ಮಂಡ್ಯ ವಿದ್ಯಾರ್ಥಿನಿಗೆ ಶಹಬಾಸ್ ಎಂದ ಅಲ್​ ಖೈದಾ ನಾಯಕನನ್ನು ಎಲ್ರೂ ತರಾಟೆಗೆ ತೆಗೆದುಕೊಂಡಿರುವಾಗ ಸಿದ್ದರಾಮಯ್ಯ ಏನಂದರು ನೋಡಿ!?

| Updated By: shivaprasad.hs

Updated on: Apr 06, 2022 | 7:37 PM

ಆ ವಿಡಿಯೋಗೂ ಮುಸ್ಕಾನ್​ಗೂ ಯಾವುದೇ ಸಂಬಂಧವಿಲ್ಲ. ಅಲ್​ ​ಖೈದಾಗೂ ಆ ಹುಡುಗಿಗೂ ಯಾವುದೇ ಸಂಬಂಧವಿಲ್ಲ. ಕರ್ನಾಟಕದ ಜನ ಅಲ್​​ಖೈದಾ ಬರುವುದಕ್ಕೂ ಬಿಡುವುದಿಲ್ಲ ಎಂದು ಮೈಸೂರಿನಲ್ಲಿ ಪರಿಷತ್​ ಮಾಜಿ ಸದಸ್ಯ ಇಬ್ರಾಹಿಂ ಹೇಳಿಕೆ ನೀಡಿದ್ದಾರೆ.

ಮಂಡ್ಯ ವಿದ್ಯಾರ್ಥಿನಿಗೆ ಶಹಬಾಸ್ ಎಂದ ಅಲ್​ ಖೈದಾ ನಾಯಕನನ್ನು ಎಲ್ರೂ ತರಾಟೆಗೆ ತೆಗೆದುಕೊಂಡಿರುವಾಗ ಸಿದ್ದರಾಮಯ್ಯ ಏನಂದರು ನೋಡಿ!?
ಮಾಜಿ ಸಿಎಂ ಸಿದ್ದರಾಮಯ್ಯ
Follow us on

ಬೆಂಗಳೂರು: ರಾಜ್ಯದ ಮೇಲೆ ಅಲ್ ಖೈದಾ (Al Qaeda) ಉಗ್ರ ಆಯ್ಮಾನ್ ಜವಾಹಿರಿ ಕಣ್ಣು ಬಿದ್ದಿದೆ. ಮುಸ್ಕಾನ್​ ಹೊಗಳಿ ಅಲ್​​ಖೈದಾ ಉಗ್ರನ ವಿಡಿಯೋ ವಿಚಾರವಾಗಿ ಎಸ್.ಕೆ.ಆಲೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಇಂತಹದ್ದನ್ನೆಲ್ಲಾ ಬಿಜೆಪಿಯವರೇ ಹುಟ್ಟುಹಾಕುವುದು. ಎಲ್ರೀ ಉಗ್ರ? ಯಾರು ಉಗ್ರ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. ಆರ್​ಎಸ್​​ಎಸ್​ನವರೇ ಇಂತಹ ವಿಡಿಯೋಗಳನ್ನು ಕಳುಹಿಸುವುದು. ಈ ಬಗ್ಗೆ ತನಿಖೆ ಆಗಬೇಕು. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ. ಉಗ್ರ ಆಯ್ಮಾನ್ ಜವಾಹಿರಿ ಬಗ್ಗೆ ಇಂಟೆಲಿಜೆನ್ಸಿ ಮಾಹಿತಿ ಕೇಳುತ್ತೇನೆ ಎಂದು ಬೊಮ್ಮಾಯಿ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದು, ಇದೆಯಲ್ಲ ಸಿಎಮ್ ಇಂಟೆಲಿಜೆನ್ಸ್ ಹತ್ರಾ ತಿಳಕೊಂಡ ಏನು ಹೇಳೋದು. ಬೆಳಿಗ್ಗೆ ಒಂದು ಸಾರಿ ಸಂಜೆ ಒಂದು ಸಾರಿ ಇಂಟೆಲಿಜೆನ್ಸ್​ನವರು ರಿಪೋರ್ಟ್ ಮಾಡುತ್ತಾರೆ. ಆದರೂ ಗೊತ್ತಿಲ್ಲ ಅಂದರೆ ಏನಂತ ಹೇಳಬೇಕು. ಈ ಬಗ್ಗೆ ತನಿಖೆ ಆಗಬೇಕು. ಯಾರೆ ತಪ್ಪು ಮಾಡಿದರೂ ಶಿಕ್ಷೆ ಆಗಬೇಕು. ನಾನೇ ಮಾಡಲಿ ಅಥವಾ ಯಾವುದೇ ಧರ್ಮದವರು ಮಾಡಲಿ ಶಿಕ್ಷೆಯಾಗಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಆ ವಿಡಿಯೋಗೂ ಮುಸ್ಕಾನ್​ಗೂ ಯಾವುದೇ ಸಂಬಂಧವಿಲ್ಲ. ಅಲ್​ ​ಖೈದಾಗೂ ಆ ಹುಡುಗಿಗೂ ಯಾವುದೇ ಸಂಬಂಧವಿಲ್ಲ. ಕರ್ನಾಟಕದ ಜನ ಅಲ್​​ಖೈದಾ ಬರುವುದಕ್ಕೂ ಬಿಡುವುದಿಲ್ಲ ಎಂದು ಮೈಸೂರಿನಲ್ಲಿ ಪರಿಷತ್​ ಮಾಜಿ ಸದಸ್ಯ ಇಬ್ರಾಹಿಂ ಹೇಳಿಕೆ ನೀಡಿದ್ದಾರೆ. ಮುಸ್ಕಾನ್​​ ಹುಡುಗಿಗೆ ಅಲ್​ ಖೈದಾ ಸಂಘಟನೆಯೆ ಗೊತ್ತಿಲ್ಲ. ಅಲ್ ಖೈದಾ ಇದ್ದರೆ ಅವರನ್ನು ಹುಡುಕಿ ಅರೆಸ್ಟ್​ ಮಾಡಿ. ಅದನ್ನು ಬಿಟ್ಟು ಸುಮ್ಮನೆ ಏನೇನೋ ಮಾತಾಡಬೇಡಿ ಎಂದು ಹೇಳಿದ್ದಾರೆ. ಇವರ ಹೇಳಿಕೆಯ ಬೆನ್ನಲ್ಲೇ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ತಿರುಗೇಟು ನೀಡಿದ್ದಾರೆ. ಸಿ.ಎಂ.ಇಬ್ರಾಹಿಂ ಹಾರಿಕೆ ಉತ್ತರವನ್ನು ಚೆನ್ನಾಗಿ ಕೊಡುತ್ತಾರೆ. ಮೊದಲು ಈ ಕುರಿತು ತನಿಖೆಯಾಗಲಿ. ಅಲ್‌ಖೈದಾ ಪ್ರಮುಖನೇ ಸ್ಪಷ್ಟವಾಗಿ ಮಾತನಾಡಿದ್ದಾನೆ. ಇವರ್ಯರೋ ಹೇಗೆ ವಿಡಿಯೋ ಬಿಡುತ್ತಾರೆ. ಇಂತಹ ಭಯೋತ್ಪಾದನೆ ಕೃತ್ಯಕ್ಕೆ ಬೆಂಬಲ‌ ಕೊಡಬೇಡಿ ಎಂದು ಧಾರವಾಡದಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಮುತಾಲಿಕ್ ಹೇಳಿಕೆ ನೀಡಿದ್ದಾರೆ.

