AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kashi, Varanasi: ಕಾಶಿಗೆ ಹೋದಾಗ ಇಷ್ಟವಾದುದನ್ನು ಬಿಟ್ಟು ಬರುವುದರ ಒಳಮರ್ಮ ಏನು?

kashi vishwanath: ಪಾಪ ಕರ್ಮಗಳನ್ನೆಲ್ಲವನ್ನೂ ಕಳೆದುಕೊಂಡು ನಿರ್ಮಲ ಮನಸ್ಸಿನಿಂದ ಭಕ್ತಿಯಿಂದ ಕಾಶೀ ವಿಶ್ವನಾಥ ಮತ್ತು ವಿಶಾಲಾಕ್ಷಿಯ ದರ್ಶನ ಮಾಡಬೇಕು ಎಂಬ ನಿಯಮವಿತ್ತು. ಈ ರೀತಿಯಾಗಿ ತಪಸ್ಸನ್ನು ಆಚರಿಸಿದಂತೆ ನಿಷ್ಠೆ ನಿಯಮಗಳನ್ನು ಪಾಲಿಸಿ ಭಗವಂತನ ದರ್ಶನ ಮಾಡಿದಲ್ಲಿ ಮುಕ್ತಿ ದೊರೆಯುವುದು ಎನ್ನುವುದೇ ನಮ್ಮ ಪೂರ್ವಜರ ಆಶಯವಾಗಿತ್ತು.

Kashi, Varanasi: ಕಾಶಿಗೆ ಹೋದಾಗ ಇಷ್ಟವಾದುದನ್ನು ಬಿಟ್ಟು ಬರುವುದರ ಒಳಮರ್ಮ ಏನು?
ಕಾಶಿಗೆ ಹೋದಾಗ ಇಷ್ಟವಾದುದನ್ನು ಬಿಟ್ಟು ಬರುವುದರ ಒಳಮರ್ಮ ಏನು?
TV9 Web
| Updated By: ಸಾಧು ಶ್ರೀನಾಥ್​|

Updated on: Mar 18, 2022 | 6:06 AM

Share

ಸನಾತನ ಧರ್ಮದಲ್ಲಿ ದೇಶಾದ್ಯಂತ ಇರುವ ತೀರ್ಥಕ್ಷೇತ್ರಗಳಿಗೆ ಹೋಗುವ ಮುಖಾಂತರ ಹಿಂದೂಗಳ ಭಾವೈಕ್ಯತೆ ಸೌಹಾರ್ದತೆಯೊಂದಿಗೆ, ನಾವೆಲ್ಲರೂ ಒಂದು ಎಂದು ಸಾರುವ ಸತ್ ಸಂಪ್ರದಾಯವನ್ನು ಸಾವಿರಾರು ವರ್ಷಗಳ ಹಿಂದಿನಿಂದಲೂ ಅನೂಚಾನವಾಗಿ ನಡೆಸಿಕೊಂಡು ಬಂದಿದ್ದಾರೆ. ಹಾಗಾಗಿಯೇ ಪ್ರತಿಯೊಬ್ಬ ಹಿಂದೂವೂ ಸಹಾ ತನ್ನ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಈ ತೀರ್ಥಕ್ಷೇತ್ರಗಳಿಗೆ ಭೇಟಿ ನೀಡಿಯೇ ತೀರುತ್ತಾರೆ. ಅಂತಹ ತೀರ್ಥಕ್ಷೇತ್ರಗಳಲ್ಲಿ ವಾರಣಾಸಿ ಅಥವಾ ಕಾಶಿ ಪ್ರಮುಖವಾಗಿದೆ.

