ಖಾತೆ ಬದಲಾವಣೆಗಾಗಿ 15 ಲಕ್ಷ ಲಂಚಕ್ಕೆ ಬೇಡಿಕೆ ಆಡಿಯೋ ರಿಲೀಸ್; ಮಂಡೂರು ಪಿಡಿಒ ವಿರುದ್ಧ ಸ್ಥಳೀಯರ ಪ್ರತಿಭಟನೆ

ಖಾತೆ ಬದಲಾವಣೆಗಾಗಿ 15 ಲಕ್ಷ ಲಂಚಕ್ಕೆ ಬೇಡಿಕೆ ಆಡಿಯೋ ರಿಲೀಸ್; ಮಂಡೂರು ಪಿಡಿಒ ವಿರುದ್ಧ ಸ್ಥಳೀಯರ ಪ್ರತಿಭಟನೆ
ಸಾಂದರ್ಭಿಕ ಚಿತ್ರ

PDO Bribe: ಬೆಂಗಳೂರು ನಗರ ಜಿಲ್ಲೆ ಪೂರ್ವ ತಾಲೂಕಿನ ಮಂಡೂರು ಗ್ರಾಮ‌ದಲ್ಲಿ ತಂದೆ ಹೆಸರಿನಿಂದ ಮಗಳಿಗೆ ಖಾತೆ ಮಾಡಿಕೊಡಲು ಲಂಚಕ್ಕೆ ಬೇಡಿಕೆಯಿಟ್ಟದ್ದರು ಎಂದು ಆಡಿಯೋದಲ್ಲಿ ಕೇಳಿಬಂದಿದೆ. ಕೂಡಲೆ ಪಿಡಿಒ ಅಧಿಕಾರಿಯನ್ನು ಅಮಾನತು ಮಾಡಿ ಅಂತಾ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.

TV9kannada Web Team

| Edited By: sadhu srinath

Apr 06, 2022 | 4:34 PM

ದೇವನಹಳ್ಳಿ: ಖಾತೆ ಬದಲಾವಣೆ ಮಾಡಿಕೊಡಲು 15 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟ ಆರೋಪದಲ್ಲಿ ಮಂಡೂರು ಗ್ರಾಮ ಪಂಚಾಯತ್​ ಪಿಡಿಒ ವೆಂಕಟ್ ರಂಗನ್ ವಿರುದ್ಧ ಸ್ಥಳೀಯ ಮುಖಂಡರು ಪ್ರತಿಭಟನೆ ನಡೆಸಿದ್ದಾರೆ. ಪಿಡಿಒ ಹಣ ಕೇಳಿದ್ದಾರೆ ಎನ್ನಲಾದ ಆಡಿಯೋ ಸಮೇತ ಎಸಿಬಿಯಲ್ಲಿ ಪ್ರಕರಣ ದಾಖಲಿಸಿ ಪ್ರತಿಭಟನೆ ಕೈಗೊಂಡಿದ್ದಾರೆ.

ಬೆಂಗಳೂರು ನಗರ ಜಿಲ್ಲೆ ಪೂರ್ವ ತಾಲೂಕಿನ ಮಂಡೂರು ಗ್ರಾಮ‌ದಲ್ಲಿ ತಂದೆ ಹೆಸರಿನಿಂದ ಮಗಳಿಗೆ ಖಾತೆ ಮಾಡಿಕೊಡಲು ಲಂಚಕ್ಕೆ ಬೇಡಿಕೆಯಿಟ್ಟದ್ದರು ಎಂದು ಆಡಿಯೋದಲ್ಲಿ ಕೇಳಿಬಂದಿದೆ. ಕೂಡಲೆ ಪಿಡಿಒ ಅಧಿಕಾರಿಯನ್ನು ಅಮಾನತು ಮಾಡಿ ಅಂತಾ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.

ಹರಿಹರ ನಗರಸಭೆಯ ಬಿಲ್ ಕಲೆಕ್ಟರ್ ಮಂಜುನಾಥ ಎಸಿಬಿ ಬಲೆಗೆ: ಒಂದು ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಎಸಿಬಿ ಬಲೆಗೆ ಬಿದ್ದಿದ್ದಾರೆ. ದಾವಣಗೆರೆ ಜಿಲ್ಲೆ ಹರಿಹರದ ನಗರಸಭೆಯ ಬಿಲ್ ಕಲೆಕ್ಟರ್ ಮಂಜುನಾಥ ಎಸಿಬಿ ಬಲೆಗೆ ಬಿದ್ದವ.  ದಾವಣಗೆರೆಯ ರಾಘವೇಂದ್ರ ಎಂಬುವರಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ‌ ದಾಳಿ ನಡೆಸಿದೆ. ಹರಿಹರದ ಹರ್ಲಾಪುರದಲ್ಲಿ ರಾಘವೇಂದ್ರ ನಿವೇಶನ ಹೊಂದಿದ್ದರು. ಖಾತೆ ಬದಲಾವಣೆ ಹಾಗೂ ಕಂದಾಯ ಅಪ್ಡೇಟ್‌ಗಾಗಿ ಅರ್ಜಿ ಸಲ್ಲಿಸಿದ್ದರು. ಇದಕ್ಕಾಗಿ ರೂ. 1.70 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಮಂಜುನಾಥ ಮುಂಗಡವಾಗಿ ರೂ. 1 ಲಕ್ಷ ಲಂಚ ಸ್ಚೀಕರಿಸುತ್ತಿದ್ದಾಗ ಎಸಿಬಿ ದಾಳಿಗೆ ತುತ್ತಾಗಿದ್ದಾರೆ. ಎಸಿಬಿ ಡಿವೈಎಸ್ಪಿ ಮಂಜುನಾಥ್ ನೇತೃತ್ವದಲ್ಲಿ ದಾಳಿ ನಡೆದಿತ್ತು.

