ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಜೂನ್ 6ರವರೆಗೆ ಮಳೆ ಮುನ್ಸೂಚನೆ: 5ರವರೆಗೆ ಯೆಲ್ಲೊ ಅಲರ್ಟ್​ ಘೋಷಣೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jun 02, 2021 | 5:29 PM

ಬೆಂಗಳೂರಿನಲ್ಲಿ ಮುಂದಿನ 2 ದಿನಗಳ ಕಾಲ ಉತ್ತಮ ಮಳೆ ಆಗಲಿದೆ. ಜೂನ್ 2ರಿಂದ 6ರವರೆಗೆ ಕರಾವಳಿಯಲ್ಲಿ ವ್ಯಾಪಕವಾಗಿ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಜೋರು ಮಳೆ ಸುರಿಯುವ ಸಾಧ್ಯತೆಯಿದೆ.

ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಜೂನ್ 6ರವರೆಗೆ ಮಳೆ ಮುನ್ಸೂಚನೆ: 5ರವರೆಗೆ ಯೆಲ್ಲೊ ಅಲರ್ಟ್​ ಘೋಷಣೆ
ಕರ್ನಾಟಕ ರಾಜ್ಯ ಹವಮಾನ ವರದಿ
Follow us on

ಬೆಂಗಳೂರು: ಕರ್ನಾಟಕ-ಕೇರಳ ಕರಾವಳಿಯಲ್ಲಿ ಹವಾಮಾನ ಬದಲಾವಣೆಯು ಮಳೆಗೆ ಪೂರಕವಾಗಿ ಬದಲಾಗಿದೆ. ಇದರ ಪರಿಣಾಮವಾಗಿ ಬೆಂಗಳೂರಿನಲ್ಲಿ ಮುಂದಿನ 2 ದಿನಗಳ ಕಾಲ ಉತ್ತಮ ಮಳೆ ಆಗಲಿದೆ. ಜೂನ್ 2ರಿಂದ 6ರವರೆಗೆ ಕರಾವಳಿಯಲ್ಲಿ ವ್ಯಾಪಕವಾಗಿ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಜೋರು ಮಳೆ ಸುರಿಯುವ ಸಾಧ್ಯತೆಯಿದೆ. ಕರ್ನಾಟಕದ ದಕ್ಷಿಣ ಮತ್ತು ಉತ್ತರ ಒಳನಾಡಿನಲ್ಲಿಯೂ ಈ ಅವಧಿಯಲ್ಲಿ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮಳೆ ಮುನ್ನೆಚ್ಚರಿಕೆ ನೀಡಿರುವ ಹವಾಮಾನ ಇಲಾಖೆಯು ಜೂನ್ 2, 3, 5ನೇ ತಾರೀಖುಗಳಿಗೆ ಯಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಬೆಳಗಾವಿ, ಧಾರವಾಡ, ಬಾಗಲಕೋಟೆ, ವಿಜಯಪುರ, ಬೀದರ್, ಕಲಬುರಗಿ, ಯಾದಗಿರಿಯಲ್ಲಿ ಭಾರಿ ಮಳೆ ಸಾಧ್ಯತೆಯಿದೆ ಎಂದು ಹೇಳಿದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಚಿತ್ರದುರ್ಗ ಜಿಲ್ಲೆಗಳಲ್ಲಿ ನಾಳೆಯಿಂದ ಮಳೆ ಆಗಲಿದೆ. ಹೀಗಾಗಿ ಎಲ್ಲ ಜಿಲ್ಲೆಗಳಿಗೂ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

ರಾಜ್ಯದ ಮೂರೂ ಕರಾವಳಿ ಜಿಲ್ಲೆಗಳಲ್ಲಿ ಇಂದು ಮಳೆಯಾಗಿದೆ. ಕರ್ನಾಟಕದ ಒಳನಾಡಿನ ಕೆಲವೆಡೆ ಮಳೆ ಆಗಿದೆ. ಪಣಂಬೂರು ಮತ್ತು ಬಾಗಲಕೋಟೆಗಳಲ್ಲಿ ತಲಾ 4, ಬೀದರ್​ ಜಿಲ್ಲೆಯಲ್ಲಿ 2 ಸೆಂಮೀ ಮಳೆಯಾಗಿದೆ. ಬೆಂಗಳೂರಿನಲ್ಲಿ ಮುಂದಿನ ಎರಡು ದಿನಗಳ ಕಾಲ ಉತ್ತಮ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

 

(Weather Forecast Heavy Rains in Karnataka including Bangalore for next three days)

ಇದನ್ನೂ ಓದಿ: ಹವಾಮಾನ ವರದಿ; ಜೂನ್​ 4ರ ತನಕ ರಾಜ್ಯಾದ್ಯಂತ ಗುಡುಗು ಸಹಿತ ಮಳೆ ಸಂಭವ; ಮತ್ತೆರೆಡು ದಿನದಲ್ಲಿ ಮುಂಗಾರು ಆರಂಭ

ಇದನ್ನೂ ಓದಿ: Karnataka Weather: ದಿನ ಗುಡುಗು ಸಹಿತ ಮಳೆ ಸಾಧ್ಯತೆ; ಮುಂಗಾರಿಗೆ ದಿನಗಣನೆ

Published On - 5:28 pm, Wed, 2 June 21