ಕೊರೊನಾದಿಂದ ಮೃತಪಟ್ಟ ಸಾವಿರಕ್ಕೂ ಹೆಚ್ಚು ಮಂದಿಯ ಅಸ್ಥಿ ವಿಸರ್ಜನೆ; ಸರ್ಕಾರದ ಪರವಾಗಿ ಸಂಕಲ್ಪಕ್ಕೆ ಕುಳಿತ ಆರ್ ಅಶೋಕ್

ಕೊರೊನಾದಿಂದ ಮೃತಪಟ್ಟ ಸಾವಿರಕ್ಕೂ ಹೆಚ್ಚು ಮಂದಿಯ ಅಸ್ಥಿ ವಿಸರ್ಜನೆ; ಸರ್ಕಾರದ ಪರವಾಗಿ ಸಂಕಲ್ಪಕ್ಕೆ ಕುಳಿತ ಆರ್ ಅಶೋಕ್
ಅಸ್ಥಿ ವಿಸರ್ಜನೆ ಕಾರ್ಯದಲ್ಲಿ ಭಾಗಿಯಾದ ಆರ್ ಅಶೋಕ್

ಭಾನುಪ್ರಕಾಶ್ ಶರ್ಮ ನೇತೃತ್ವದಲ್ಲಿ ಅಂತಿಮ ವಿಧಿವಿಧಾನ ಕಾರ್ಯಗಳನ್ನು ಮಾಡಲಾಗುತ್ತಿದೆ. 12ಕ್ಕೂ ಹೆಚ್ಚು ಪುರೋಹಿತರಿಂದ ಕೊವಿಡ್ ಮೃತರಿಗೆ ಶ್ರದ್ಧಾ ಕಾರ್ಯ ನೆರವೇರಿದೆ. ಕರ್ನಾಟಕ ಸರ್ಕಾರದ ಪರವಾಗಿ ಸಚಿವ ಆರ್ ಅಶೋಕ್ ಸಂಕಲ್ಪಕ್ಕೆ ಕುಳಿತು ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.

TV9kannada Web Team

| Edited By: ganapathi bhat

Jun 02, 2021 | 4:28 PM

ಮಂಡ್ಯ: ಕೊರೊನಾದಿಂದ ಮೃತಪಟ್ಟಿರುವ ಸಾವಿರಕ್ಕೂ ಹೆಚ್ಚು ಮಂದಿಯ ಅಸ್ಥಿ ವಿಸರ್ಜನಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಚಿವ ಆರ್. ಅಶೋಕ್ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಬೆಳಕವಾಡಿ ಗ್ರಾಮದಲ್ಲಿರುವ ದೇವಾಲಯಕ್ಕೆ ಆಗಮಿಸಿದ್ದಾರೆ. ಕೊವಿಡ್​ನಿಂದ ಮೃತಪಟ್ಟಿರುವವರ ಮುಕ್ತಿ ಕಾರ್ಯಕ್ಕೆ ರಾಜ್ಯ ಸರ್ಕಾರ ಮುಂದಾಗಿತ್ತು. ಇಂದು (ಜೂನ್ 1) ಸಾಮೂಹಿಕ ಅಸ್ಥಿ ವಿಸರ್ಜನಾ ಕಾರ್ಯದಲ್ಲಿ ಆರ್. ಅಶೋಕ್ ಭಾಗಿಯಾಗಿದ್ದಾರೆ. ಕಾವೇರಿ ನದಿಗೆ ಸಾವಿರಕ್ಕೂ ಹೆಚ್ಚು ಅಸ್ಥಿಗಳ ಸಾಮೂಹಿಕ ವಿಸರ್ಜನೆ ಮಾಡಲಿದ್ದು, ಶ್ರೀ ಕಾಶಿ ವಿಶ್ವೇಶ್ವರ ದೇವಾಲಯ ಸಮೀಪದ ಕಾವೇರಿ ನದಿ ಬಳಿ ಕಾರ್ಯಕ್ರಮ ನಡೆಯುತ್ತಿದೆ.

ಭಾನುಪ್ರಕಾಶ್ ಶರ್ಮ ನೇತೃತ್ವದಲ್ಲಿ ಅಂತಿಮ ವಿಧಿವಿಧಾನ ಕಾರ್ಯಗಳನ್ನು ಮಾಡಲಾಗುತ್ತಿದೆ. 12ಕ್ಕೂ ಹೆಚ್ಚು ಪುರೋಹಿತರಿಂದ ಕೊವಿಡ್ ಮೃತರಿಗೆ ಶ್ರದ್ಧಾ ಕಾರ್ಯ ನೆರವೇರಿದೆ. ಕರ್ನಾಟಕ ಸರ್ಕಾರದ ಪರವಾಗಿ ಸಚಿವ ಆರ್ ಅಶೋಕ್ ಸಂಕಲ್ಪಕ್ಕೆ ಕುಳಿತು ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.

