ಬೆಂಗಳೂರು: ಅತ್ಯಾಚಾರ ಎಸಗುವುದಾಗಿ ಬೆದರಿಕೆ ಆರೋಪ; ಆರ್​ಟಿಐ ಕಾರ್ಯಕರ್ತ ಅರೆಸ್ಟ್​

ಆರ್​ಟಿಐ (RTI) ಕಾರ್ಯಕರ್ತನೊಬ್ಬ ಪರಿಚಯವಿದ್ದ ಮಹಿಳೆಯ ಖಾಸಗಿ ಫೋಟೋ ಇಟ್ಟುಕೊಂಡು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಕೆ ಒಡ್ಡಿದ ಆರೋಪದ ಹಿನ್ನಲೆ ಆತನನ್ನು ಬೆಂಗಳೂರಿನ ಕಾಡುಗೋಡಿ ಪೊಲೀಸರು ಬಂಧಿಸಿದ್ದಾರೆ. ಈ ಹಿಂದೆ ಇತ ಕೆಆರ್​ಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ.

ಬೆಂಗಳೂರು: ಅತ್ಯಾಚಾರ ಎಸಗುವುದಾಗಿ ಬೆದರಿಕೆ ಆರೋಪ; ಆರ್​ಟಿಐ ಕಾರ್ಯಕರ್ತ ಅರೆಸ್ಟ್​
ಬಂಧಿತ ಶ್ರೀನಿವಾಸ್
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 11, 2024 | 8:51 PM

ಬೆಂಗಳೂರು, ಜು.11: ಮಹಿಳೆಗೆ ಅತ್ಯಾಚಾರ ಎಸಗುವುದಾಗಿ ಬೆದರಿಕೆ ಒಡ್ಡಿದ ಆರೋಪದ ಹಿನ್ನಲೆ ಆರ್​ಟಿಐ (RTI) ಕಾರ್ಯಕರ್ತ ಶ್ರೀನಿವಾಸ್ ಎಂಬಾತನನ್ನು ಬೆಂಗಳೂರಿನ ಕಾಡುಗೋಡಿ ಪೊಲೀಸರು(Kadugodi Police Station) ಬಂಧಿಸಿದ್ದಾರೆ. ಸ್ನೇಹಿತನ ಜೊತೆಗೂಡಿ ಪರಿಚಯವಿದ್ದ ಮಹಿಳೆಯ ಖಾಸಗಿ ಫೋಟೋ ಇಟ್ಟುಕೊಂಡು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಶ್ರೀನಿವಾಸ್ ಬೆದರಿಕೆ ಹಾಕಿದ್ದನಂತೆ. ಈ ಕುರಿತು ಸಂತ್ರಸ್ಥ ಮಹಿಳೆ ಕಾಡುಗೋಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಜುಲೈ 01 ರಂದು ಕಾಡುಗೋಡಿ ಮೆಟ್ರೋ ಸ್ಟೇಷನ್ ಬಳಿ ಶ್ರೀನಿವಾಸ್ ಬೆದರಿಕೆ ಹಾಕಿದ್ದ. ಈ ಬಗ್ಗೆ ಕಾಡುಗೋಡಿ ಪೊಲೀಸ್ ಠಾಣೆಗೆ ಮಹಿಳೆ ನೀಡಿದ ದೂರಿನ ಮೇರೆಗೆ ಇಂದು(ಗುರುವಾರ) ಶ್ರೀನಿವಾಸ್​ನನ್ನು ಬಂಧಿಸಲಾಗಿದೆ. ಈ ಹಿಂದೆ ಇತ ಕೆಆರ್​ಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ. ಇದೀಗ ಆತನ ಮೇಲೆ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಡ್ರಾಪ್ ಕೇಳಿದ ಬಾಲಕಿ‌ ಮೇಲೆ ಅತ್ಯಾಚಾರ: ತಮ್ಮೊಂದಿಗೆ ಬಂದಿದ್ದ ಯುವಕರಿಂದಲೇ ಕೃತ್ಯ

ಮಹಿಳೆ ಬಳಿ ಅಸಭ್ಯ ವರ್ತನೆ; ವೈದ್ಯರ ವಿರುದ್ದ ಪ್ರಕರಣ ದಾಖಲು

ಮೈಸೂರು: ಮಹಿಳೆ ಮೇಲೆ ಅಸಭ್ಯವಾಗಿ ವರ್ತಿಸಿದ ಆರೋಪದ ಹಿನ್ನಲೆ ವೈದ್ಯರ ವಿರುದ್ದ ಬೈಲಕುಪ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದವ ಘಟನೆ ನಡೆದಿದೆ. ಆರೋಗ್ಯ ಪರೀಕ್ಷೆಗೆ ಎಂದು ಬೈಲಕುಪ್ಪೆಯಲ್ಲಿರುವ ಸಿ ಎಸ್ ರೆಡ್ಡಿ ಕ್ಲಿನಿಕ್​ಗೆ ಮಹಿಳೆ ತೆರಳಿದಾಗ, ವೈದ್ಯಾಧಿಕಾರಿ ಚಂದ್ರಸೇನ್ ರೆಡ್ಡಿ ಅಸಭ್ಯವಾಗಿ ವರ್ತಿಸಿದ ಆರೋಪದ ಹಿನ್ನಲೆ ದೂರು ದಾಖಲಾಗಿದೆ. ಕೂಡಲೇ ಪೊಲೀಸರು ಆರೋಪಿ ವೈದ್ಯನನ್ನು ವಶಕ್ಕೆ ಪಡೆದು, ಆತನ ಕ್ಲಿನಿಕ್​ನ್ನು ಬಂದ್ ಮಾಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