ಡೆಂಗ್ಯೂ ನಿಯಂತ್ರಣಕ್ಕೆ ಮಾರ್ಗಸೂಚಿ ಪ್ರಕಟ: BPL ಕಾರ್ಡ್‌ದಾರರಿಗೆ ಉಚಿತ ಸೊಳ್ಳೆ ನಿರೋಧಕ, ಬೇವಿನ ಎಣ್ಣೆ
ಪ್ರಸ್ತುತ ರಾಜ್ಯದಲ್ಲಿ ಡೆಂಗ್ಯೂ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಮಳೆಗಾಲದ ಹಿನ್ನೆಲೆ ಡೆಂಗ್ಯೂ ಸೋಂಕು ಪ್ರಕರಣಗಳ ಚಿಕಿತ್ಸೆ ಹಾಗೂ ಸಮರ್ಪಕ ನಿರ್ವಹಣೆಯು ಪ್ರಮುಖವಾಗಿದೆ. ಆ ನಿಟ್ಟಿನಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾರ್ಗಸೂಚಿ ಹೊರಡಿಸಿದೆ. ಗೈಡ್ ಲೈನ್ಸ್ ಪಾಲಿಸುವಂತೆ ಸೂಚಿಸಿದೆ.
ಬೆಂಗಳೂರು, ಜುಲೈ 11: ಕರ್ನಾಟಕದಲ್ಲಿ ಡೆಂಗ್ಯೂ (Dengue) ಹಾವಳಿ ದಿನದಿನಕ್ಕೂ ಜೋರಾಗುತ್ತಿದೆ. ನಿತ್ಯ ನೂರಾರು ಜನರಿಗೆ ಡೆಂಗ್ಯೂ ದಾಳಿ ಮಾಡುತ್ತಿದ್ದು, ಜೀವವನ್ನೂ ಬಲಿ ಪಡೆಯುತ್ತಿವೆ. ಇದೀಗ ಡೆಂಗ್ಯೂ ನಿಯಂತ್ರಣಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾರ್ಗಸೂಚಿ (guidelines) ಹೊರಡಿಸಲಾಗಿದೆ. ಆ ಮೂಲಕ ಡೆಂಗ್ಯೂ ನಿರ್ವಹಣೆಯ ಎಲ್ಲಾ ಗೈಡ್ ಲೈನ್ಸ್ ಪಾಲಿಸುವಂತೆ ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ಮತ್ತು ಡಿಹೆಚ್ಒಗಳಿಗೆ ಸೂಚನೆ ನೀಡಲಾಗಿದೆ.
ಪ್ರಸ್ತುತ ರಾಜ್ಯದಲ್ಲಿ ಡೆಂಗ್ಯೂ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಮಳೆಗಾಲದ ಹಿನ್ನೆಲೆ ಡೆಂಗ್ಯೂ ಸೋಂಕು ಪ್ರಕರಣಗಳ ಚಿಕಿತ್ಸೆ ಹಾಗೂ ಸಮರ್ಪಕ ನಿರ್ವಹಣೆಯು ಪ್ರಮುಖವಾಗಿದೆ. ಆ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಕೆಳಕಂಡ ಮಾರ್ಗಸೂಚಿಯನ್ನು ಹೊರಡಿಸಿದೆ.
ಮಾರ್ಗಸೂಚಿಗಳು ಹೀಗಿವೆ
- ಕಂಟ್ರೋಲ್ ರೂಮ್ ಅಥವಾ ವಾರ್ ರೂಂ ಸ್ಥಾಪನೆ. ಪಾಲಿಕೆ, ಜಿಲ್ಲಾಮಟ್ಟದಲ್ಲಿ ಟಿಎಸಿ (TAC) ಸಭೆ ಮಾಡುವಂತೆ ಸೂಚಿಸಲಾಗಿದೆ.
- ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು 15 ದಿನಗಳಿಗೊಮ್ಮೆ ಮನೆ ಮನೆ ಸರ್ವೆ ಮಾಡಬೇಕು.
- ಪ್ರತಿ ಶುಕ್ರವಾರ ಫೀಲ್ಡ್ ವರ್ಕ್ ಮಾಡಿ ಲಾರ್ವ ನಾಶ ಪಡಿಸಬೇಕು.
- ಡೆಂಗ್ಯೂ ಹಾಟ್ ಸ್ಪಾಟ್ ಗುರುತಿಸಬೇಕು ಅದರ ಮಾಹಿತಿಯನ್ನ ಕಂಟ್ರೋಲ್ ರೂಂಗೆ ನೀಡಬೇಕು.
- ಹಾಟ್ ಸ್ಪಾಟ್ಗಳಲ್ಲಿ ಲಾರ್ವ ನಾಶವನ್ನ ತೀವ್ರಗತಿಗೊಳಿಸಬೇಕು.
- ಫೀವರ್ ಕ್ಲಿನಿಕ್ಗಳನ್ನ ತುರ್ತಾಗಿ ತೆರೆಯಬೇಕು.
ಇದನ್ನೂ ಓದಿ: ಕರ್ನಾಟಕದಲ್ಲಿ ಮುಂದುವರಿದ ಡೆಂಗ್ಯೂ ಅಬ್ಬರ: 24 ಗಂಟೆಯಲ್ಲಿ 293 ಜನರಿಗೆ ಸೋಂಕು ದೃಢ
- ಹಾಟ್ ಸ್ಪಾಟ್ಗಳಲ್ಲಿ ಬಿಪಿಎಲ್ (BPL) ಕುಟುಂಬಗಳಿಗೆ ಸೊಳ್ಳೆನಿರೋಧಕ ಬೇವಿನ ಎಣ್ಣೆಯನ್ನ ಕೈಕಾಲುಗಳಿಗೆ ಹಚ್ಚಲು ನೀಡಬೇಕು.
- ಡೆಂಗ್ಯೂ ಗುಣಲಕ್ಷಣಗಳು ಬಂದಾಗಿನ 14 ದಿನಗಳ ಕಾಲ ರೋಗಿಯ ಮಾಹಿತಿಯನ್ನ ವಾರ್ ರೂಂಗೆ ತಿಳಿಸಬೇಕು.
- ಪ್ರತಿ ಜಿಲ್ಲಾ ಆಸ್ಪತ್ರೆಗಳಲ್ಲಿ ಕನಿಷ್ಠ 5 ಬೆಡ್ಗಳನ್ನ ಮೀಸಲಿಡಬೇಕು.
- ಟೆಸ್ಟಿಂಗ್ ಕಿಟ್, ಔಷಧ, ವೈಟ್ ಪ್ಲೇಟ್ ಲೇಸ್ಟ್ಗಳು ಇದಿಯಾ ಎಂದು ಖಚಿತ ಪಡಿಸಿ ಮಾಹಿತಿ ನೀಡಬೇಕು.
- ಡೆಂಗ್ಯೂ ನಿರ್ವಹಣೆ ಸಂಬಂಧ ಶಿಷ್ಟಾಚಾರನ್ನು ಕಡ್ಡಾಯವಾಗಿ ಎಲ್ಲಾ ವೈದ್ಯರು ಪಾಲಿಸುವುದು.
- ಮೆಡಿಕಲ್ ಕಾಲೇಜುಗಳ famili adoption programme ಅನ್ನು ಡೆಂಗ್ಯೂ ಸಮಸ್ಯಾತ್ಮಕ ಗ್ರಾಮ, ವಾರ್ಡ್ಗಳಿಗೆ ವಿಸ್ತರಿಸುವುದು.
- ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲಾಡಳಿತ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ, ಡೆಂಗ್ಯೂ ಪ್ರಕರಣಗಳ ನಿಯಂತ್ರಣಕಾಗಿ ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:29 pm, Thu, 11 July 24