ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೂ ಉಚಿತವಾಗಿ ಕೊರೊನಾ ಲಸಿಕೆ ಪೂರೈಸಲಿ; ಕೇರಳ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ

Kerala Assembly: "ವ್ಯಾಕ್ಸಿನೇಷನ್ ಅನ್ನು ವೇಗಗೊಳಿಸಲು ನಾವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಾದರೆ, ಇದು ಆರ್ಥಿಕತೆಗೆ ಸಹಾಯವಾಗಲಿದೆ. ಸಾಂಕ್ರಾಮಿಕ ರೋಗವನ್ನು ಎದುರಿಸಲು ಮತ್ತು ಸಾರ್ವತ್ರಿಕ ವ್ಯಾಕ್ಸಿನೇಷನ್ ಅನ್ನು ಖಚಿತಪಡಿಸಿಕೊಳ್ಳಲು ಎಲ್ಲರೂ ಕೈಜೋಡಿಸಬೇಕು ಎಂದ ಆರೋಗ್ಯ ಸಚಿವೆ ವೀಣಾ ಜಾರ್ಜ್

ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೂ ಉಚಿತವಾಗಿ ಕೊರೊನಾ ಲಸಿಕೆ ಪೂರೈಸಲಿ; ಕೇರಳ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ
ಕೇರಳ ವಿಧಾನಸಭೆ (ಸಂಗ್ರಹ ಚಿತ್ರ)
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jun 02, 2021 | 3:54 PM

ತಿರುವನಂತಪುರಂ: ಕೇಂದ್ರ ಸರ್ಕಾರ  ಕೊವಿಡ್ -19 ಲಸಿಕೆಗಳನ್ನು ಎಲ್ಲಾ ರಾಜ್ಯಗಳಿಗೆ ಉಚಿತವಾಗಿ ನೀಡಬೇಕೆಂದು ಒತ್ತಾಯಿಸಿ ಕೇರಳ ವಿಧಾನಸಭೆ ಬುಧವಾರ ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಿತು. ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ವೀಣಾ ಜಾರ್ಜ್ ಅವರು ರಾಜ್ಯದಲ್ಲಿ ತೀವ್ರವಾದ ಲಸಿಕೆ ಕೊರತೆ ಅನುಭವಿಸುತ್ತಿರುವ ಹೊತ್ತಿನಲ್ಲಿಯೇ ನಿರ್ಣಯವನ್ನು ಸದನದಲ್ಲಿ ಮಂಡಿಸಿದರು.ಲಸಿಕೆಗಳನ್ನು ಸಕಾಲಿಕವಾಗಿ ವಿತರಿಸುವಂತೆ ನಿರ್ಣಯವು ಕೇಂದ್ರ ಸರ್ಕಾರವನ್ನು ಕೋರಿದೆ.

ಕೊವಿಡ್ -19 ರ ವಿರುದ್ಧ ಹೋರಾಡಲು, ನಾವು ಉಚಿತ ಸಾರ್ವತ್ರಿಕ ವ್ಯಾಕ್ಸಿನೇಷನ್ ಅನ್ನು ಒದಗಿಸಬೇಕಾಗಿದೆ, ಅದು ಸಮಾಜದ ಎಲ್ಲಾ ವರ್ಗಗಳನ್ನು ವೈರಸ್ ನಿಂದ ರಕ್ಷಿಸಲಾಗಿದೆ ಎಂದು ಖಚಿತಪಡಿಸುತ್ತದೆ ಎಂದು ಸಚಿವೆ ವೀಣಾ ಜಾರ್ಜ್ ಹೇಳಿದರು.

ಕೊವಿಡ್ -19 ರ ಮೊದಲ ಅಲೆ  ಆರ್ಥಿಕತೆಯನ್ನು ದುರ್ಬಲಗೊಳಿಸಿದೆ ಮತ್ತು ಈಗ ದೇಶವು ಎರಡನೇ ಅಲೆಯನ್ನು ಎದುರಿಸುತ್ತಿದೆ.

“ವ್ಯಾಕ್ಸಿನೇಷನ್ ಅನ್ನು ವೇಗಗೊಳಿಸಲು ನಾವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಾದರೆ, ಇದು ಆರ್ಥಿಕತೆಗೆ ಸಹಾಯವಾಗಲಿದೆ. ಸಾಂಕ್ರಾಮಿಕ ರೋಗವನ್ನು ಎದುರಿಸಲು ಮತ್ತು ಸಾರ್ವತ್ರಿಕ ವ್ಯಾಕ್ಸಿನೇಷನ್ ಅನ್ನು ಖಚಿತಪಡಿಸಿಕೊಳ್ಳಲು ಎಲ್ಲರೂ ಕೈಜೋಡಿಸಬೇಕು ಎಂದು ಅವರು ಹೇಳಿದರು.

ತಮ್ಮ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಆಡಳಿತಾರೂಢ ಸಿಪಿಐ (ಎಂ) ನೇತೃತ್ವದ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ ಮತ್ತು ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಸದಸ್ಯರು ಸಣ್ಣ ಬದಲಾವಣೆಗಳನ್ನು ಸೂಚಿಸಿದ ನಂತರ ನಿರ್ಣಯವನ್ನು ಸರ್ವಾನುಮತದಿಂದ ಬೆಂಬಲಿಸಿದರು.