ಬಿಡಿಎ ಆಯುಕ್ತರಾಗಿ ಎಂ.ಬಿ. ರಾಜೇಶ್ ಗೌಡ ನೇಮಕ ಅಸಿಂಧು?: ಬಿಡಿಎ ಆಯುಕ್ತರಾಗಿ ಎಂ.ಬಿ. ರಾಜೇಶ್ ಗೌಡ ನೇಮಕ ಪ್ರಶ್ನಿಸಿ ರಿಟ್ ಸಲ್ಲಿಸಲಾಗಿದ್ದು ಈ ಸಂಬಂಧ KASನಿಂದ IASಗೆ ಪದೋನ್ನತಿ ಹೊಂದಿದವರು ಆಯುಕ್ತರಾಗಬಹುದೇ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ ಮಾಡಿದೆ. ಇದಕ್ಕೆ ಉತ್ತರಿಸಲು ಸರ್ಕಾರಕ್ಕೆ ಹೆಚ್ಚಿನ ಕಾಲಾವಕಾಶ ನೀಡಲು ಹೈಕೋರ್ಟ್ ನಿರಾಕರಿಸಿದೆ. ಇಂತಹ ವಿಚಾರಗಳಲ್ಲಿ ಕಣ್ಮುಚ್ಚಿ ಕೂರಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸಿಜೆ‌ ರಿತುರಾಜ್ ಅವಸ್ತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಕೀಲ ಮೋಹನ್ ಕುಮಾರ್ ಎಂಬುವವರು ರಿಟ್ ಸಲ್ಲಿಸಿದ್ದರು. ಬಿಡಿಎ ನಿಯಮಾವಳಿಯಂತೆ ನೇಮಕ ನಡೆದಿಲ್ಲ. ವಿಭಾಗೀಯ ಆಯುಕ್ತ ದರ್ಜೆಯ ಅಧಿಕಾರಿ ನೇಮಕವಾಗಬೇಕಿತ್ತು. ಆದರೆ ಅದಕ್ಕಿಂತ ಕೆಳ ಹಂತದ ಅಧಿಕಾರಿಯ ನೇಮಕವಾಗಿದೆ. ಹಾಗಾಗಿ ಎಂ.ಬಿ. ರಾಜೇಶ್ ಗೌಡ ನೇಮಕವನ್ನು ಅನೂರ್ಜಿತಗೊಳಿಸಲು ರಿಟ್​ ಮೂಲಕ ಮನವಿ ಮಾಡಲಾಗಿದೆ. ತತ್ಸಂಬಂಧ ಎಂ.ಬಿ. ರಾಜೇಶ್ ಗೌಡ, ಬಿಡಿಎ ಮತ್ತು ಸರ್ಕಾರಕ್ಕೆ ಕೋರ್ಟ್​ ನೋಟಿಸ್ ನೀಡಿದೆ. ಏಪ್ರಿಲ್​ 13ರೊಳಗೆ ಪ್ರತಿಕ್ರಿಯಿಸಲು ಸರ್ಕಾರಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ಸೂಚನೆ ನೀಡಿದೆ.

ಇದನ್ನೂ ಓದಿ: Kashi, Varanasi: ಕಾಶಿಗೆ ಹೋದಾಗ ಇಷ್ಟವಾದುದನ್ನು ಬಿಟ್ಟು ಬರುವುದರ ಒಳಮರ್ಮ ಏನು? ಇದನ್ನೂ ಓದಿ: ನಾವು ದೇವರ ವಿಗ್ರಹಗಳಿಗೆ ಸಲ್ಲಿಸುವ ಪೂಜೆ, ನಿಜವಾಗಿಯೂ ದೇವರಿಗೆ ತಲುಪುತ್ತದೆಯೇ? ಮಾರ್ಮಿಕ ಉತ್ತರ ಇಲ್ಲಿದೆ!

Follow us on

Related Stories

Most Read Stories

Click on your DTH Provider to Add TV9 Kannada