ಕಾಶಿಯಲ್ಲಿ ಹರಿಯುವ ಗಂಗಾ ನದಿಯ 64 ಘಾಟ್ ಗಳಲ್ಲಿ ಪುಣ್ಯ ಸ್ನಾನ ಮಾಡಿ ಶ್ರೀ ಕಾಶೀ ವಿಶ್ವನಾಥ ಮತ್ತು ಶ್ರೀ ವಿಶಾಲಾಕ್ಷಿ ಅಮ್ಮನವರ ದರ್ಶನವನ್ನು ಮಾಡಿ ಭಗವಂತನ ಅನುಗ್ರಹಕ್ಕೆ ಪಾತ್ರರಾಗುವುದರ ಮುಖಾಂತರ ಜೀವನಕ್ಕೆ ಮುಕ್ತಿ ಹೊಂದುವುದು ಎಲ್ಲ ಹಿಂದೂಗಳ ಅಂತಿಮ ಗುರಿಯಾಗಿರುತ್ತದೆ. ಇದರ ಜೊತೆ ಸಾಮಾನ್ಯವಾಗಿ ಕಾಶಿಗೆ ಹೋದವರು ದೇವರ ದರ್ಶನ ಮಾಡುವು ಜೊತೆಗೆ ತಮಗಿಷ್ಟ ಇರುವ ಒಂದು ವಸ್ತುವನ್ನು ಬಿಟ್ಟು ಬರಬೇಕು ಎಂಬ ಪದ್ದತಿ ರೂಢಿಯಲ್ಲಿದೆ. ಈ ರೀತಿಯ ಒಂದು ವಸ್ತುವನ್ನು ಏಕೆ ಬಿಟ್ಟು ಬರಬೇಕು? ಇದರ ಹಿಂದಿರುವ ನಿಜವಾದ ಕಾರಣಗಳೇನು? ಹಾಗೆ ಬಿಟ್ಟುಬಂದ ಮೇಲೆ ಆಗುವ ಪರಿಪಾಟಗಳೇನು ಎಂಬುದನ್ನು ತಿಳಿಯೋಣ.

ಹಿಂದಿನ ಕಾಲದಲ್ಲಿ ವಯಸ್ಸಾದವರು ತಮ್ಮೆಲ್ಲಾ ಜವಾಬ್ಧಾರಿಗಳನ್ನು ಮುಗಿಸಿದ ನಂತರ ಕಾಲ್ನಡಿಗೆಯಲ್ಲಿ ಕಾಶಿಗೆ ಹೋಗಿ ವಿಶ್ವನಾಥನ ದರ್ಶನ ಮಾಡಿಕೊಂಡು ಬರುವ ಸಂಕಲ್ಪವನ್ನು ಮಾಡಿಕೊಂಡು ಮನೆಯಿಂದ ದೇಶಾಂತರ ಹೋಗಿಬಿಡುತ್ತಿದ್ದರು. ಎಲ್ಲೋ ಅಪರೂಪಕ್ಕೊಬ್ಬರು ಕಾಶಿಯಿಂದ ಹಿಂದಿರುಗಿ ಬರುತ್ತಿದ್ದರೆ, ಬಹುತೇಕರು ಮಾರ್ಗದ ಮಧ್ಯೆಯೇ ಭಗವಂತನ ಪಾದದಲ್ಲಿ ಐಕ್ಯವಾದರೆ, ಇನ್ನೂ ಹಲವರು ಅಲ್ಲೇ ಕಾಶಿಯಲ್ಲೇ ಉಳಿದು ಬಿಡುತ್ತಿದ್ದರು.

