ಇಂದ್ರಜಿತ್ ಏನು ಹೇಳಿದ್ದಾರೆಂದು ಸದ್ಯಕ್ಕೆ ಹೇಳುವುದಿಲ್ಲ: ಸಂದೀಪ್ ಪಾಟೀಲ್

ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಡ್ರಗ್ಸ್​ ಜಾಲದ ನಂಟಿರುವ ಆರೋಪದ ಬಗ್ಗೆ ಇಂದು ವಿಚಾರಣೆಗೆ ಹಾಜರಾಗಿದ್ದ ಇಂದ್ರಜಿತ್ ಲಂಕೇಶ್ ಅವರು ಸಿಸಿಬಿ ಇನ್ಸ್‌ಪೆಕ್ಟರ್‌ ಬಳಿ ಹಲವು ಮಾಹಿತಿಯನ್ನು ನೀಡಿದ್ದಾರೆ ಎಂದು ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ತಿಳಿಸಿದ್ದಾರೆ. ಇಂದ್ರಜಿತ್ ಲಂಕೇಶ್ ನೀಡಿರುವ ಹಲವು ಮಾಹಿತಿಗಳನ್ನು ಆಧರಿಸಿ ತನಿಖೆ ನಡೆಸುತ್ತೇವೆ. ತನಿಖೆ ಮುಗಿದ ಬಳಿಕ ನಾವು ಎಲ್ಲಾ ಮಾಹಿತಿಯನ್ನು ನಿಮಗೆ ನೀಡುತ್ತೇವೆ. ಹಾಗಾಗಿ ಅವರು ಏನು ಹೇಳಿದ್ದಾರೆಂದು ಸದ್ಯಕ್ಕೆ ಹೇಳಲಾಗುವುದಿಲ್ಲ ಎಂದು ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ಹೇಳಿದರು. ನೇರವಾಗಿ […]

ಇಂದ್ರಜಿತ್ ಏನು ಹೇಳಿದ್ದಾರೆಂದು ಸದ್ಯಕ್ಕೆ ಹೇಳುವುದಿಲ್ಲ: ಸಂದೀಪ್ ಪಾಟೀಲ್

Updated on: Aug 31, 2020 | 5:07 PM

ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಡ್ರಗ್ಸ್​ ಜಾಲದ ನಂಟಿರುವ ಆರೋಪದ ಬಗ್ಗೆ ಇಂದು ವಿಚಾರಣೆಗೆ ಹಾಜರಾಗಿದ್ದ ಇಂದ್ರಜಿತ್ ಲಂಕೇಶ್ ಅವರು ಸಿಸಿಬಿ ಇನ್ಸ್‌ಪೆಕ್ಟರ್‌ ಬಳಿ ಹಲವು ಮಾಹಿತಿಯನ್ನು ನೀಡಿದ್ದಾರೆ ಎಂದು ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಇಂದ್ರಜಿತ್ ಲಂಕೇಶ್ ನೀಡಿರುವ ಹಲವು ಮಾಹಿತಿಗಳನ್ನು ಆಧರಿಸಿ ತನಿಖೆ ನಡೆಸುತ್ತೇವೆ. ತನಿಖೆ ಮುಗಿದ ಬಳಿಕ ನಾವು ಎಲ್ಲಾ ಮಾಹಿತಿಯನ್ನು ನಿಮಗೆ ನೀಡುತ್ತೇವೆ. ಹಾಗಾಗಿ ಅವರು ಏನು ಹೇಳಿದ್ದಾರೆಂದು ಸದ್ಯಕ್ಕೆ ಹೇಳಲಾಗುವುದಿಲ್ಲ ಎಂದು ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ಹೇಳಿದರು.

ನೇರವಾಗಿ ಖಾಸಗಿ ಹೋಟೆಲ್​ಗೆ ತೆರಳಿದ ಇಂದ್ರಜಿತ್​..
ಇಂದು ಬೆಳ್ಳಿಗೆ CCB ವಿಚಾರಣೆಗೆ ಮನೆಯಿಂದ ಆಗಮಿಸಿದ್ದ ಇಂದ್ರಜಿತ್ ಲಂಕೇಶ್​, ವಿಚಾರಣೆಯ ಬಳಿಕ ಮನೆಗೆ ತೆರಳದೇ, ಜಯನಗರದ ಖಾಸಗಿ ಹೋಟೇಲ್​ನಲ್ಲಿ ವಾಸ್ತವ್ಯ ಹೂಡಿದ್ದಾರೆ.

6 ಪುಟಗಳ ಹೇಳಿಕೆ ದಾಖಲಿಸಿಕೊಂಡ ಸಿಸಿಬಿ..
ಇನ್ನು ಇಂದು ವಿಚಾರಣೆಗೆ ಹಾಜರಾಗಿದ್ದ ಇಂದ್ರಜಿತ್ ಲಂಕೇಶ್ ಅವರಿಂದ ಸಂಪೂರ್ಣ ಮಾಹಿತಿ ಪಡೆದ CCB ಅಧಿಕಾರಿಗಳು 6 ಪುಟಗಳ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ನಟ-ನಟಿ, ಸಂಗೀತ ನಿರ್ದೇಶಕ, ಉದ್ಯಮಿಗಳ ಮಕ್ಕಳು ಸೇರಿದಂತೆ ಸುಮಾರು 15 ಹೆಸರುಗಳನ್ನು ಸಿಸಿಬಿ ಅಧಿಕಾರಿಗಳ ಮುಂದೆ ಇಂದ್ರಜಿತ್ ಬಹಿರಂಗ ಪಡಿಸಿದ್ದಾರೆ. ಜೊತೆಗೆ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ನಟ-ನಟಿಯರದ್ದೇ ಹೆಚ್ಚು ಹೆಸರು ಕೇಳಿಬಂದಿದ್ದು,10ಕ್ಕೂ ಹೆಚ್ಚು ಫೋಟೋಗಳು, ಹಲವು ಫೋನ್‌ ನಂಬರ್‌ಗಳು, ಹಾಗೂ ಕೆಲ ಪಾರ್ಟಿಯ ಹಾಗೂ ನಶೆಯಲ್ಲಿರುವಂಥಹ ವೀಡಿಯೋ ಕ್ಲಿಪ್​​ಗಳನ್ನು CCB ಅಧಿಕಾರಿಗಳಿಗೆ ನೀಡಿದ್ದಾರೆ ಎನ್ನಲಾಗಿದೆ.

ಈಗಾಗಲೇ ಸಿಸಿಬಿ ಪೊಲೀಸರು ಪ್ರಾಥಮಿಕವಾಗಿ ಹಲವು ಮಾಹಿತಿ ಕಲೆ ಹಾಕಿದ್ದು, ಈಗ ಇಂದ್ರಜಿತ್‌ ನೀಡಿರುವ ಮಾಹಿತಿಗೂ ಹಾಗೂ ಸಿಸಿಬಿ ಪೊಲೀಸರು ಕಲೆಹಾಕಿರುವ ಮಾಹಿತಿಗೂ, ಹೆಚ್ಚು ಸಾಮ್ಯತೆ ಎಂಬುದು ಕೇಳಿಬಂದಿದೆ.

ಇದನ್ನೂ ಓದಿ:‘ನಿನ್ನೆ, ಮೊನ್ನೆ ಬಂದವರಿಗೆ ನಾನು ಹೆದರಲ್ಲ.. ನಾನು ರಕ್ಷಣೆ ಕೇಳುವುದಿಲ್ಲ’

Published On - 4:50 pm, Mon, 31 August 20