ಮತ್ತೆ ದುಃಸ್ಥಿತಿಯಲ್ಲಿ ಕೋಲಾರದ ಕೆಂಪು ಚಿನ್ನ! ಕೆ ಜಿ ಟೊಮ್ಯಾಟೋ 80 ಪೈಸೆಗೆ ಸಿಗುತ್ತಿದೆ, ತೋಟದಲ್ಲೇ ಕೊಳೆಯುತ್ತಿದೆ ಟೊಮ್ಯಾಟೋ!

ಮತ್ತೆ ದುಃಸ್ಥಿತಿಯಲ್ಲಿ ಕೋಲಾರದ ಕೆಂಪು ಚಿನ್ನ! ಕೆ ಜಿ ಟೊಮ್ಯಾಟೋ 80 ಪೈಸೆಗೆ ಸಿಗುತ್ತಿದೆ, ತೋಟದಲ್ಲೇ ಕೊಳೆಯುತ್ತಿದೆ ಟೊಮ್ಯಾಟೋ!
ಕೋಲಾರದ ಕೆಂಪು ಚಿನ್ನಕ್ಕೆ ಮತ್ತೆ ದುಃಸ್ಥಿತಿ! 1ಕೆ.ಜಿ.​ ಟೊಮ್ಯಾಟೋ ಕೇವಲ 80 ಪೈಸೆಗೆ ಸಿಗುತ್ತಿದೆ, ತೋಟದಲ್ಲೇ ಕೊಳೆಯುತ್ತಿದೆ ಟೊಮ್ಯಾಟೋ!

ಅದು ಚಿನ್ನದ ನಾಡಿನ ರೈತರ ಪಾಲಿಗೆ ಕೈತುಂಬ ಹಣ ಕೊಡುವ ಕೆಂಪು ಚಿನ್ನವಿದ್ದಂತೆ ಒಮ್ಮೊಮ್ಮೆ ಪ್ರಕಾಶಮಾನವಾಗಿ ಹೊಳೆದರೆ ಕೆಲವು ಬಾರಿ ತುಕ್ಕು ಹಿಡಿದ ಕಬ್ಬಣದಂತಾಗಿ ಬೀದಿಗೆ ಬೀಳುತ್ತದೆ, ಸದ್ಯ ಈಬಾರಿ ಉತ್ತಮ ಮಳೆಯಾದ ಪರಿಣಾಮವೋ ಏನೋ ಮತ್ತೆ ಕೆಂಪು ಚಿನ್ನಕ್ಕೆ ತುಕ್ಕು ಹಿಡಿದಂತಾಗಿ ಬೆಳೆದ ಟೊಮ್ಯಟೋವೆಲ್ಲಾ ತೋಟದಲ್ಲೇ ಕೊಳೆಯುತ್ತಿದೆ. ಕೋಲಾರದಲ್ಲಿ ಟೊಮ್ಯಾಟೋ ರೈತರ ಪ್ರಮುಖ ಬೆಳೆ! ಟೊಮ್ಯಾಟೋ ತೋಟಗಳಲ್ಲೇ ಕೊಳೆಯುತ್ತಿರುವ ಟೊಮ್ಯಾಟೋ ಹಣ್ಣು, ಹಣ್ಣುಗಳನ್ನು ಬಿಡಲಾಗದೆ ಮಾರುಕಟ್ಟೆಗೂ ಹಾಕದೆ ಗಿಡದ ಕೆಳಗೆ ಬಿದ್ದು ಕೊಳೆಯುತ್ತಿರುವ ಟೊಮ್ಯಾಟೋ ಇಂಥಾದೊಂದು […]

TV9kannada Web Team

| Edited By: sadhu srinath

Apr 06, 2022 | 8:49 PM

ಅದು ಚಿನ್ನದ ನಾಡಿನ ರೈತರ ಪಾಲಿಗೆ ಕೈತುಂಬ ಹಣ ಕೊಡುವ ಕೆಂಪು ಚಿನ್ನವಿದ್ದಂತೆ ಒಮ್ಮೊಮ್ಮೆ ಪ್ರಕಾಶಮಾನವಾಗಿ ಹೊಳೆದರೆ ಕೆಲವು ಬಾರಿ ತುಕ್ಕು ಹಿಡಿದ ಕಬ್ಬಣದಂತಾಗಿ ಬೀದಿಗೆ ಬೀಳುತ್ತದೆ, ಸದ್ಯ ಈಬಾರಿ ಉತ್ತಮ ಮಳೆಯಾದ ಪರಿಣಾಮವೋ ಏನೋ ಮತ್ತೆ ಕೆಂಪು ಚಿನ್ನಕ್ಕೆ ತುಕ್ಕು ಹಿಡಿದಂತಾಗಿ ಬೆಳೆದ ಟೊಮ್ಯಟೋವೆಲ್ಲಾ ತೋಟದಲ್ಲೇ ಕೊಳೆಯುತ್ತಿದೆ.