ಹಾಗೆ ಭಗವಂತನ ದರ್ಶನ ಮಾಡಲು ಹೊರಡುವವರು ತಮ್ಮ ಆಸ್ತಿಪಾಸ್ತಿ, ಮನೆಮಠ, ಸಂಸಾರದ ಬಂಧನಗಳ ಮೇಲಿನ ಆಸೆಗಳನ್ನು ಬಿಟ್ಟು ಕೇವಲ ಭಗವಂತನ ಮೇಲೆಯೇ ಕೇಂದ್ರೀಕರಿಸಿ ಬಂದದ್ದೆಲ್ಲವೂ ಬರಲೀ ಗೋವಿಂದನ ದಯೆ ಒಂದಿರಲಿ ಎಂಬ ಭಾವದಿಂದ ಕಾಶೀ ಕ್ಷೇತ್ರಕ್ಕೆ ಹೋಗಿ ಅಲ್ಲಿ ಗಂಗಾ ಸ್ನಾನ ಮಾಡುವ ಮುಖಾಂತರ ತಮ್ಮೆಲ್ಲಾ ಆಯಾಸ ಪರಿಹರಿಸಿಕೊಳ್ಳುವುದರ ಜೊತೆಗೆ ಅದುವರೆವಿಗೂ ಮಾಡಿರಬಹುದಾದ ಪಾಪ ಕರ್ಮಗಳನ್ನೆಲ್ಲವನ್ನೂ ಕಳೆದುಕೊಂಡು ನಿರ್ಮಲ ಮನಸ್ಸಿನಿಂದ ಭಕ್ತಿಯಿಂದ ಕಾಶೀ ವಿಶ್ವನಾಥ ಮತ್ತು ವಿಶಾಲಾಕ್ಷಿಯ ದರ್ಶನ ಮಾಡಬೇಕು ಎಂಬ ನಿಯಮವಿತ್ತು.

ಈ ರೀತಿಯಾಗಿ ತಪಸ್ಸನ್ನು ಆಚರಿಸಿದಂತೆ ನಿಷ್ಠೆ ನಿಯಮಗಳನ್ನು ಪಾಲಿಸಿ ಭಗವಂತನ ದರ್ಶನ ಮಾಡಿದಲ್ಲಿ ಮುಕ್ತಿ ದೊರೆಯುವುದು ಎನ್ನುವುದೇ ನಮ್ಮ ಪೂರ್ವಜರ ಆಶಯವಾಗಿತ್ತು.

ಕಾಶಿಗೆ ಹೋದಾಗ ಇಷ್ಟವಾದುದನ್ನು ಏಕೆ ಬಿಟ್ಟು ಬರಬೇಕು? ಆದರೆ ಉಪ್ಪು ಹುಳಿ ಖಾರ ತಿಂದುಂಡ ದೇಹಕ್ಕೆ ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮಾತ್ಸರ್ಯಗಳಿಂದ ಹೊರಬಂದು ನಿರ್ಮಲ ಮನಸ್ಸಿನಿಂದ ಭಗವಂತನಲ್ಲಿ ಏಕೋಭಾವವನ್ನು ಹೊಂದಲಾಗದೇ ಚಡಪಡಿಸತೊಡಗಿದರು. ಏನಾದರೂ ಬಿಡಬೇಕು ಎಂದರೆ ಏನು ಬಿಡಬೇಕು? ಎಂಬುದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಕಂಡು ಕೊಳ್ಳಲು ಪ್ರಯತ್ನಿಸಿದಾಗಲೇ ಅವರಿಗೆ ಹೊಳೆದದ್ದು ಕಾಶಿಗೆ ಹೋದಾಗ ಮೋಹ ಮಾತ್ಸರ್ಯಗಳ ಪ್ರತೀಕವಾಗಿ ತಮಗೆ ಇಷ್ಟವಾದ ಒಂದು ತರಕಾರಿ, ಒಂದು ಹಣ್ಣು ಮತ್ತು ಒಂದು ತಿಂಡಿಯನ್ನು ಬಿಟ್ಟು ಬಂದಲ್ಲಿ ಇಳೀ ವಯಸ್ಸಿನಲ್ಲಿ ಮುಕ್ತಿ ದೊರಕುತ್ತದೆ ಎಂಬ ಆಲೋಚನೆಯನ್ನು ಮುಂದಿಟ್ಟರು!