ಭಾರತ ನೂರಾರು ಸಂಸ್ಕೃತಿ, ವೈವಿಧ್ಯತೆಯ ರಾಷ್ಟ್ರ. ಇದನ್ನು ದುರ್ಬಲಗೊಳಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಹಿಜಾಬ್ ಸಮವಸ್ತ್ರಕ್ಕೆ ಮಾತ್ರ ವಿರೋಧ ಇಲ್ಲ ಅನ್ನೋದು ಗೊತ್ತಾಗುತ್ತದೆ. ಸಮಾಜ ಒಡೆಯುವ ಸಂಚು ಇದೆ ಅನ್ನಿಸುತ್ತದೆ. ಇದರ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಬೆಂಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆ ನೀಡಿದ್ದಾರೆ. ಹಿಜಾಬ್ ಹಿಂದೆ ಬೇರೆಯದೇ ಸಂಚು ಇದೆ ಅನ್ನಿಸುತ್ತದೆ. ಆವತ್ತು ಮುಸ್ಕಾನ್ ಖಾನ್ ಸುರಕ್ಷಿತವಾಗಿ ಮನೆಗೆ ಬರಲು ಕಾರಣ ಅಲ್ಲಿದ್ದ ಹಿಂದೂ ಹುಡುಗರು. ಹಿಂದೂ ಹುಡುಗರ‌ ಜಾಗದಲ್ಲಿ ಮುಸ್ಲಿಂ ಹುಡುಗರು, ಹಿಂದೂ ಹುಡುಗಿ ಇರುತ್ತಿದ್ದಿದ್ರೆ ಆಕೆ ಸುರಕ್ಷಿತವಾಗಿ ಹೋಗುತ್ತಿರಲಿಲ್ವೇನೋ? ಯಾಕೆಂದರೆ ಹಿಂದೂ ಹುಡುಗರು ಆವೇಶದಿಂದ ಘೋಷಣೆ ಕೂಗಿರಬಹುದು. ಆದ್ರೆ ಹಿಂದೂ ಹುಡುಗರು ಅತ್ಯಾಚಾರ ಮಾಡುವ ಮನಸ್ಥಿತಿಯವರಲ್ಲ. ಹಾಗಾಗಿ ಆಕೆ ಬಚಾವಾಗಿದ್ದಾಳೆ ಎಂದರು.

ಇದನ್ನೂ ಓದಿ:

ಭಾರತೀಯ ಸೇನೆಗೆ ಸೇರುವ ತವಕದಿಂದ 350 ಕಿ.ಮೀ ಓಡಿ ದೆಹಲಿ ತಪುಪಿದ ರಾಜಸ್ಥಾನ ಯುವಕ; ಇಲ್ಲಿದೆ ವೈರಲ್ ವಿಡಿಯೋ

Published On - 5:31 pm, Wed, 6 April 22