AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿಯಲ್ಲಿ ಬುದ್ಧಿಮಾಂದ್ಯೆ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನ; ಆರೋಪಿ ಅರೆಸ್ಟ್​

ಬೆಳಗಾವಿಯಲ್ಲಿ ಬುದ್ಧಿಮಾಂದ್ಯೆ ಯುವತಿ ಮೇಲೆ ವ್ಯಕ್ತಿಯೊರ್ವ ಅತ್ಯಾಚಾರಕ್ಕೆ ಯತ್ನಿಸಿದ ಅಮಾನವೀಯ ಘಟನೆಯೊಂದು ನಡೆದಿದೆ. ಕೂಡಲೇ ಎಚ್ಚತ್ತ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇತ್ತ ಯಾದಗಿರಿಯಲ್ಲಿ 13 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ಇಬ್ಬರನ್ನು ಅರೆಸ್ಟ್​ ಮಾಡಲಾಗಿದೆ.

ಬೆಳಗಾವಿಯಲ್ಲಿ ಬುದ್ಧಿಮಾಂದ್ಯೆ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನ; ಆರೋಪಿ ಅರೆಸ್ಟ್​
ಬೆಳಗಾವಿಯಲ್ಲಿ ಬುದ್ಧಿಮಾಂದ್ಯೆ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನ
Sahadev Mane
| Updated By: ಕಿರಣ್ ಹನುಮಂತ್​ ಮಾದಾರ್|

Updated on:Jul 17, 2024 | 10:04 PM

Share

ಬೆಳಗಾವಿ, ಜು.17: ಬುದ್ಧಿಮಾಂದ್ಯೆ ಯುವತಿ ಮೇಲೆ ವ್ಯಕ್ತಿಯೊರ್ವ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಬೆಳಗಾವಿ (Belagavi) ತಾಲೂಕಿನ ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪೋಷಕರು ಜಮೀನಿಗೆ ಹೋಗಿದ್ದ ವೇಳೆ ಸಮಯ ಸಾಧಿಸಿ ಕಾಮುಕ ಮನೆಗೆ ನುಗ್ಗಿದ್ದಾನೆ. ಈ ವೇಳೆ ಯುವತಿ ಶಬ್ಧ ಮಾಡಿದಾಗ ತಕ್ಷಣವೇ ಮನೆ ಒಳಗೆ ಹೋಗಿರುವ ಯುವತಿಯ ಚಿಕ್ಕಪ್ಪ, ವ್ಯಕ್ತಿಯನ್ನ ಹಿಡಿದು ಥಳಿಸಿದ್ದಾನೆ. ಬಳಿಕ ಪ್ರಜ್ಞೆ ತಪ್ಪಿ ಬಿದ್ದಂತೆ ನಾಟಕವಾಡಿರುವ ಆರೋಪಿ, ಸಿನಿಮೀಯ ರೀತಿಯಲ್ಲಿ ಪರಾರಿಯಾಗಿದ್ದ.

ಶೋಧ ಕಾರ್ಯ ನಡೆಸಿ ಆರೋಪಿ ಬಂಧಿಸಿದ ಪೊಲೀಸರು

ತಕ್ಷಣವೇ ಯುವತಿ ಜೊತೆಗೆ ಕಾಕತಿ ಠಾಣೆಗೆ ಆಗಮಿಸಿದ ಪೋಷಕರು, ಸಂಬಂಧಿಗಳು ದೂರು ನೀಡಿದ್ದಾರೆ. ಘಟನೆ ಬಳಿಕ ಅಲರ್ಟ್ ಆದ ಬೆಳಗಾವಿ ಗ್ರಾಮೀಣ ವಿಭಾಗದ ಪೊಲೀಸರು, ಶೋಧ ಕಾರ್ಯ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಇನ್ನು ಬೆಳಗಾವಿಯ ಕಾಕತಿ ಠಾಣೆಗೆ ಡಿಸಿಪಿ ಸ್ನೇಹಾ ಭೇಟಿ ನೀಡಿ ಸಂತ್ರಸ್ತೆಯ ವಿಚಾರಣೆ ನಡೆಸಿದ್ದಾರೆ. ಬಳಿಕ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಿದ್ದಾರೆ.

ಸಂತ್ರಸ್ಥೆಯ ಊರಲ್ಲಿ ಗ್ರಾಮಸ್ಥರಿಂದ ಸಭೆ

ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಸಂತ್ರಸ್ಥೆಯ ಊರಲ್ಲಿ ಗ್ರಾಮಸ್ಥರು ಸಭೆ ನಡೆಸಿದ್ದಾರೆ. ಜೊತೆಗೆ ಇಂತಹ ಘಟನೆ ಮತ್ತೊಮ್ಮೆ ಮರುಕಳಿಸದಂತೆ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ವೇಳೆ ಆರೋಪಿ ಅರೆಸ್ಟ್ ಆಗಿದ್ದಾನೆ, ಯಾಕೆ ಸಭೆ ಮಾಡ್ತಿದ್ದೀರಿ ಎಂದು ಪೊಲೀಸರು ಪ್ರಶ್ನಿಸಿದ್ದಾರೆ. ಈ ವೇಳೆ ಡಿಸಿಪಿ ರೋಹನ್ ಜಗದೀಶ್ ಬಳಿ, ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಸಧ್ಯ ಗ್ರಾಮದಲ್ಲಿ ಬಿಗುವಿಣ ವಾತಾವರಣ ಹಿನ್ನೆಲೆ ಒಂದು ಕೆಎಸ್ಆರ್‌ಪಿ ತುಕಡಿ ಸೇರಿ ಪೊಲೀಸರನ್ನು ನಿಯೋಜಿಸಲಾಗಿದೆ.

ಇದನ್ನೂ ಓದಿ:ಬೆಂಗಳೂರು: ಅತ್ಯಾಚಾರ ಎಸಗುವುದಾಗಿ ಬೆದರಿಕೆ ಆರೋಪ; ಆರ್​ಟಿಐ ಕಾರ್ಯಕರ್ತ ಅರೆಸ್ಟ್​

13 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ಇಬ್ಬರ ಬಂಧನ

ಯಾದಗಿರಿ: ಬಹಿರ್ದೆಸೆಗೆ ಹೋಗಿದ್ದ 13 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರಾಮರೆಡ್ಡಿ ಹಾಗೂ ಸಂಜೀವಗೌಡ ಬಂಧಿತ ಆರೋಪಿಗಳು. ಯಾದಗಿರಿ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಘಟನೆ ಇದಾಗಿದೆ. ಇನ್ನು ಸಲುಗೆಯಿಂದ ಇದ್ದಿದ್ದಕ್ಕೆ ಬಾಲಕಿಯನ್ನ ಖಾಲಿಯಿದ್ದ ಮನೆಗೆ ಕರೆದೊಯ್ದ ಧುರುಳರು, ಲೈಂಗಿಕ ದೌರ್ಜನ್ಯವೆಸಗಿದ್ದರು. ಈ ಬಗ್ಗೆ ಪೊಲೀಸರಿಗೆ ದೂರು ನೀಡಲು ಪೋಷಕರ ಹಿಂದೇಟು ಹಿನ್ನೆಲೆ ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಡ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಜೊತೆಗೆ ಯಾದಗಿರಿ ಮಹಿಳಾ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:10 pm, Wed, 17 July 24