ಬೆಳಗಾವಿ: ಒಂದು ಕಡೆ ಸಿಡಿ ಪ್ರಕರಣದ ಸಂತ್ರಸ್ತ ಯುವತಿ ಕೋರ್ಟ್‌ಗೆ ಹಾಜರಾಗುವ ಸಾಧ್ಯತೆಯಿದೆ. ಇನ್ನೊಂದು ಕಡೆ ಚುನಾವಣಾ ಪ್ರಚಾರದಲ್ಲಿ ರಮೇಶ್ ಜಾರಹೊಳಿ ಪ್ರಚಾರಕ್ಕೆ ಭಾಗಿಯಾಗಬೇಕಿತ್ತು. ಈ ನಡುವೆ ರಮೇಶ್ ಜಾರಕಿಹೊಳಿ ಅವರಿಗೆ ಟೆನ್ಶನ್ ಶುರುವಾದಂತಿದೆ.
ನಿನ್ನೆ ತಡರಾತ್ರಿ ಗೋಕಾಕ್ ನಿವಾಸಕ್ಕೆ ಆಗಮಿಸಿರುವ ರಮೇಶ್ ಜಾರಕಿಹೊಳಿ ಮನೆಯಿಂದ ಹೊರಬಂದಿಲ್ಲ. ಬೆಳಗಾವಿ ಚುನಾವಣೆ ಪ್ರಚಾರಕ್ಕೂ ಬಾರದೇ ರಮೇಶ್ ಜಾರಕಿಹೊಳಿ ಮನೆಯಲ್ಲೇ ಕುಳಿತಿದ್ದಾರೆ.
ಯುವತಿಯನ್ನು ನ್ಯಾಯಾಲಯಕ್ಕೆ ಹಾಜರು ಮಾಡುತ್ತೇವೆ; ಯುವತಿ ಪರ ವಕೀಲ ಕೆ.ಎನ್.ಜಗದೀಶ್
ಸಿಡಿ ಪ್ರಕರಣದ ಸಂತ್ರಸ್ತ ಯುವತಿ ಬೆಂಗಳೂರಿನಲ್ಲಿ ಇದ್ದಾಳೆ. ಅರ್ಧ ಗಂಟೆ ಅಥವಾ ಒಂದು ಗಂಟೆ, ಇಲ್ಲವೇ ಎರಡು ಗಂಟೆಗಳಲ್ಲಿ ಯುವತಿಯನ್ನು ನ್ಯಾಯಾಲಯಕ್ಕೆ ಹಾಜರು ಮಾಡುತ್ತೇವೆ ಎಂದು ಯುವತಿ ಪರ ವಕೀಲ ಕೆ.ಎನ್.ಜಗದೀಶ್ ಹೇಳಿದ್ದಾರೆ. ಮೊದಲು ಸಿಆರ್‌ಪಿಸಿ 164 ಪ್ರಕಾರ ಕೋರ್ಟ್ನಲ್ಲಿ ಹೇಳಿಕೆ ದಾಖಲು ಮಾಡುತ್ತೇವೆ ಎಂದು ನ್ಯಾಯಾಧೀಶರು ಆದೇಶಿಸಿದ ಬೆನ್ನಲ್ಲೇ ವಕೀಲ ಜಗದೀಶ್ ಈ ಹೇಳಿಕೆ ನೀಡಿದ್ದಾರೆ.
ನ್ಯಾಯಾಲಯ ಯಾವಾಗ ಹೇಳುತ್ತೋ ಆವಾಗ ಯುವತಿಯನ್ನು ಕರೆದುಕೊಂಡು ಬರುತ್ತೇವೆ. ನ್ಯಾಯಾಲಯ ಕರೆತನ್ನಿ ಅಂದ್ರೆ ಕರೆದುಕೊಂಡು ಬರ್ತೀನಿ. ಸೆಕ್ಯೂರಿಟಿ ಸಿದ್ದತೆಯಾದ ತಕ್ಷಣ ಅನುಮತಿ ಕೊಡಬಹುದು. ಯುವತಿ ಇರೋ ಜಾಗದಲ್ಲಿ ಈಗಾಗಲೇ ಭದ್ರತೆ ಒದಗಿಸಲಾಗಿದೆ. ನ್ಯಾಯಾಲಯ ಅನುಮತಿ ಕೊಟ್ಟ ತಕ್ಷಣ ಕರೆದುಕೊಂಡು ಬರ್ತೀನಿ. ಕಳೆದ 28 ದಿನಗಳಿಂದ ಆಕೆ ಒತ್ತಡದಲ್ಲಿದ್ದರು. ಅವರ ಆರೋಗ್ಯ ಪರಿಸ್ಥಿತಿ ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ತಿಳಿಸಿದ್ದಾರೆ. ಸಂತ್ರಸ್ತೆ ಕೋರ್ಟ್ನಿಂದ ನಾಲ್ಕು ಕಿಮೀ ದೂರದಲ್ಲಿದ್ದಾಳೆ. ಐದು ಕಾರಿನಲ್ಲಿ ಯುವತಿಯ ಜತೆ ವಕೀಲರ ತಂಡ ಆಗಮಿಸುತ್ತಿದೆ ಎಂಬ ಮಾಹಿತಿಗಳೂ ದೊರೆತಿವೆ.
ಇದನ್ನೂ ಓದಿ: ಮೊದಲು ಕೋರ್ಟ್ನಲ್ಲಿ ಸಿಡಿ ಯುವತಿಯ ಹೇಳಿಕೆ ದಾಖಲಿಸಲು ಜಡ್ಜ್ ಆದೇಶ
ಕೋರ್ಟ್‌ಗೆ ಸಿಡಿ ಲೇಡಿ ಹಾಜರ್ ಸಾಧ್ಯತೆ! ಬೆಂಗಳೂರಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಮಹತ್ವದ ಸಭೆ
Published On - 1:09 pm, Tue, 30 March 21