ವಿಜಯನಗರ: ಅವರವರ ಧರ್ಮ (Religion) ಅವರರವರ ಮನೆಯಲ್ಲಿ ಆಚರಣೆ ಮಾಡಿಲಿ. ಆದ್ರೇ ದೇಶ ಅಂತ ಬಂದ್ರೆ ಎಲ್ಲರೂ ಒಂದಾಗಬೇಕು ಎಂದು ಶ್ರೀ ಕಂಚಿ ಕಾಮಕೋಟಿ ಪೀಠಾಧೀಶ್ವರ ಶಂಕರ ವಿಜಯೇಂದ್ರ ಸರಸ್ವತಿ ಮಹಾಸ್ವಾಮಿಗಳು ಹೇಳಿದ್ದಾರೆ. ಹೊಸಪೇಟೆಯಲ್ಲಿ ಕಂಚಿ ಕಾಮಾಕ್ಷಿ ದೇವಾಲಯ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಶ್ರೀಗಳು, ಪ್ರಸ್ತುತ ವಿದ್ಯಮಾನಗಳ ಕುರಿತು ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಸ್ವಾಮೀಜಿಗಳು ಸಾಮರಸ್ಯಕ್ಕೆ ಹೆಸರು ವಾಸಿಯಾಗಿರೋದು ಕರ್ನಾಟಕದಲ್ಲಿ ಎಲ್ಲ ಜಾತಿ ಜನಾಂಗದವರು ಒಂದಾಗಿರಿ ಎನ್ನುವ ಸಂದೇಶ ನೀಡಿದ್ರು. ಎಲ್ಲರೂ ಸನಾತನ ಧರ್ಮವನ್ನು ಸಂರಕ್ಷಣೆ ಮಾಡಬೇಕು. ದಕ್ಷಿಣ ಭಾರತದಲ್ಲಿ ಧರ್ಮಕ್ಕೆ ಪ್ರತ್ಯೇಕತೆ ಭಾವನೆ ಇದೆ. ದೊಡ್ಡ- ದೊಡ್ಡ ವ್ಯಕ್ಯಿಗಳೆಲ್ಲ ತಪಸ್ಸು ಮಾಡಿರೋ ಕರ್ನಾಟಕ ಸಾಮರಸ್ಯಕ್ಕೆ ಮತ್ತೊಂದು ಧಾರ್ಮಿಕ ಕ್ಷೇತ್ರವಾಗಿದೆ. ಜಗಳ, ದ್ವೇಷ, ಅಹಂಕಾರ ಯಾರಲ್ಲೂ ಇರಬಾರದು. ಎಲ್ಲರಲ್ಲೂ ವಿನಮ್ರತೆ ಇರಬೇಕು ಹೀಗಾಗಿ ಕರ್ನಾಟಕದಲ್ಲಿ ಎಲ್ಲಿ ಹೋದ್ರೂ ಅನ್ನದಾನ ಮಾಡ್ತಾರೆ ಎಂದರು.
ಭಕ್ತರಿಂದ ತುಂಬಿತುಳುಕಿದ ದೇಗುಲ:
ದಕ್ಷಿಣ ಕಾಶಿ ಹಂಪಿ, ಹೊಸಪೇಟೆಯಲ್ಲಿ ನೂರಾರು ದೇಗುಲಗಳು ಇದ್ರೂ ವರ್ಷಕ್ಕೊಂದಾದ್ರು ಹೊಸ ದೇಗುಲ ನಿರ್ಮಾಣ ಮಾಡಲಾಗುತ್ತಿದೆ. ಮಾಜಿ ಶಾಸಕ ಗವಿಯಪ್ಪ ಮತ್ತು ಹೆಚ್.ಆರ್.ಜಿ ಕುಟುಂಬ ಇಲ್ಲಿ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಿಗೆ ಮುಂದೆ ನಿಂತು ಮಾಡೋದು ವಾಡಿಕೆ. ಈಗಾಗಲೇ ಹೊಸಪೇಟೆಯಲ್ಲಿ ಬೃಹತ್ ರಾಘವೇಂದ್ರ ಸ್ವಾಮಿ ದೇಗುಲ ನಿರ್ಮಾಣ ಮಾಡಲಾಗಿದ್ದು, ಇದೀಗ ಇದರ ಎದುರಲ್ಲಿಯೇ ಕಂಚಿ ಕಾಮಾಕ್ಷಿ ದೇಗುಲ ನಿರ್ಮಾಣ ಮಾಡಲಾಗಿದೆ. ಉದ್ಘಾಟನೆ ಹಿನ್ನೆಲೆ ಇಂದು ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದು ಪುನೀತರಾದ್ರು. ಇನ್ನೂ ಕಂಚಿಯಲ್ಲಿ ಇರೋ ದೇವಸ್ಥಾನ ಮಾದರಿಯಲ್ಲಿಯೇ ನಿರ್ಮಾಣ ಮಾಡಿರೋದು ವಿಶೇಷವಾಗಿದೆ.
ವರದಿ: ವೀರಪ್ಪ ದಾನಿ, ಬಳ್ಳಾರಿ ಇದನ್ನೂ ಓದಿ; KGF 2: ಕರ್ನಾಟಕದಲ್ಲಿ ‘ಕೆಜಿಎಫ್ 2’ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಯಾವಾಗ ಆರಂಭ? ಅಭಿಮಾನಿಗಳ ಪ್ರಶ್ನೆಗೆ ಇಲ್ಲಿದೆ ಉತ್ತರ Andre Russell: ಒಂದೇ ತಂಡದಲ್ಲಿ ಆಂಡ್ರೆ ರಸೆಲ್, ಕೀರನ್ ಪೊಲಾರ್ಡ್