ಕೊರೊನಾ ಸಂಕಷ್ಟ: ತಂದೆ ಅಂತ್ಯಸಂಸ್ಕಾರದ ವೇಳೆ ಮಗನೂ ಸಾವು; ಮತ್ತೊಂದೆಡೆ ತಂದೆ-ತಾಯಿ ಕಳೆದುಕೊಂಡ 8 ಮಕ್ಕಳು

ಕೊರೊನಾ ಸಂಕಷ್ಟ: ತಂದೆ ಅಂತ್ಯಸಂಸ್ಕಾರದ ವೇಳೆ ಮಗನೂ ಸಾವು; ಮತ್ತೊಂದೆಡೆ ತಂದೆ-ತಾಯಿ ಕಳೆದುಕೊಂಡ 8 ಮಕ್ಕಳು
ಸಾಂದರ್ಭಿಕ ಚಿತ್ರ

ಭುಜಂಗ ಶೆಟ್ಟಿ ಪುತ್ರ ಶೈಲೇಶ್ ಶೆಟ್ಟಿಗೆ ಹೃದಯಾಘಾತವಾಗಿದೆ. ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ತಲುಪುವ ವೇಳೆಗಾಗಲೇ ಕೊನೆಯುಸಿರೆಳೆದಿದ್ದಾರೆ. ಶೈಲೇಶ್ ಶೆಟ್ಟಿ, ಆಸ್ಟ್ರೇಲಿಯಾದಲ್ಲಿ ಉದ್ಯೋಗದಲ್ಲಿದ್ದು, ಎರಡು ತಿಂಗಳ ಹಿಂದೆಯಷ್ಟೇ ಊರಿಗೆ ಬಂದಿದ್ದರು.

TV9kannada Web Team

| Edited By: ganapathi bhat

Jun 02, 2021 | 6:07 PM

ಮಂಗಳೂರು: ತಂದೆ ಅಂತ್ಯಸಂಸ್ಕಾರದ ವೇಳೆ ಕುಸಿದು ಬಿದ್ದು ಮಗನೂ ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ಬೈಲುಗುತ್ತು ಕೊಪ್ಪಳದಲ್ಲಿ ನಡೆದಿದೆ. ತಂದೆ ಭುಜಂಗ ಶೆಟ್ಟಿ ನಿನ್ನೆ ರಾತ್ರಿ ಕೊರೊನಾದಿಂದ ಮೃತಪಟ್ಟಿದ್ದರು. ಅವರ ಅಂತ್ಯಕ್ರಿಯೆ ವೇಳೆ ಇಂದು (ಜೂನ್ 2) ಹೃದಯಾಘಾತದಿಂದ ಮಗ ಕೂಡ ಮೃತಪಟ್ಟಿದ್ದಾರೆ. ಭುಜಂಗ ಶೆಟ್ಟಿಯವರ ಕಿರಿಯ ಪುತ್ರ ಶೈಲೇಶ್ ಶೆಟ್ಟಿ(44) ಸಾವನ್ನಪ್ಪಿದ್ದಾರೆ.

ಭುಜಂಗ ಶೆಟ್ಟಿ ಪುತ್ರ ಶೈಲೇಶ್ ಶೆಟ್ಟಿಗೆ ಹೃದಯಾಘಾತವಾಗಿದೆ. ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ತಲುಪುವ ವೇಳೆಗಾಗಲೇ ಕೊನೆಯುಸಿರೆಳೆದಿದ್ದಾರೆ. ಶೈಲೇಶ್ ಶೆಟ್ಟಿ, ಆಸ್ಟ್ರೇಲಿಯಾದಲ್ಲಿ ಉದ್ಯೋಗದಲ್ಲಿದ್ದು, ಎರಡು ತಿಂಗಳ ಹಿಂದೆಯಷ್ಟೇ ಊರಿಗೆ ಬಂದಿದ್ದರು.

ಮೃತ ಭುಜಂಗ ಶೆಟ್ಟಿಯವರ ಮನೆಯಲ್ಲಿ ಅವರ ಪತ್ನಿಯ ಹೊರತಾಗಿ ಇತರ ಎಲ್ಲರಿಗೂ ಕೊರೊನಾ ಪಾಸಿಟಿವ್ ಆಗಿದೆ. ಆದರೆ, ಶೈಲೇಶ್‌ ಶೆಟ್ಟಿ ಹಾರಾಡಿ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿದ್ದುದರಿಂದ, ಅವರಿಗೆ ಕೊರೊನಾ ಸೋಂಕು ಬಾಧಿಸಿರಲಿಲ್ಲ. ಹೀಗಿದ್ದರೂ ದುರ್ವಿಧಿ ಎಂಬಂತೆ ಈ ಘಟನೆ ಸಂಭವಿಸಿದೆ.