ಕೋಲಾರದಲ್ಲಿ ಟೊಮ್ಯಾಟೋ ರೈತರ ಪ್ರಮುಖ ಬೆಳೆ! ಟೊಮ್ಯಾಟೋ ತೋಟಗಳಲ್ಲೇ ಕೊಳೆಯುತ್ತಿರುವ ಟೊಮ್ಯಾಟೋ ಹಣ್ಣು, ಹಣ್ಣುಗಳನ್ನು ಬಿಡಲಾಗದೆ ಮಾರುಕಟ್ಟೆಗೂ ಹಾಕದೆ ಗಿಡದ ಕೆಳಗೆ ಬಿದ್ದು ಕೊಳೆಯುತ್ತಿರುವ ಟೊಮ್ಯಾಟೋ ಇಂಥಾದೊಂದು ದೃಷ್ಯಗಳು ಕಂಡು ಬಂದಿದ್ದು ಚಿನ್ನದ ನಾಡು ಕೋಲಾರದಲ್ಲಿ. ಹೌದು ಕೆಜಿಎಫ್ ಚಿನ್ನದ ಗಣಿ ಬಿಟ್ರೆ ಕೆಂಪು ಚಿನ್ನ ಎಂದು ಕರೆಯಲ್ಪಡುವ ಟೊಮ್ಯಾಟೊ ಬೆಳೆ ಇಲ್ಲಿಯ ರೈತರಿಗೆ ಒಂದು ಚಿನ್ನದ ಗಣಿಯಂತೆ. ಕೋಲಾರ ಜಿಲ್ಲೆಯೊಂದರಲ್ಲಿಯೇ ಅಂದಾಜು 15 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಟೊಮ್ಯಾಟೊವನ್ನ ಬೆಳೆಯುತ್ತಾರೆ. ಬೇರೆ ಯಾವ ಜಿಲ್ಲೆಯಲ್ಲೂ ಬೆಳೆಯದಷ್ಟು ಟೊಮ್ಯಾಟೊ ಇಲ್ಲಿಯ ರೈತರು ಬೆಳೆಯುತ್ತಾರೆ, ಸಾವಿರಾರು ಸಂಖ್ಯೆಯಲ್ಲಿ ರೈತರು ತಾವು ಬೆಳೆದ ಟೊಮ್ಯಾಟೋವನ್ನ ಕೊಲಾರದ ಎಪಿಎಂಸಿ ಮಾರುಕಟ್ಟೆಗೆ ತಂದು ಮಾರಾಟ ಮಾಡುತ್ತಾರೆ.

ಟೊಮ್ಯಾಟೋಗೆ ಕುಸಿದ ಬೆಲೆ, ಸಾವಿರಕ್ಕೇರಿದ ಟೊಮ್ಯೋಟೊ ಬೆಲೆ ಪೈಸೆಗಳಿಗೆ ಕುಸಿತ! ಇಂಥ ಟೊಮ್ಯಾಟೋ ಕಳೆದ ಡಿಸೆಂಬರ್​- ಜನವರಿ ತಿಂಗಳಲ್ಲಿ 15 ಕೆ.ಜಿ.ಯ ಒಂದು ಬಾಕ್ಸ್​ ಟೊಮ್ಯಾಟೋ ಬೆಲೆ ಒಂದು ಸಾವಿರ ರೂ ದಾಟಿತ್ತು. ಕೊರೊನಾ ಮತ್ತು ಜೋರು ಮಳೆ ಬಳಿಕ ಕೆಲವೇ ಕೆಲವು ರೈತರು ಟೊಮ್ಯಾಟೋ ಬೆಳೆಯಲ್ಲಿ ಕೈತುಂಬಾ ಹಣ ನೋಡಿದ್ರು. ಆದ್ರೆ ಎರಡೇ ತಿಂಗಳ ಅಂತರದಲ್ಲಿ ಈಗ ಅದರ ಬೆಲೆ ಪಾತಾಳಕ್ಕೆ ಕುಸಿದಿದೆ. ಇದು ರೈತರಲ್ಲಿ ಆತಂಕಕ್ಕೆ ಕಾರಣವಾಗಿದ್ದು, 15 ಕೆ.ಜಿ.ಯ ಒಂದು ಬಾಕ್ಸ್ ಹತ್ತು ರಿಂದ ಇಪ್ಪತ್ತು ರೂಪಾಯಿಗೆ ಕುಸಿದಿದೆ ಅಂದರೆ ಕೆ.ಜಿ.​ಟೊಮ್ಯಾಟೋ ಕೇವಲ 70 ರಿಂದ 80 ಪೈಸೆ ಸಿಗುತ್ತಿದೆ, ಹಾಗಾಗಿ ತೋಟದಲ್ಲಿನ ಟೊಮ್ಯಾಟೋ ಬಿಡಿಸಲು ಹೋದರೆ ನಮಗೆ ಮಾರುಕಟ್ಟೆಗೆ ಕೊಂಡೊಯ್ಯುವ ವಾಹನ ಖರ್ಚು ಕೂಡಾ ಬರೋದಿಲ್ಲ ಎನ್ನುತ್ತಿದ್ದಾರೆ ಟೊಮ್ಯಾಟೋ ಬೆಳೆದ ರೈತರು.

