ಕೊರೊನಾ ಕಾಲದಲ್ಲಿ ಪ್ರಾಣಿಗಳ ನೆರವಿಗೆ ನಿಂತ ಕಾರವಾರದ ಸೇವಾ ಸಂಘ; ಹಸಿದ ಶ್ವಾನಗಳಿಗೆ ಊಟ ನೀಡಿ ಸಹಾಯ

ಸರಿಯಾಗಿ ಆಹಾರ ಸಿಗದೆ ಶ್ವಾನಗಳು ಪರಿತಪಿಸುವ ದೃಶ್ಯ ಈಗ ಸಾಮಾನ್ಯವಾಗಿದೆ. ಹೀಗಾಗಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಗುರುಪದ್ಮನಾಭ ಸೇವಾ ಸಂಘ ಶ್ವಾನಗಳಿಗೆ ಆಹಾರ ನೀಡಲು ಮುಂದಾಗಿದೆ. ಆ ಮೂಲಕ ಕಾರವಾರ ನಗರದ ಬೀದಿಬದಿಗಳಲ್ಲಿರುವ ಶ್ವಾನಗಳಿಗೆ ಪ್ರತಿನಿತ್ಯ ಆಹಾರವನ್ನ ಶ್ವಾನ ಪ್ರೇಮ ಮೆರೆಯುತ್ತಿದ್ದಾರೆ.

ಕೊರೊನಾ ಕಾಲದಲ್ಲಿ ಪ್ರಾಣಿಗಳ ನೆರವಿಗೆ ನಿಂತ ಕಾರವಾರದ ಸೇವಾ ಸಂಘ; ಹಸಿದ ಶ್ವಾನಗಳಿಗೆ ಊಟ ನೀಡಿ ಸಹಾಯ
ಹಸಿದ ಶ್ವಾನಗಳಿಗೆ ಊಟ ನೀಡಿ ಸಹಾಯ
Follow us
| Updated By: preethi shettigar

Updated on: Jun 02, 2021 | 5:17 PM

ಉತ್ತರ ಕನ್ನಡ: ಕೊರೊನಾ ಎರಡನೇ ಅಲೆಯ ಪರಿಣಾಮ ತೀವ್ರವಾಗಿದ್ದು, ಪರಿಸ್ಥಿತಿಯನ್ನು ಸುಧಾರಿಸಲು ಸರ್ಕಾರ ಲಾಕ್​ಡೌನ್ ಜಾರಿ ಮಾಡಿದ ಇದರಿಂದಾಗಿ ಬಡವರು,ನಿರ್ಗತಿಕರು ನಿತ್ಯದ ಒಂದು ಹೊತ್ತಿನ ಊಟಕ್ಕೆ ಪರದಾಡುವಂತಾಗಿದೆ. ಇಂತಹವರ ನೆರವಿಗಾಗಿ ಧಾವಿಸಿದ ಅದೆಷ್ಟೋ ಘಟನೆಗಳ ಬಗ್ಗೆ ನಾವು ಓದಿದ್ದೇವೆ ಆದರೆ ಈ ಪ್ರಕೃತಿಯಲ್ಲಿರುವ ಪ್ರಾಣಿಪಕ್ಷಿಗಳ ಪರಿಸ್ಥಿತಿ ಈಗ ಚಿಂತಾಜನಕವಾಗಿದೆ. ಅಂಗಡಿಗಳು, ಹೊಟೇಲುಗಳು ಬಂದ್ ಆಗಿದ್ದರಿಂದ ಶ್ವಾನಗಳ ಪರಿಸ್ಥಿತಿ ಶೋಚನೀಯವಾಗಿದೆ. ಇದನ್ನು ಮನಗಂಡ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸೇವಾ ಸಂಘವೊಂದು ಶ್ವಾನಗಳಿಗೆ ಆಹಾರ ನೀಡಿ ಮಾನವೀಯತೆ ಮೆರೆದಿದ್ದಾರೆ.

ಈಗಾಗಲೇ ಕರೋನಾ ನಿಯಂತ್ರಣದ ಸಲುವಾಗಿ ಕಟ್ಟುನಿಟ್ಟಿನ ಕ್ರಮ ಜಾರಿಯಲ್ಲಿದೆ. ಶ್ವಾನಗಳು ಮನುಷ್ಯ ನೀಡಿದ ಅನ್ನವನ್ನ ನಂಬಿಕೊಂಡಿವೆ. ಬೇರೆ ಪ್ರಾಣಿ ಪಕ್ಷಿಗಳಾದರೂ, ಬೇರೆ ಯಾವುದಾದರೂ ಆಹಾರವನ್ನಾದರೂ ಹುಡುಕಿ ತಿನ್ನಬಹುದು. ಆದರೆ ನಿಯತ್ತಿಗೆ ಹೆಸರಾದ ಶ್ವಾನಕ್ಕೆ ಮನುಷ್ಯ ಆಹಾರ ನೀಡಿದರಷ್ಟೆ ಅವುಗಳ ಹೊಟ್ಟೆ ತುಂಬಬಹುದು.