ಬಾಗಲಕೋಟೆ: ಎಂಟು ಜನ ಮಕ್ಕಳನ್ನು ಅಗಲಿದ ದಂಪತಿ ಕೊರೊನಾ ಸೋಂಕಿನಿಂದ ಪತಿ- ಪತ್ನಿ ಇಬ್ಬರೂ ಮೃತಪಟ್ಟ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ರಾಮಪ್ಪ ಹೂಗಾರ (54) ಹಾಗೂ ಪತ್ನಿ ದುಂಡಮ್ಮ ಹೂಗಾರ (47) ಕೊವಿಡ್​ನಿಂದ ಮೃತಪಟ್ಟಿದ್ದಾರೆ. ಮೇ 22ರಂದು ಕೊರೊನಾದಿಂದ ರಾಮಪ್ಪ ಹೂಗಾರ ಮೃತರಾಗಿದ್ದರು. ಆ ಬಳಿಕ, ದುಂಡವ್ವ ಮೇ 29ರಂದು ಸಾವನ್ನಪ್ಪಿದ್ದಾರೆ. ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ಘಟನೆ ನಡೆದಿದೆ.

ಮೊದಲು ರಾಮಪ್ಪ ಹೂಗಾರಗೆ ಸೊಂಕು ಕಾಣಿಸಿಕೊಂಡು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು. ಆ ಬಳಿಕ, ಪತಿಯ ಆರೈಕೆ ಮಾಡುತಿದ್ದ ಪತ್ನಿಗೂ ಸೊಂಕು ತಗುಲಿತ್ತು. ವಾರದ ಬಳಿಕ ಪತ್ನಿಯೂ ಮೃತಪಟ್ಟಿದ್ದಾರೆ. ವಿಜಯಪುರ ಖಾಸಗಿ ಆಸ್ಪತ್ರೆಯಲ್ಲಿ ಸಾವು ಸಂಭವಿಸಿದೆ. ತಂದೆ ತಾಯಿಗಾಗಿ ಮಕ್ಕಳು ಎಂಟು ಲಕ್ಷ ಹಣ ಖರ್ಚು ಮಾಡಿದರೂ ಬದುಕಿಲ್ಲ ಎಂದು ಬೇಸರ ವ್ಯಕ್ತವಾಗಿದೆ.

ಮೃತ ದಂಪತಿಗೆ ಎಂಟು ಮಕ್ಕಳಿದ್ದಾರೆ. ಎಂಟು ಜನ ಮಕ್ಕಳನ್ನು ದಂಪತಿ ಅಗಲಿ ಹೋಗಿದ್ದಾರೆ. ಏಳು ಜನ ಹೆಣ್ಣು ಮಕ್ಕಳು ಹಾಗೂ ಓರ್ವ ಗಂಡು ಮಗನನ್ನು ಅಗಲಿದ್ದಾರೆ. ಆರು ಜನ ಹೆಣ್ಣು ಮಕ್ಕಳ‌ ಮದುವೆಯಾಗಿದೆ. 16 ವರ್ಷದ ಪುತ್ರಿ, ಹಾಗೂ 17 ವರ್ಷದ ಮಗ ಇದ್ದಾರೆ‌‌‌.

ಇದನ್ನೂ ಓದಿ: ಕೊರೊನಾದಿಂದ ಮೃತಪಟ್ಟ ಸಾವಿರಕ್ಕೂ ಹೆಚ್ಚು ಮಂದಿಯ ಅಸ್ಥಿ ವಿಸರ್ಜನೆ; ಸರ್ಕಾರದ ಪರವಾಗಿ ಸಂಕಲ್ಪಕ್ಕೆ ಕುಳಿತ ಆರ್ ಅಶೋಕ್

ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೂ ಉಚಿತವಾಗಿ ಕೊರೊನಾ ಲಸಿಕೆ ಪೂರೈಸಲಿ; ಕೇರಳ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ

Follow us on

Related Stories

Most Read Stories

Click on your DTH Provider to Add TV9 Kannada