ಬಿಎಂಟಿಸಿಯಿಂದ ಚಿಕ್ಕಬಳ್ಳಾಪುರ ರೌಂಡ್ಸ್: ಈಶಾ ಫೌಂಡೇಶನ್ ಸೇರಿದಂತೆ 5 ಪ್ರವಾಸಿ ತಾಣಗಳ ಸುತ್ತಾಟ
ಚಿಕ್ಕಬಳ್ಳಾಪುರ ತಾಲೂಕಿನ ಐದು ಪ್ರವಾಸಿ ತಾಣಗಳನ್ನ ತೋರಿಸುವ ಒಂದು ದಿನದ ಪ್ರವಾಸ ಪ್ಯಾಕೇಜ್ ಶುರುವಾಗಿದ್ದು, ಇದು ಯಶಸ್ಸು ಕಂಡಿದ್ದರೆ. ಹಾಗಿದ್ದರೆ ಈ ಪ್ಯಾಕೇಜ್ನ ವಿಶೇಷತೆಗಳೇನು? ಪ್ರವಾಸದ ದರ ಎಷ್ಟು ಎಂಬ ಎಲ್ಲ ಮಾಹಿತಿ ಇಲ್ಲಿದೆ.
ಚಿಕ್ಕಬಳ್ಳಾಪುರ, ಜುಲೈ 17: ಕೇವಲ 500 ರೂಪಾಯಿಗಳಲ್ಲಿ ಚಿಕ್ಕಬಳ್ಳಾಪುರ (Chikkaballapur) ತಾಲೂಕಿನ ಐದು ಪ್ರವಾಸಿ ತಾಣಗಳನ್ನ ತೋರಿಸುವ ಬೆಂಗಳೂರು ಮಹಾನಗರ ಸಾರಿಗೆ (BMTC)ಯ ಒಂದು ದಿನದ ಪ್ರವಾಸ ಪ್ಯಾಕೇಜ್ (One Day Package) ಯಶಸ್ಸು ಕಂಡಿದೆ. ಮೊದಲಿಗೆ ಎರಡು ಬಸ್ಗಳಿಂದ ಆರಂಭವಾಗಿದ್ದ ಪ್ಯಾಕೇಜ್ ಈಗ 30 ಬಸ್ಗಳ ವರೆಗೆ ಬಂದು ನಿಂತಿದೆ.
ಬಿಎಂಟಿಸಿಯ ಹಾವಾನಿಯಂತ್ರಿತ ಓಲ್ವೋ ಬಸ್ಗಳಲ್ಲಿ ಒಂದು ದಿನದ ಪ್ರವಾಸಕ್ಕೆ ಕೇವಲ 500 ರೂಪಾಯಿ ನಿಗದಿಗೊಳಿಸಿ ಒಂದು ದಿನದ ಪ್ಯಾಕೇಜ್ ಮಾಡಲಾಗಿದೆ. ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ ಹೊರಡುವ ಬಸ್ ಚಿಕ್ಕಬಳ್ಳಾಪುರ ತಾಲೂಕಿನ ಪ್ರವಾಸಿ ತಾಣಗಳಾದ ಕಣಿವೆಬಸವಣ್ಣ, ಬೋಗನಂದೀಶ್ವರ ದೇವಾಲಯ, ಸರ್.ಎಂ.ವಿಶ್ವೇಶ್ವರಯ್ಯ ಸ್ಮಾರಕ, ರಂಗಸ್ಥಳ ಸೇರಿದಂತೆ ಈಶಾ ಫೌಂಡೇಶನ್ವರೆಗೆ ಹೋಗುತ್ತದೆ. ಮಧ್ಯಾಹ್ನ 12 ರಿಂದ ರಾತ್ರಿ 9:30ರ ವರೆಗೆ ಪ್ರವಾಸ ಇರುತ್ತೆ.
ಮೊದಲು ಎರಡು ಬಸ್ ಗಳಿಂದ ಆರಂಭವಾದ ಟೂರ್ ಪ್ಯಾಕೇಜ್ ಈಗ 30 ಬಸ್ಗಳ ವರೆಗೆ ಬಂದು ನಿಂತಿದೆ. ವೀಕೆಂಡ್ ಸೇರಿದಂತೆ ರಜಾ ದಿನಗಳಲ್ಲಿ, ಚಿಕ್ಕಬಳ್ಳಾಪುರ ಪ್ರವಾಸಕ್ಕೆ ಭಾರಿ ಡಿಮ್ಯಾಂಡ್ ಬಂದಿದೆ.
ಈ ವಾರಾಂತ್ಯ ಪ್ರವಾಸವನ್ನು ಯೋಜಿಸುತ್ತಿರುವಿರಾ? ISHA ಫೌಂಡೇಶನ್ಗೆ ಅತ್ಯುತ್ತಮ ಬಜೆಟ್ ಪ್ಯಾಕೇಜ್ ಪ್ರವಾಸವನ್ನು ಕೈಗೊಳ್ಳಿ. Planning a weekend trip? Check out the best budget package tour to the ISHA Foundation! #WeekendGetaway #BudgetTravel #ISHAFoundation. pic.twitter.com/LQTdQhj2fU
— BMTC (@BMTC_BENGALURU) June 21, 2024
ರಾಜಧಾನಿ ಬೆಂಗಳೂರಿಂದ ಕಾರಿನಲ್ಲಿ ಚಿಕ್ಕಬಳ್ಳಾಪುರ ಪ್ರವಾಸಕ್ಕೆ ಹೊರಟರೆ, ಹೆದ್ದಾರಿ ಟೊಲ್ಗೆಂದೇ ಸುಮಾರು 500 ರೂಪಾಯಿ ಕಟ್ಟಬೇಕು. ಹಾಗೂ ಟ್ರಾಫಿಕ್ ಕಿರಿಕಿರಿ ಅನುಭವಿಸಬೇಕು. ಆದರೆ ಬಿಎಂಟಿಸಿ ಹಾವಾನಿಯಂತ್ರಿತ ಓಲ್ವೋ ಬಸ್ಗಳಲ್ಲಿ ಹಾಯಾಗಿ ಕೇವಲ 500 ರೂಪಾಯಿಯಲ್ಲಿ ಒಂದು ದಿನ ಪ್ರವಾಸ ಮಾಡಬಹುದು ಎಂದು ಪ್ರವಾಸಿ ಚಿನ್ಮಯಿ ಬಿಎಂಟಿಸಿ ಪ್ಯಾಕೆಜ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ರಾಜಧಾನಿ ಬೆಂಗಳೂರಿನಲ್ಲಿ ಮೆಟ್ರೋ ರೈಲು ವಿಸ್ತರಣೆಯಾದಂತೆ, ಬಿಎಂಟಿಸಿ ಬಸ್ಗೆ ಬೇಡಿಕೆ ಕಡಿಮೆಯಾಗುತ್ತಿದೆ, ಇದರಿಂದ ಬಿಎಂಟಿಸಿ ಉಳಿವಿಗಾಗಿ ದಿನನಿತ್ಯದ ಕಾರ್ಯಾಚರಣೆ ಜೊತೆಗೆ ಪ್ರವಾಸದ ಪ್ಯಾಕೇಜ್ ಮಾಡಿರೋದು ಲಾಭದಾಯಕವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