ನಿರ್ಣಯ ಮಂಡನೆಗೆ  ಮುನ್ನ ವಿಧಾನಸಭೆಯಲ್ಲಿ  ಗದ್ದಲ 

ಕೊವಿಡ್  ಲಸಿಕೆ ಉಚಿತವಾಗಿ  ನೀಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುವ  ನಿರ್ಣಯ ಮಂಡನೆಗೆ  ಮುನ್ನ ಮಾತನಾಡಿದ  ಆರೋಗ್ಯ ಸಚಿವೆ ವೀಣಾ ಜಾರ್ಜ್  ದೇಶದಲ್ಲಿ  22 ರೋಗಿಗಳಲ್ಲಿ ಒಬ್ಬರ ರೋಗ ಮಾತ್ರ ವರದಿಯಾಗುತ್ತಿದ್ದರೆ ಕೇರಳದಲ್ಲಿ ಮೂರನೇ ಒಂದು ಭಾಗದಷ್ಟು ವರದಿಯಾಗಿದೆ ಎಂದು ಹೇಳಿದಾಗ ವಿಪಕ್ಷಗಳು  ಗದ್ದಲವನ್ನುಂಟು ಮಾಡಿವೆ. ಇದಕ್ಕೆ  ಪ್ರತಿಕ್ರಿಯಿಸಿದ ವೀಣಾ  ವಿಪಕ್ಷಗಳು ಈ ನಿರ್ಣಯಕ್ಕೆ ನೀಡುವ ಬೆಂಬಲ ಇದೇನಾ ? ಎಂದು ಪ್ರಶ್ನಿಸಿದ್ದಾರೆ.

ಪ್ರತಿಪಕ್ಷದ ನಾಯಕ ವಿ.ಡಿ ಸತೀಶನ್ ಮಾತನಾಡಿ, ಆರೋಗ್ಯ ಕಾರ್ಯಕರ್ತರು ಸಹ ಸಾವಿನ ಸಂಖ್ಯೆಯ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ ಮತ್ತು ಕುಸಿತವನ್ನು ಎತ್ತಿ ತೋರಿಸುವುದು ಕ್ಷುಲ್ಲಕವಾಗಿದೆ ಎಂದಿದ್ದಾರೆ.  ಸಚಿವರು ಹೇಳಿಕೆಯನ್ನು ಹಿಂತೆಗೆದುಕೊಳ್ಳಬೇಕೆಂದು ಎಂ.ಕೆ. ಮುನೀರ್ ಕೂಡ ಒತ್ತಾಯಿಸಿದರು.

ಸಾವಿನ ಪ್ರಮಾಣವನ್ನು ನಿರ್ಧರಿಸಲು  ಅಧ್ಯಯನ ಅಗತ್ಯ ಎಂದು ಸತೀಶನ್ಹೇ ಳಿದರು. ಆಸ್ಪತ್ರೆಯಲ್ಲಿ ರೋಗಿಯು ಕೊವಿಡ್ ನೆಗೆಟಿವ್ ಆಗಿದ್ದರೂ ಸಹ, ಕೊವಿಡ್ ನಂತರದ ಸಮಯದಲ್ಲಿ ಅವನು ಸಾಯಬಹುದು ಎಂದು ಪ್ರತಿಪಕ್ಷದ ನಾಯಕ ಹೇಳಿದರು. ಡಾ.ಎಂ.ಕೆ. ಮುನೀರ್ ತುರ್ತು ನಿರ್ಣಯದ ಬಗ್ಗೆ ನೋಟಿಸ್ ನೀಡಿದರು. ಏತನ್ಮಧ್ಯೆ, ಕೇಂದ್ರ ಸರ್ಕಾರವು ಲಸಿಕೆಯನ್ನು ರಾಜ್ಯದ ಎಲ್ಲರಿಗೂ ಉಚಿತವಾಗಿ ಲಭ್ಯವಾಗುವಂತೆ ಒತ್ತಾಯಿಸಿ ವಿಧಾನಸಭೆಯಲ್ಲಿ ಮಂಡಿಸಲಾಯಿತು.

ಸರ್ಕಾರಕ್ಕೆ ಲಸಿಕೆ  ಸಿಗುತ್ತಿಲ್ಲ ಯಾಕೆ?  ಹೈಕೋರ್ಟ್ ಪ್ರಶ್ನೆ

ಸರ್ಕಾರಕ್ಕೆ ಲಸಿಕೆ ಯಾಕೆ ಸಿಗುತ್ತಿಲ್ಲ ಎಂದು ಕೇರಳ ಹೈಕೋರ್ಟ್  ಪ್ರಶ್ನಿಸಿದೆ. ಖಾಸಗಿ ಆಸ್ಪತ್ರೆಗಳು ಅದನ್ನು ಪಡೆಯುತ್ತಿವೆ ಎಂದು ನ್ಯಾಯಾಲಯ  ಹೇಳಿದೆ. ಒಂದು ಕೋಟಿ ಲಸಿಕೆಗಳನ್ನು ಖರೀದಿಸುತ್ತಿದ್ದೇವೆ ಎಂದು ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ. ಖಾಸಗಿ ಆಸ್ಪತ್ರೆಗಳಿಗಿಂತ ಸರ್ಕಾರದ ಆದೇಶಕ್ಕೆ ಆದ್ಯತೆ ನೀಡಬೇಕು ಎಂದು ಅರ್ಜಿದಾರರು ಒತ್ತಾಯಿಸಿದರು. ಈ ವಿಷಯವನ್ನು ಯಾಕೆ ಪರಿಗಣಿಸಬಾರದು ಎಂದು ನ್ಯಾಯಾಲಯ ಕೇಂದ್ರವನ್ನು ಕೇಳಿದೆ.

ಇದನ್ನೂ ಓದಿ: Lakshadweep ಲಕ್ಷದ್ವೀಪದ ಆಡಳಿತಾಧಿಕಾರಿಯನ್ನು ವಾಪಸ್ ಕರೆಸಿಕೊಳ್ಳಿ; ಕೇರಳ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದ ಪಿಣರಾಯಿ ವಿಜಯನ್