾ, ದೂದಗಂಗಾ, ಮಲಪ್ರಭಾ, ಘಟಪ್ರಬಾ ನದಿಗಳು ತುಂಬಿ ಹರಿಯುತ್ತಿವೆ. ಕೆಳ ಹಂತದ ಸೇತುವೆಗಳು ಮುಳುಗಡೆಯಾಗಿ ರಸ್ತೆ ಸಂಪರ್ಕ ಕಡಿತಗೊಂಡು ಜನ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಬೆಳಗಾವಿಗೆ ನೀರು ಪೂರೈಕೆ ಮಾಡುವ ರಾಕಸಕೊಪ್ಪ ಜಲಾಶಯ (Rakaskop Dam) ಭರ್ತಿಯಾಗೋಕೆ ಕೇವಲ ಐದು ಅಡಿ ನೀರು ಮಾತ್ರ ಬಾಕಿ ಇದೆ.‌ ಐದು ಅಡಿ ನೀರು ಭರ್ತಿಯಾದರೆ ಅಧಿಕೃತವಾಗಿ ‌ಅಧಿಕಾರಿಗಳು ಜಲಾಶಯದಿಂದ ನೀರು ಬಿಡುಗಡೆ ಮಾಡಲಿದ್ದಾರೆ. ಮಾರ್ಕಂಡೇಯ ನದಿಗೆ ನೀರು ಬಿಟ್ರೇ ನದಿ ಪಾತ್ರದ ಜನರಿಗೆ ಆತಂಕ ಶುರುವಾಗಲಿದೆ.

ನಿರಂತರ ಮಳೆಯಿಂದಾಗಿ ದೂದಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ನಾಲ್ಕು ಸೇತುವೆ ‌ಹಾಗೂ ಕೃಷ್ಣಾ ನದಿಗೆ ಅಡ್ಡಲಾಗಿ‌ ನಿರ್ಮಿಸಿರುವ ಒಂದು ಸೇತುವೆ ಸೇರಿ ಒಟ್ಟು ಐದು ಸೇತುವೆಗಳು ಮುಳುಗಡೆಯಾಗಿವೆ. ನಿಪ್ಪಾಣಿ ತಾಲೂಕಿನ ಕುನ್ನೂರು-ಬಾರವಾಡ, ಕಾರದಾಗಾ-ಬೋಜ್, ಕುನ್ನೂರು-ಭೋಜವಾಡಿ, ದತ್ತವಾಡ-ಮಲಿಕವಾಡ, ಬಾವನಸೌಂದತ್ತಿ- ಮಾಂಜರಿ ಸಂಪರ್ಕಿಸುವ ಕೆಳ‌ ಹಂತದ ಸೇತುವೆಗಳು ಮುಳುಗಡೆಯಾಗಿವೆ.‌ ಇನ್ನೂ ಯಕ್ಸಂಬಾ ಬಳಿ ದೂದಗಂಗಾ ನದಿ ಪಕ್ಕದಲ್ಲಿರುವ ಮುಲ್ಕಾನಿ ದರ್ಗಾ ಎರಡನೇ ಬಾರಿಗೆ ದೂದಗಂಗಾ ನದಿ ನೀರು ಆವರಿಸಿದೆ.

ಇದನ್ನೂ ಓದಿ: ಬಿಎಂಟಿಸಿಯಿಂದ ಚಿಕ್ಕಬಳ್ಳಾಪುರ ರೌಂಡ್ಸ್: ಈಶಾ ಫೌಂಡೇಶನ್​ ಸೇರಿದಂತೆ 5 ಪ್ರವಾಸಿ ತಾಣಗಳ ಸುತ್ತಾಟ

ಇತ್ತ ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ದತ್ತ ಮಂದಿರಕ್ಕೆ ಕೃಷ್ಣೆ ಸುತ್ತುವರೆದಿದೆ. ಸದ್ಯ 75ಸಾವಿರ ಕ್ಯೂಸೆಕ್ ನೀರು ಕೃಷ್ಣಾ ನದಿಯಲ್ಲಿ ಹರಿದು ಬರುತ್ತಿದ್ದು ಇದರಿಂದ ನದಿ ಪಾತ್ರದ ಜನರಿಗೆ ಪ್ರವಾಹದ ಆತಂಕ ಶುರುವಾಗಿದೆ. ನೆರೆಯ ರಾಜ್ಯ ಕೊಲ್ಲಾಪುರದ ಪ್ರಸಿದ್ಧ ನರಸಿಂಹವಾಡಿ ದತ್ತ ಮಂದಿರಕ್ಕೆ ಕೃಷ್ಣಾ ನದಿ ನೀರು‌ ನುಗ್ಗಿದ್ದು ನಡು ಮಟ್ಟದ ನೀರಲ್ಲೇ‌ ಭಕ್ತರು ದತ್ತ ದೇವನ ದರ್ಶನ ಪಡೆಯುತ್ತಿದ್ದಾರೆ.

ಒಟ್ಟಿನಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಸದ್ಯ ಮಳೆಯ ಪ್ರಮಾಣ ಕಡಿಮೆಯಾಗಿದ್ದರೂ ಸಹ ನೆರೆ ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ನದಿಗಳು ಮೈ ದುಂಬಿ ಹರಿಯುತ್ತಿವೆ. ಇದರಿಂದ ಸೇತುವೆ ಹಾಗು ದೇವಸ್ಥಾನ‌ ದರ್ಗಾಗಳು ಮುಳುಗಡೆಯಾಗಿವೆ. ಇದೇ ರೀತಿ ಜಿಲ್ಲೆಯಲ್ಲೂ ಮಳೆ ಮುಂದುವರೆದಿದ್ದೆ ಆದರೆ ಅವಾಂತರಗಳು ಕಟ್ಟಿಟ್ಟ ಬುತ್ತಿ. ಜನ ಮತ್ತೊಮ್ಮೆ ಪ್ರವಾಹ ಎದುರಿಸುವ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