ಭಾರತದ ಸಹಭಾಗಿತ್ವ ಸಶಕ್ತಗೊಳಿಸಲು ನಾವು ಬದ್ಧ-ಅಮೆರಿಕ

|

Updated on: Feb 02, 2021 | 8:49 PM

ಅಮೆರಿಕ ಮತ್ತು ಭಾರತದ ರಕ್ಷಣಾ ಕಂಪನಿಗಳ ನಡುವೆ ಹೆಚ್ಚುತ್ತಿರುವ ಜಂಟಿ ಒಪ್ಪಂದಗಳು ಮತ್ತು ಕಾರ್ಯಗಳು ಭಾರತದಲ್ಲಿ ಇರುವ ರಕ್ಷಣಾ ಸರಬರಾಜುದಾರರ ಜಾಲವನ್ನು ಇನ್ನೂ ಸಧೃಢ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿವೆ ಎಂದರು.

ಭಾರತದ ಸಹಭಾಗಿತ್ವ ಸಶಕ್ತಗೊಳಿಸಲು ನಾವು ಬದ್ಧ-ಅಮೆರಿಕ
ಅಮೆರಿಕ- ಭಾರತದ ಬಾವುಟ
Follow us on

ಬೆಂಗಳೂರು: ಪರಸ್ಪರ ಸೇನಾ ಸಂಬಂಧಗಳನ್ನು ಹಾಗೂ ಸಹಕಾರವನ್ನು ಹೆಚ್ಚಿಸಿ ಅಮೆರಿಕ ಮತ್ತು ಭಾರತದ ನಡುವೆ ಬಾಂಧವ್ಯವನ್ನು ಇನ್ನೂ ಗಟ್ಟಿಗೊಳಿಸಲು ಅಮೆರಿಕ ಬದ್ಧವಾಗಿದೆ. ಇಂಡೋ ಪೆಸಿಫಿಕ್ ವಲಯದಲ್ಲಿ ಭಾರತ ಮತ್ತು ಅಮೆರಿಕದ ರಕ್ಷಣಾ ಸಹಭಾಗಿತ್ವಕ್ಕೆ ಅಮೆರಿಕ ಒತ್ತು ಕೊಡುವುದರ ಪ್ರತೀಕವಾಗಿ ಅಮೆರಿಕದ ವಿವಿಧ ವಿಭಾಗಗಳ ಉನ್ನತ ಅಧಿಕಾರಿಗಳನ್ನೊಳಗೊಂಡ 100 ಜನರ ನಿಯೋಗವು ಏರೋ ಇಂಡಿಯಾ 2021 ರಲ್ಲಿ ಭಾಗವಹಿಸುತ್ತಿದೆ.

ಏರೋ ಇಂಡಿಯಾ 2021ರ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಶಾರ್ಜೆ  ಡಿ ಅಫರ್ಸ್ ಡಾನ್ ಹೆಫ್ಲಿನ್ ಅವರು ಅಮೆರಿಕಕ್ಕೆ ಭಾರತ ಅತ್ಯಂತ ವಿಶ್ವಾಸಾರ್ಹ ರಕ್ಷಣಾ ಸಹಭಾಗಿಯಾಗಿದ್ದು, ಅದು ಪ್ರಪಂಚದಲ್ಲೇ ಅತ್ಯುತ್ತಮ ರಕ್ಷಣಾ ಸಲಕರಣೆಗಳ ಪ್ರಸ್ತಾಪವನ್ನು ತಂದಿದೆ ಎಂದರು. ಇಂಡೊ ಪೆಸಿಫಿಕ್ ವಲಯದಲ್ಲಿ ಭಾರತದ ಪಾತ್ರ ಬಹಳ ಮುಖ್ಯವಾಗಿದ್ದು, ನಮ್ಮ ಸಹಯೋಗವು ಎಲ್ಲಾ ದೇಶಗಳ ಸಮೃದ್ಧಿ ಮತ್ತು ಸುರಕ್ಷೆಯನ್ನು ಒಳಗೊಂಡ ನಿಯಮಾಧಾರಿತ ಅಂತಾರಾಷ್ಟ್ರೀಯ ವ್ಯವಸ್ಥೆ ಎಂಬ ಸಮಾನ ಪರಿಕಲ್ಪನೆಯನ್ನು ಆಧರಿಸಿದೆ ಎಂದರು.

