AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು ನಂದಿನಿ ಹಾಡಿನ ಖ್ಯಾತಿ ವಿಕ್ಕಿಪೀಡಿಯಾ ವಿಕಾಸ್‌ಗೆ ಶಾಕ್ ಕೊಟ್ಟ ಪೊಲೀಸರು

‘ನಾನು ನಂದಿನಿ, ಬೆಂಗಳೂರಿಗೆ ಬಂದೀನಿ’ ಈ ಹಾಡು ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದು ಮಾಡಿದೆ. ಆದ್ರೆ, ಇದೀಗ ಅದರ ಕತೃ ವಿಕಾಸ್‌ ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ಹೌದು.. ರೀಲ್ಸ್​ ಹಾಗೂ ಹಾಸ್ಯಮಯ ವಿಡಿಯೊಗಳ ಮೂಲಕ ಅಪಾರ ಜನಪ್ರಿಯತೆ ಗಳಿಸಿರುವ ಕಂಟೆಂಟ್ ಕ್ರಿಯೇಟರ್ ವಿಕ್ಕಿಪೀಡಿಯಾ ವಿಕಾಸ್​ಗೆ ಪೊಲೀಸರು ಶಾಕ್ ಕೊಟ್ಟಿದ್ದಾರೆ.

ನಾನು ನಂದಿನಿ ಹಾಡಿನ ಖ್ಯಾತಿ ವಿಕ್ಕಿಪೀಡಿಯಾ ವಿಕಾಸ್‌ಗೆ ಶಾಕ್ ಕೊಟ್ಟ ಪೊಲೀಸರು
‘ವಿಕ್ಕಿಪೀಡಿಯಾ’ ವಿಕಾಸ್‌
Jagadisha B
| Edited By: |

Updated on: Jul 11, 2024 | 7:58 PM

Share

ಬೆಂಗಳೂರು, (ಜುಲೈ 11): ಮಾದಕವಸ್ತು ವ್ಯಸನದ ಬಗ್ಗೆ ವಿಡಿಯೊ ಮಾಡಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ‘ನಾನು ನಂದಿನಿ, ಬೆಂಗಳೂರಿಗೆ ಬಂದೀನಿ’ ಹಾಡಿನ ಖ್ಯಾತಿಯ ವಿಕ್ಕಿಪೀಡಿಯಾ ವಿಕಾಸ್​ಗೆ ಪೊಲೀಸರು ಶಾಕ್ ಕೊಟ್ಟಿದ್ದಾರೆ. ಡ್ರಗ್ಸ್ ಪದ ಬಳಸಿ ಮಾಡಿದ್ದ ವಿಡಿಯೋವನ್ನು ಪೊಲೀಸರು ಡಿಲೀಟ್ ಮಾಡಿಸಿದ್ದಾರೆ. ಬೆಂಗಳೂರಿನ ಬೈಯ್ಯಪ್ಪನಹಳ್ಳಿ ಪೊಲೀಸರು, ವಿಕಾಸ್​ಗೆ ದೂರವಾಣಿ ಕರೆ ಮಾಡಿ ಡ್ರಗ್ಸ್ ಪದ ಬಳಸಿ ಮಾಡಲಾಗಿದ್ದ ವಿಡಿಯೋವನ್ನು ತೆಗೆಸಿದ್ದಾರೆ.