ಈ ಪರ್ಯಾಯ ವ್ಯವಸ್ಥೆ ಬಹಳ ಸುಲಭ ಎನಿಸಿದ ಕಾರಣ ಬಹುತೇಕರು ಇದನ್ನೇ ಪುರಸ್ಕರಿಸಿದ್ದರಿಂದ ಅದೇ ಸಂಪ್ರದಾಯವಾಗಿ ಬಿಟ್ಟಿತು. ಹಾಗೆ ಕಾಶಿಗೆ ಹೋಗುವ ಮಂದಿಯೂ ಸಹಾ ಅದರಲ್ಲೂ ಒಳ ಮಾರ್ಗಗಳನ್ನು ಕಂಡು ಹಿಡಿದುಕೊಂಡಿದ್ದಲ್ಲದೇ ತಮಗೆ ಇಷ್ಟ ಬಂದ ತರಕಾರಿ, ಹಣ್ಣು, ತಿಂಡಿಗಳ ಬದಲಾಗಿ ತಮಗಿಷ್ಟವಿಲ್ಲದ್ದನ್ನು ತ್ಯಜಿಸಿ ಬರಲು ಆರಂಭಿಸಿದರೆ, ಇನ್ನೂ ಕೆಲವರು ತಮಗೆ ಇಷ್ಟ ಬಂದ ತರಕಾರಿ ಹಣ್ಣುಗಳು ಮತ್ತು ತಿಂಡಿಗಳನ್ನು ಹೋಗುವ ಒಂದೆರಡು ತಿಂಗಳ ಮುಂಚೆ ಸಿಕ್ಕಾ ಪಟ್ಟೆ ಅದನ್ನೇ ತಿಂದು ಕಡೆಗೆ ಮತ್ತೆಂದೂ ತಿನ್ನಲೇ ಬಾರದೆಂಬ ಅಸಹ್ಯ ಪಟ್ಟುಕೊಳ್ಳುವಂತೆ ಮಾಡಿಕೊಳ್ಳುತ್ತಿದರು. ಇದೇ ಕಾಶಿಗೆ ಹೋದಾಗ ಇಷ್ಟವಾದುದನ್ನು ಬಿಟ್ಟು ಬರುವುದರ ಒಳಮರ್ಮ! (ವಾಟ್ಸಪ್ ಸಂದೇಶ)

ಶ್ರಾವಣ ಮಾಸದಂದು ಶನಿವಾರ ಆಚರಣೆಯ ಹಿಂದಿನ ಮಹತ್ವ ತಿಳಿಯಿರಿ
ಶ್ರಾವಣ ಮಾಸದಂದು ಶನಿವಾರ ಆಚರಣೆಯ ಹಿಂದಿನ ಮಹತ್ವ ತಿಳಿಯಿರಿ
ಶನಿ ಭಗವಾನ್, ಹನುಮಂತನ ಆರಾಧನೆಗೆ ಅತ್ಯಂತ ಶುಭಕರ ದಿನ
ಶನಿ ಭಗವಾನ್, ಹನುಮಂತನ ಆರಾಧನೆಗೆ ಅತ್ಯಂತ ಶುಭಕರ ದಿನ
ಶ್ರೇಯಾ ಘೋಷಾಲ್ ಹಾಡಬೇಕಿದ್ದ ಸಾಂಗ್ ಈಗ ಲಹರಿ ಮಹೇಶ್ ಪಾಲಾಯ್ತು
ಶ್ರೇಯಾ ಘೋಷಾಲ್ ಹಾಡಬೇಕಿದ್ದ ಸಾಂಗ್ ಈಗ ಲಹರಿ ಮಹೇಶ್ ಪಾಲಾಯ್ತು
ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
ಕೃಷ್ಣರಾಜ ಒಡೆಯರ್-ಸಿದ್ದರಾಮಯ್ಯ ಇಬ್ಬರೂ ಸಾಮಾಜಿಕ ಹರಿಕಾರರು: ಸಚಿವ
ಕೃಷ್ಣರಾಜ ಒಡೆಯರ್-ಸಿದ್ದರಾಮಯ್ಯ ಇಬ್ಬರೂ ಸಾಮಾಜಿಕ ಹರಿಕಾರರು: ಸಚಿವ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