ಬೆಂಗಳೂರಿನ ಚಿತಗಾರಗಳಲ್ಲಿ ನಡೆದಿದ್ದ ಕೊವಿಡ್‌ನಿಂದ ಮೃತಪಟ್ಟವರ ಅಂತ್ಯಕ್ರಿಯೆಯ ಅಸ್ಥಿ ಪಡೆಯಲು ಸಂಬಂಧಿಕರು ಬಂದಿಲ್ಲ. ಕಳೆದ ತಿಂಗಳು ಕೊರೊನಾ ಸೋಂಕಿತರ ಮರಣ, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಅಧಿಕವಾಗಿತ್ತು. ಸೋಂಕಿತರ ಸಂಖ್ಯೆಯೂ ಹೆಚ್ಚಾಗಿತ್ತು. ಆ ವೇಳೆ, ಅಂತ್ಯಕ್ರಿಯೆ ಬಳಿಕ ಅಸ್ಥಿ ಪಡೆಯಲು ಸಂಬಂಧಿಕರು ಬಾರದ ಹಿನ್ನೆಲೆಯಲ್ಲಿ ಸರ್ಕಾರದಿಂದಲೇ ಮುಕ್ತಿ ಕಾರ್ಯ ನಡೆಸಿಕೊಡಲಾಗಿದೆ.

ಲಾಕ್​ಡೌನ್ ಮುಂದುವರಿಸಿಸುವುದು ಸೂಕ್ತ ಜೂನ್ 7ರ ನಂತರ ರಾಜ್ಯದಲ್ಲಿ ಲಾಕ್‌ಡೌನ್ ಮುಂದುವರಿಸಿ. ಲಾಕ್‌ಡೌನ್ ಮುಂದುವರಿಸುವುದು ಸೂಕ್ತ ಎಂದು ಬೆಳಕವಾಡಿಯಲ್ಲಿ ಕಂದಾಯ ಸಚಿವ ಆರ್.ಅಶೋಕ್ ಹೇಳಿಕೆ ನೀಡಿದ್ದಾರೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬೆಳಕವಾಡಿ ಗ್ರಾಮದಲ್ಲಿ ಮಾತನಾಡಿದ್ದಾರೆ. ಈಗಾಗಲೇ ಹಲವು ರಾಜ್ಯಗಳಲ್ಲಿ ಲಾಕ್‌ಡೌನ್ ಮುಂದುವರಿಕೆ ಮಾಡಲಾಗಿದೆ. ಹೀಗಾಗಿ ರಾಜ್ಯದಲ್ಲೂ ಲಾಕ್‌ಡೌನ್ ಮುಂದುವರಿಕೆ ಸೂಕ್ತ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದಲ್ಲಿ ಪ್ರತೀ ನಿತ್ಯ ಪಾಸಿಟಿವ್ ಕೇಸ್ 3 ಸಾವಿರಕ್ಕೆ ಇಳಿಯುವರೆಗೆ ಲಾಕ್​ಡೌನ್ ವಿಸ್ತರಿಸೋದು ಸೂಕ್ತ. ಲಾಕ್‌ಡೌನ್ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಂತಿಮ ತೀರ್ಮಾನ ಮಾಡುತ್ತಾರೆ ಎಂದು ಹೇಳಿದ್ದಾರೆ. ಜೊತೆಗೆ, ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸುವ ವಿಚಾರವಾಗಿ ತಮ್ಮ ಅಭಿಪ್ರಾಯ ಹೇಳಿದ್ದಾರೆ. ಕೇಂದ್ರ ಸರ್ಕಾರದಂತೆ ರಾಜ್ಯ ಸರ್ಕಾರ ನಡೆದುಕೊಳ್ಳಬೇಕು. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಆರ್. ಅಶೋಕ್ ತಿಳಿಸಿದ್ದಾರೆ.

ಇದನ್ನೂ ಓದಿ: 1 ಸಾವಿರ ಅನಾಥ ಶವಗಳ ಅಸ್ಥಿಯ ಗೌರವಯುತ ವಿಸರ್ಜನೆ ಮಾಡಲಿದೆ ಕರ್ನಾಟಕ ಸರ್ಕಾರ

ವೃದ್ಧ ತಾಯಿಯ ಅಸ್ಥಿ ತೆಗೆದುಕೊಂಡು ಹೋಗುತ್ತಿದ್ದ ಕಾರಿಗೂ ತಡೆ; ಕಾರು ಬಿಡಲು ಸಾಧ್ಯವಿಲ್ಲ ಅಂತಾ ವಾಪಸ್ ಕೈ ಮುಗಿದ ಪೊಲೀಸರು

Follow us on

Related Stories

Most Read Stories

Click on your DTH Provider to Add TV9 Kannada