ಭಿನ್ನ ವಿಭಿನ್ನ ರೀಲ್ಸ್​ಗಳನ್ನು​ ಶೇರ್ ಮಾಡಿ ಸಖತ್​ ಸುದ್ದಿಯಲ್ಲಿ ಇರುತ್ತಿದ್ದ ಕಂಟೆಂಟ್ ಕ್ರಿಯೇಟರ್ ವಿಕ್ಕಿಪೀಡಿಯಾ ವಿಕಾಸ್​, ಡ್ರಗ್ಸ್ (ಮಾದಕ ವಸ್ತು ವ್ಯಸನ) ವಿಚಾರಕ್ಕೆ ಸಂಬಂಧಿಸಿದಂತೆ ಒಂದು ರೀಲ್ಸ್ ಮಾಡಿ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿಶೇರ್ ಮಾಡಿಕೊಂಡಿದ್ದರು. ಇದೇ ರೀಲ್ಸ್​ ಈಗ ಪೊಲೀಸ್ ಠಾಣೆ ಮೆಟ್ಟಿಲೇರುವಂತೆ ಮಾಡಿದ್ದು, ಇದೀಗ ಅದನ್ನು ಬೈಯ್ಯಪ್ಪನಹಳ್ಳಿ ಪೊಲೀಸರು ಪೊಲೀಸರು ಡಿಲೀಟ್ ಮಾಡಿಸಿದ್ದಾರೆ.

ಇದನ್ನೂ ಓದಿ: Viral Video: ನಮ್ಮ ಮೆಟ್ರೋದಲ್ಲಿ ಪುರುಷರಿಬ್ಬರ ಕಿತ್ತಾಟದ ವಿಡಿಯೋ ವೈರಲ್

“ಇಂದಿನ ಯುವಕರು ಎಂಜಾಯ್‌ಮೆಂಟ್‌ಗೆ ಅಂತ ಮದ್ಯಪಾನ ಮಾಡುವುದು, ಸಿಗರೇಟ್‌ ಸೇದೋದು, ಹುಡುಗೀರ್‌ ಹಿಂದೆ ಹೋಗ್ತಾರೆ. ಆದರೆ, ನಾನು ಎಂಜಾಯ್‌ಮೆಂಟ್‌ ಮಾಡಲು ಡ್ರಗ್ಸ್‌ ತಗೋತೀನಿ” ಎನ್ನುವ ರೀತಿಯಲ್ಲಿ ವಿಕಾಸ್‌ ಹಾಗೂ ಅವರ ಸ್ನೇಹಿತ ವಿಡಿಯೊ ಮಾಡಿದ್ದರು. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದರು.

ಇದನ್ನು ಗಮನಿಸಿದ ಪೊಲೀಸರು ಕೂಡಲೇ ವಿಕಾಸ್​ಗೆ ಕರೆ ಮಾಡಿ ಆ ವಿಡಿಯೋವನ್ನು ತೆಗೆಸಿದ್ದಾರೆ. ಅಲ್ಲದೇ ಮತ್ತೆ ಎಂದು ಈ ರೀತಿಯ ವಿಡಿಯೋ ಮಾಡದಂತೆ ಸೂಚನೆ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ. ನಾನು ನಂದಿನಿ ಬೆಂಗಳೂರಿಗೆ ಬಂದೀನಿ ಸಾಂಗ್ ಮೂಲಕ ಫೇಮಸ್ ಆಗಿದ್ದರು ವಿಕಾಸ್. ವಿಭಿನ್ನ ಶೈಲಿಯಲ್ಲಿ ಕಂಟೆಂಟ್ ಕ್ರಿಯೇಟ್ ಮಾಡಿ ರೀಲ್ಸ್ ಮಾಡುತ್ತಿದ್ದರು. ವಿಕಾಸ್​ಗೆ ಇನ್​ಸ್ಟಾಗ್ರಾಮ್​​ ಖಾತೆಯಲ್ಲಿ 7 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ.

ಇನ್ನು ರೀಲ್ಸ್ ಮಾಡುವವರಿಗೆ ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು ಎನ್ನುವ ಅರಿವು ಇರಬೇಕು. ಹೆಚ್ಚೆಚ್ಚು ಲೈಕ್ಸ್, ಕಾಮೆಂಟ್ಸ್ ಬರುತ್ತವೆ ಎಂದು ಕೆಲ ಸೂಕ್ಷ್ಮ ವಿಚಾರಗಳ ಬಗ್ಗೆ ರೀಲ್ಸ್ ಮಾಡಿದರೆ ಸಂಕಷ್ಟ ಸಿಲುಕಿಕೊಳ್ಳುವುದು ಗ್ಯಾರಂಟಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