ಅಮೆರಿಕ ಮತ್ತು ಭಾರತದ ರಕ್ಷಣಾ ಕಂಪನಿಗಳ ನಡುವೆ ಹೆಚ್ಚುತ್ತಿರುವ ಜಂಟಿ ಒಪ್ಪಂದಗಳು ಮತ್ತು ಕಾರ್ಯಗಳು ಭಾರತದಲ್ಲಿ ಇರುವ ರಕ್ಷಣಾ ಸರಬರಾಜುದಾರರ ಜಾಲವನ್ನು ಇನ್ನೂ ಸಧೃಢ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿವೆ. ಇದು ಇಂಡೊ ಪೆಸಿಫಿಕ್ ವಲಯದ ಸಹಭಾಗಿಗಳನ್ನು ಬಲಗೊಳಿಸುವ ಪ್ರಯತ್ನದ ಭಾಗವಾಗಿದೆ. ಈ ಕಂಪನಿಗಳು ಜಗತ್ತಿನಾದ್ಯಂತ ಮಾರುಕಟ್ಟೆಗಳಿಗೆ ರಫ್ತು ಮಾಡಲು ಉತ್ಪಾದನೆ ಮಾಡುವುದಲ್ಲದೆ ಉದ್ಯೋಗ ಸೃಷ್ಟಿಯನ್ನೂ ಮಾಡುತ್ತವೆ ಎಂದರು.

ಮಿಸ್ ಕೆಲ್ಲಿ ಎಲ್ ಸೇಬಾಲ್ಟ್, ಏರ್ ಫೋರ್ಸ್ ಇಂಟರ್ನ್ಯಾಷನಲ್ ಅಫೇರ್ಸ್, ಡೆಪ್ಯೂಟಿ ಅಂಡರ್ ಸೆಕ್ರೆಟರಿ ಅವರು, ಇಂಡೊ ಪೆಸಿಫಿಕ್ ಪ್ರಾಂತ್ಯದಲ್ಲಿ ಭಾರತ ನಮಗೆ ಅತಿ ಮುಖ್ಯ ರಕ್ಷಣಾ ಸಹಭಾಗಿಗಳಾಗಿರುವ ದೇಶಗಳಲ್ಲಿ ಒಂದಾಗಿದೆ. ಕೆಲವು ಉಪಕ್ರಮಗಳು, ಸಹಭಾಗಿತ್ವದ ಒಪ್ಪಂದಗಳು, ಅಮೆರಿಕದ ಅತ್ಯಾಧುನಿಕ ರಕ್ಷಣಾ ವ್ಯವಸ್ಥೆ ಹಾಗೂ ವೇದಿಕೆಗಳನ್ನು ಭಾರತದ ಸಶಸ್ತ್ರ ಸೇವೆಗಳಲ್ಲಿ ಬಳಸಲು ಸಹಾಯ ಮಾಡುವ ಮೂಲಕ ಈ ರಕ್ಷಣಾ ಸಂಬಂಧಗಳನ್ನು ಇನ್ನೂ ಹೆಚ್ಚು ಗಟ್ಟಿಯಾಗಿಸುತ್ತಿದ್ದೇವೆ ಎಂದರು.