ಟೊಮ್ಯಾಟೋ ಬೆಲೆ ಕುಸಿಯೋದಕ್ಕೆ ಕಾರಣ ಏನು! ಏಕಾಏಕಿ ಬೆಲೆ ಕುಸಿಯೋದಕ್ಕೆ ಕಾರಣ ಏನು ಅನ್ನೋದನ್ನ ನೋಡೋದಾದ್ರೆ ಕಳೆದ ನವೆಂಬರ್​ ಹಾಗೂ ಡಿಸೆಂಬರ್​ ನಲ್ಲಿ ಸುರಿದ ಭಾರೀ ಮಳೆಯಿಂದ ರಾಜ್ಯ ಸೇರಿದಂತೆ ಹೊರ ರಾಜ್ಯಗಳಲ್ಲಿ ಬೆಳೆದಿದ್ದ ಬೆಳೆಯಲ್ಲಾ ಮಳೆಗೆ ನಾಶವಾಗಿ ಹೋಗಿತ್ತು ಅದಾದ ನಂತರ ಈ ಎಲ್ಲೆಡೆ ಟೊಮ್ಯಾಟೋ ಫಸಲು ಬಂದಿದೆ, ಹಾಗಾಗಿ ಹೊರ ರಾಜ್ಯಗಳಿಂದಲೂ ಡಿಮ್ಯಾಂಡ್​ ಇಲ್ಲದೆ, ನಮ್ಮ ರಾಜ್ಯದಲ್ಲಿ ಹಾಗೂ ಕೋಲಾರ ಜಿಲ್ಲೆ ಯಲ್ಲೂ ಸಹ ಹೆಚ್ಚಿನ ರೈತರು ಟೊಮ್ಯಾಟೋವನ್ನೇ ಬೆಳೆದಿರುವ ಕಾರಣ ಮಾರುಕಟ್ಟೆಗೆ ಆವಕ ಹೆಚ್ಚಾಗಿ ಬೆಲೆ ಕುಸಿತ ಕಂಡಿದೆ.

ಸದ್ಯ ಒಂದು ಎಕರೆ ಟೊಮ್ಯಾಟೊ ಬೆಳೆಯಲು ಒಂದುವರೆ ಲಕ್ಷದಷ್ಟು ಖರ್ಚು ಮಾಡಿ ಈಗ ಟೊಮ್ಯಾಟೋ ಮಾರಾಟ ಮಾಡಿದರೆ ಹತ್ತು ಸಾವಿರ ರೂಪಾಯಿ ಆದಾಯ ಬರೋದು ಕಷ್ಟದ ಪರಿಸ್ಥಿತಿ ಇದೆ ಹಾಗಾಗಿ ಟೊಮ್ಯಾಟೋವನ್ನು ತೋಟಗಳಲ್ಲೇ ಬಿಟ್ಟಿರುವ ರೈತರು ತೋಟಗಳತ್ತ ಮುಖ ಕೂಡಾ ಮಾಡುತ್ತಿಲ್ಲ, ಹಾಕಿದ ಲಕ್ಷಾಂತರ ಬಂಡವಾಳ ಸಂಪೂರ್ಣ ನೀರುಪಾಲಾಗಿದೆ ಅನ್ನೋದು ರೈತರ ಅಳಲು.

ಒಟ್ಟಾರೆ ಒಂದು ಬಾರಿ ಅತಿವೃಷ್ಟಿ, ಇನ್ನೊಂದು ಭಾರೀ ಅನಾವೃಷ್ಟಿ ಎನ್ನುವಂತಾಗಿ ಅದೃಷ್ಟವಿದ್ದ ರೈತರಿಗೆ ಮಾತ್ರವೇ ಈ ಕೆಂಪು ಚಿನ್ನ ಒಲಿಯೋದು, ಹಾಗಾಗಿ ಕಳೆದ ಎರಡು ತಿಂಗಳ ಹಿಂದೆ ಒಂದು ಸಾವಿರ ರೂಪಾಯಿಗೆ 15 ಕೆಜಿ ಬಾಕ್ಸ್​ ಮಾರಾಟವಾಗಿದ್ದ ಟೊಮ್ಯಾಟೋ ಏಕಾಏಕಿ ಪೈಸೆಗಳ ಲೆಕ್ಕಕ್ಕೆ ಕುಸಿಯುತ್ತೆ ಅಂದ್ರೆ ಇದನ್ನು ಅದೃಷ್ಟ ಅನ್ನದೆ ಬೇರೆನು ಸಾಧ್ಯವಿಲ್ಲ. – ರಾಜೇಂದ್ರ ಸಿಂಹ

Follow us on

Related Stories

Most Read Stories

Click on your DTH Provider to Add TV9 Kannada