ರೈಲ್ವೇ ಪ್ರಯಾಣಿಕ ಕಳೆದುಕೊಂಡ ಸೂಟ್ ಕೇಸ್​ನ್ನು ಹಿಂದಿರುಗಿಸಿ ಮಾನವೀಯತೆ ಮೇರೆದ ಹೋಮ್ ಗಾರ್ಡ್

ರೈಲ್ವೇ ಪ್ರಯಾಣಿಕ ಕಳೆದುಕೊಂಡ ಸೂಟ್ ಕೇಸ್​ನ್ನು ಹಿಂದಿರುಗಿಸಿ ಮಾನವೀಯತೆ ಮೇರೆದ ಹೋಮ್ ಗಾರ್ಡ್
ಸೂಟ್ ಕೇಸ್ ಪತ್ತೆ ಹಚ್ಚಿ ಹೋಮ್ ಗಾರ್ಡ್ ಗುರುರಾಜ್ ಹಿಂದಿರುಗಿಸಿದ್ದಾರೆ. 

ರಂಜಾನ್ ಮುಗಿದ ಬಳಿಕ ಮಗಳಿಗೆ ಕೊಟ್ಟ ದುಡ್ಡಿನಿಂದ ಆಸ್ಪತ್ರೆಗೆ ಅಂಬುಲೆನ್ಸ್ ಕೊಡಿಸುತ್ತೇನೆ ಎಂದು ಮಂಡ್ಯದಲ್ಲಿ ಮುಸ್ಕಾನ್ ತಂದೆ‌ ಮೊಹಮದ್ ಹುಸೇನ್ ಪ್ರಕಟಿಸಿದ್ದಾರೆ. 

TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Apr 06, 2022 | 6:14 PM

ಬೆಂಗಳೂರು: ರೈಲ್ವೇ ಪ್ರಯಾಣಿಕ ಕಳೆದುಕೊಂಡ ಸೂಟ್ ಕೇಸ್​ನ್ನು ಹೋಮ್ ಗಾರ್ಡ್ (Homeguard) ಹಿಂದಿರುಗಿಸಿ ಮಾನವೀಯತೆ ಮೇರೆದಿದ್ದಾರೆ. ರಮೇಶ್ ಚಂದ್ ಎಂಬುವವರಿಗೆ ಸೇರಿದ 20 ಲಕ್ಷ ಮೌಲ್ಯದ ಚಿನ್ನಾಭರಣಗಳಿದ್ದ ಸೂಟ್ ಕೇಸ್, ನಿನ್ನೆ ರಾತ್ರಿ 9:30ಕ್ಕೆ ಕೆಎಸ್ಆರ್ ರೈಲ್ವೇ ನಿಲ್ದಾಣದಲ್ಲಿ ಕಳೆದುಕೊಂಡಿದ್ದರು. ಕೆಎಸ್ಆರ್ ರೈಲ್ವೇ ಪೊಲೀಸ್ ಠಾಣೆಗೆ ದೂರು ಸಹ ನೀಡಿದ್ದರು. ಸೂಟ್ ಕೇಸ್ ಪತ್ತೆ ಹಚ್ಚಿ ಹೋಮ್ ಗಾರ್ಡ್ ಗುರುರಾಜ್ ಹಿಂದಿರುಗಿಸಿದ್ದಾರೆ.

ಮಗಳಿಗೆ ಕೊಟ್ಟ ದುಡ್ಡಿನಿಂದ ಆಸ್ಪತ್ರೆಗೆ ಅಂಬುಲೆನ್ಸ್ ಕೊಡಿಸು:

ಮನೆಗೆ ಹಣ ಕೊಡಲು ಕೆಲ‌ ಮುಖಂಡರು ಬಂದರು. ಅವರು ಬಂದಿದ್ದಾಗ ಹಣ ಗಿಫ್ಟ್ ಕೊಡಬೇಡಿ ಅಂತಾ ಮನವಿ ಮಾಡಿದೆ. ನಮಗೆ ದೇವರು ಕಷ್ಟ ಕೊಟ್ಟಿಲ್ಲ. ನೆಮ್ಮದಿಯಾಗಿ ಜೀವನ‌ ನಡೆಸುವಷ್ಟು ಹಣ ಕೊಟ್ಟಿದ್ದಾನೆ. ಹಣ ಕೊಡುವುದನ್ನು ನಮ್ಮ ಧರ್ಮದಲ್ಲಿ ಅದಿಯಾ ಅಂತ ಹೇಳುತ್ತಾರೆ. ಅದಿಯಾ ಕೊಡುತ್ತಿದ್ದೇವೆ, ಇದನ್ನು ಬೇಡ ಅನ್ನಬಾರದು ಅಂತ ಹೇಳುತ್ತಿದ್ದರು. ರಂಜಾನ್ ಮುಗಿದ ಬಳಿಕ ಮಗಳಿಗೆ ಕೊಟ್ಟ ದುಡ್ಡಿನಿಂದ ಆಸ್ಪತ್ರೆಗೆ ಅಂಬುಲೆನ್ಸ್ ಕೊಡಿಸುತ್ತೇನೆ ಎಂದು ಮಂಡ್ಯದಲ್ಲಿ ಮುಸ್ಕಾನ್ ತಂದೆ‌ ಮೊಹಮದ್ ಹುಸೇನ್ ಪ್ರಕಟಿಸಿದ್ದಾರೆ.

ಇದನ್ನೂ ಓದಿ:

KGF Chapter 2: ಮುಂಬೈನಲ್ಲಿ ‘ಕೆಜಿಎಫ್ 2’ ಚಿತ್ರತಂಡ; ಯಶ್ ನೋಡಲು ಮುಗಿಬಿದ್ದ ಜನತೆ- ಇಲ್ಲಿವೆ ಫೋಟೋಗಳು

IPL 2022: RR ವಿರುದ್ದದ ಗೆಲುವಿನೊಂದಿಗೆ ಐಪಿಎಲ್​ನಲ್ಲಿ ವಿಶೇಷ ದಾಖಲೆ ಬರೆದ RCB

Follow us on

Most Read Stories

Click on your DTH Provider to Add TV9 Kannada