ಲೆಫ್ಟಿನೆಂಟ್‌ ಜನರಲ್‌ ಡೇವಿಡ್‌ ಎ. ಕ್ರಮ್‌, 11ನೇ ಏರ್‌ಫೋರ್ಸ್ ಕಮಾಂಡರ್‌ ಅವರು ಅಮೆರಿಕ ಮತ್ತು ಭಾರತದ ನಡುವಿನ ಸಹಭಾಗಿತ್ವದ ಬದ್ಧತೆಗೆ ಏರೋ ಇಂಡಿಯಾ ಮತ್ತೊಂದು ಉತ್ತಮ ಉದಾಹರಣೆ,  ಬದಲಾಗುತ್ತಿರುವ ಅಂತರರಾಷ್ಟ್ರೀಯ ಪರಿಸರದಲ್ಲಿ ಅದರಲ್ಲೂ ಕಳೆದ ವರ್ಷ ಅಮೆರಿಕ ಮತ್ತು ಭಾರತದ ಸಹಭಾಗಿತ್ವವು ಮತ್ತಷ್ಟು ಮಹತ್ವ ಪಡೆದು ಕೊಂಡಿದೆ ಎಂದರು.

ಏರೋ ಇಂಡಿಯಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ B-1B ಲ್ಯಾನ್ಸರ್ ಹೆವಿ ಬಾಂಬರ್ ಫೆಬ್ರವರಿ 3 ರ ಉದ್ಘಾಟನಾ ದಿನದಂದು ಫ್ಲೈ ಬೈ ಮಾಡಲಿದೆ.  ಭಾರತ ಸ್ವಾತಂತ್ರಾ ನಂತರ ಇದೇ ಮೊದಲ ಬಾರಿಗೆ ಅಮೆರಿಕದ B-1B ಬಾಂಬರ್ ಭಾರತದ ನೆಲದ ಮೇಲೆ ಕಾಣಿಸಿಕೊಳ್ಳುವ ಮೂಲಕ ಇತಿಹಾಸ ಸೃಷ್ಟಿಸಲಿದೆ. B-1, 28ನೇ ಬಾಂಬ್ ವಿಂಗ್, ಎಲ್ಸ್ ವರ್ತ್ ಏರ್ ಫೋರ್ಸ್ ಬೇಸ್, ಸೌತ್ ಡಕೋಟದ ವಿಮಾನವಾಗಿದ್ದು ಈ B-1B ಲ್ಯಾನ್ಸರ್ ಸೂಪರ್ ಸಾನಿಕ್ ಹೆವಿ ಬಾಂಬರ್ ಆಗಿದೆ. ಇದೊಂದು ಅದ್ಭುತ ವಿಮಾನ. ಇದು ಜಗತ್ತಿನ ಎಲ್ಲಡೆ ಅಮೆರಿಕಕ್ಕೆ ಸೇರಿದ ಬೇಸ್ ಗಳಿಂದ ಹಾಗೂ ಫಾರ್ವರ್ಡ್-ಡಿಪ್ಲಾಯ್ಡ್ ಜಾಗಗಳಿಂದ ಕೂಡ ಮಿಷನ್ ಗಳನ್ನು ಸಫಲಗೊಳಿಸುವ ಸಾಮರ್ಥ್ಯ ಹೊಂದಿದೆ. ಇದು  ಅಮೆರಿಕದ ಏರ್ ಫೋರ್ಸ್ ನಲ್ಲಿ ಸಾಂಪ್ರದಾಯಿಕವಾಗಿ ಗೈಡೆಡ್ ಮತ್ತು ಅನ್ ಗೈಡೆಡ್ ಆಯುಧಗಳನ್ನು ಹೊರುತ್ತದೆ. ಇದು ಅಮೆರಿಕದ ಲಾಂಗ್-ರೇಂಜ್ ಬಾಂಬರ್ ಫೋರ್ಸ್ ಗೆ ಇರುವ ಬೆನ್ನೆಲುಬು ಎಂದೇ ಹೇಳಲಾಗುತ್ತದೆ.

 

ಬೆಂಗಳೂರು ಏರೋ ಇಂಡಿಯಾ 2021: ಸಿದ್ಧತೆ ಪರಿಶೀಲಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್