ಸರಿಯಾಗಿ ಆಹಾರ ಸಿಗದೆ ಶ್ವಾನಗಳು ಪರಿತಪಿಸುವ ದೃಶ್ಯ ಈಗ ಸಾಮಾನ್ಯವಾಗಿದೆ. ಹೀಗಾಗಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಗುರುಪದ್ಮನಾಭ ಸೇವಾ ಸಂಘ ಶ್ವಾನಗಳಿಗೆ ಆಹಾರ ನೀಡಲು ಮುಂದಾಗಿದೆ. ಆ ಮೂಲಕ ಕಾರವಾರ ನಗರದ ಬೀದಿಬದಿಗಳಲ್ಲಿರುವ ಶ್ವಾನಗಳಿಗೆ ಪ್ರತಿನಿತ್ಯ ಆಹಾರವನ್ನ ಶ್ವಾನ ಪ್ರೇಮ ಮೆರೆಯುತ್ತಿದ್ದಾರೆ.

ಇಂದು ಮನುಷ್ಯರಿಗೆ ಸರಿಯಾಗಿ ಊಟ ಸಿಗುತ್ತಿಲ್ಲ. ಅಂತದರಲ್ಲಿ ಪ್ರಾಣಿಗಳಿಗೆ ಆಹಾರ ಸಿಗುವುದು ಹೇಗೆ. ಹೀಗಅಗಿ ಸಂಘದ 22 ಜನರು ಸದಸ್ಯರು ಒಂದೊಂದು ವಸ್ತುವನ್ನ ಸಂಗ್ರಹಿಸಿ ಶ್ವಾನಗಳಿಗೆ ಆಹಾರ ತಯಾರಿಸುತ್ತಿದ್ದೇವೆ. ಮಧ್ಯಾಹ್ನ ಕಾರವಾರದ ವಿವಿಧ ಭಾಗಗಳಿಗೆ ಆಟೋದಲ್ಲಿ ಬಂದು ಆಹಾರ ನೀಡಿ, ಶ್ವಾನಗಳು ಆಹಾರಕ್ಕಾಗಿ ಪರಿತಪಿಸುವ ಸ್ಥಿತಿಯನ್ನು ತಪ್ಪಿಸುತ್ತಿದ್ದೇವೆ. ಇದರಿಂದ ನಮ್ಮ ಮನಸ್ಸಿಗೆ ಖುಷಿಯಾಗುತ್ತಿದೆ ಎಂದು ಗುರುಪದ್ಮನಾಭ ಸೇವಾ ಸಂಘದ ಸದಸ್ಯೆ ಸರಸ್ವತಿ ತಿಳಿಸಿದ್ದಾರೆ.

ಒಟ್ಟಿನಲ್ಲಿ ಕೊರೊನಾ ಸಂಕಷ್ಟದ ಈ ಕಾಲದಲ್ಲಿ ಇಡೀ ಮನುಕುಲವೇ ಸಂಕಷ್ಟದ ಸ್ಥಿತಿಯಲ್ಲಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಬೀದಿ ಪ್ರಾಣಿಗಳಿಗೆ ಅನ್ನ ಆಹಾರವನ್ನ ನೀಡಿ ಮಾನವೀಯತೆ ಮೆರೆಯುತ್ತಿರುವುದು ನಿಜಕ್ಕೂ ಪ್ರಶಂಸನೀಯವಾಗಿದೆ.

ಇದನ್ನೂ ಓದಿ:

ದೇವನಹಳ್ಳಿ ಇಂದಿರಾ ಕ್ಯಾಂಟೀನ್​ಗೆ ಬಾರದ ಜನ; ಸಾರ್ವಜನಿಕರ ಬಳಿಯೇ ಊಟ ಕೊಂಡೊಯ್ದ ಅಧಿಕಾರಿಗಳು

ಬಳ್ಳಾರಿಯಿಂದ ಕೆನಡಾಕ್ಕೆ ಹೊರಟ ಬೀದಿ ನಾಯಿ! ನಾಯಿಮರಿಯನ್ನು ದತ್ತು ಪಡೆದ ಕೆನಡಾದ ಮಹಿಳೆ

ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?
Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು