ಬಾಗಲಕೋಟೆ: ಅನ್ನದಾತರಿಗೆ ಮಾದರಿಯಾಗಬೇಕಿದ್ದ ತೋಟಗಾರಿಗೆ ಇಲಾಖೆಯಲ್ಲಿ ನೀರಿಗೆ ಕೊರತೆ ಎದುರಾಗಿದೆ. ಪ್ರತಿ ವರ್ಷವೂ ಇದೇ ಸಮಸ್ಯೆ ಇದೇ ಕಥೆಯಾಗಿದೆ. ರಣಬಿಸಿಲು ನೆತ್ತಿ ಸುಡ್ತಿದೆ. ಭೂಮಿ ಶಾಖಕ್ಕೆ ನೀರು ಪಾತಾಳ ಸೇರಿದೆ. ಗಿಡ, ಬಳ್ಳಿಗಳು ಜೀವ ಜಲಕ್ಕಾಗಿ ಬಾಯಿ ಬಿಡ್ತಿವೆ. ಎಲ್ಲೆಲ್ಲೂ ಒಣಗಿರೋ ಭೂಮಿ. ನೀರಿಲ್ಲದೆ ಬೋರ್ವೆಲ್ಗಳು ಖಾಲಿ ಖಾಲಿಯಾಗಿವೆ.
ತೋಟಗಾರಿಕೆ ವಿವಿಯಲ್ಲೇ ಜೀವಜಲಕ್ಕೆ ಪರದಾಟ..!
ಎಲ್ಲಿ ನೋಡಿದ್ರೂ ಬರಡು ಭೂಮಿಯಂತಾಗಿದೆ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ಆವರಣ. ರಾಜ್ಯದ ಪ್ರತಿಷ್ಟಿತ ತೋಟಗಾರಿಕೆ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಗೆ ಪಡೆದಿರೋ ಈ ವಿವಿಗೆ ಜಲಕ್ಷಾಮ ಎದುರಾಗಿದೆ. ಭಾರಿ ಮಳೆಗೆ, ಪ್ರವಾಹದಿಂದ ಕೃಷ್ಣಾ, ಮಲಪ್ರಭಾ, ಘಟಪ್ರಭಾ 3 ನದಿಗಳು ತುಂಬಿ ತುಳುಕ್ತಿವೆ.
ಆದ್ರೆ, ತೋಟಗಾರಿಗೆ ವಿವಿಯಲ್ಲಿ ಹನಿ ಹನಿ ನೀರಿಗೂ ತತ್ವಾರ ಶುರುವಾಗಿದೆ. ಇದ್ರಿಂದ ಬೆಳೆಗಳು ಒಣಗಿ, ಸೊರಗಿ ಹೋಗ್ತಿವೆ. ವಿವಿ ಎದುರಿನ ಮೈದಾನದಲ್ಲಿರೋ ಹೋತೋಟ ಬಿಟ್ರೆ ಉಳಿದ ಬೆಳೆಗಳಿಗೆ ನೀರೇ ಇಲ್ಲ. ಹೀಗಾಗಿ ವಿಧ್ಯಾರ್ಥಿಗಳ ಪ್ರಾಯೋಗಿಕ ಅಧ್ಯಯನ ಹಾಗೂ ರೈತರಿಗೆ ಪ್ರಾಯೋಗಿಕ ಮಾಹಿತಿ ನೀಡಲು ವಿವಿಯವರು ಪರದಾಡ್ತಿದ್ದಾರೆ.
ತೋಟಗಾರಿಕೆ ವಿವಿಯಲ್ಲಿ ಫಲಪುಷ್ಪ ಸಸಿಗಳನ್ನು ಬೆಳೆಸೋದಕ್ಕಾಗಿಯೇ ಒಟ್ಟು 15 ಬೋರ್ ವೆಲ್ಗಳನ್ನ ಕೊರೆಸಲಾಗಿತ್ತು. ಆದರೆ 15 ಬೋರ್ಗಳ ಪೈಕಿ 13 ಬೋರ್ವೆಲ್ಗಳಲ್ಲಿ ನೀರೇ ಬರ್ತಿಲ್ಲ. ಕೇವಲ ಎರಡು ಕೊಳವೆ ಬಾವಿಗಳಲ್ಲಿ ಅಳಿದುಳಿದ ನೀರು ಬರ್ತಿದ್ದು, ಅದ್ರಲ್ಲೇ ಗಿಡಗಳಿಗೆ ನೀರು ಹಾಯಿಸ್ತಿದ್ದಾರೆ.
ವಿವಿಯಲ್ಲಿ ನೀರಿನ ಕೊರತೆ ನೀಗಿಸೋಕೆ ಆಲಮಟ್ಟಿ ಹಿನ್ನೀರಿನಿಂದ ಪೈಪ್ಲೈನ್ ಮೂಲಕ ನೀರು ಹರಿಸೋ ಬೇಡಿಕೆ ಇಡಲಾಗಿತ್ತು. ಅಂದು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಿಎಂ ಆಗಿದ್ದ ಹೆಚ್ಡಿಕೆ ವಿವಿಗೆ ಭೇಟಿ ನೀಡಿದ್ದ ವೇಳೆ 10 ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆ ರೂಪಿಸೋ ಭರವಸೆ ನೀಡಿದ್ರು. ಆದ್ರೆ, ಇದೂವರೆಗೂ ಕೊಟ್ಟ ಭರವಸೆ. ಬೇಡಿಕೆ ಇನ್ನೂ ಈಡೇರಿಲ್ಲ.
Published On - 11:51 am, Sun, 1 December 19