ನಿಮಗೆ ಯಾರು ವಾರಂಟ್​ ನೀಡ್ತಾರೆ: ಸಿಎಂ ಬಿಎಸ್​ವೈ, ಸಚಿವ ನಿರಾಣಿ ಬಂಧಿಸದಂತೆ ಸುಪ್ರೀಂಕೋರ್ಟ್ ಸೂಚನೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 27, 2021 | 6:58 PM

ನೀವು ರಾಜ್ಯದ ಸಿಎಂ. ನಿಮ್ಮ ವಿರುದ್ಧ ಯಾರು ವಾರಂಟ್ ಹೊರಡಿಸುತ್ತಾರೆ? ಅವರು ಬೇಕಿದ್ದರೆ ಮನವಿ ಪತ್ರ ಜಾರಿ ಮಾಡಬಹುದು ಎಂದು ಸುಪ್ರೀಂಕೋರ್ಟ್​ ಹೇಳಿದೆ. ಜತೆಗೆ ತನಿಖೆ ಮುಂದುವರಿಸಲು ಸೂಚಿಸಿದೆ.

ನಿಮಗೆ ಯಾರು ವಾರಂಟ್​ ನೀಡ್ತಾರೆ: ಸಿಎಂ ಬಿಎಸ್​ವೈ, ಸಚಿವ ನಿರಾಣಿ ಬಂಧಿಸದಂತೆ ಸುಪ್ರೀಂಕೋರ್ಟ್ ಸೂಚನೆ
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ
Follow us on

ನವದೆಹಲಿ: ನಕಲಿ ಸಹಿಮಾಡಿ 26 ಎಕರೆ ಜಮೀನು ಹಿಂಪಡೆದ ಆರೋಪದಲ್ಲಿ ಮುಖ್ಯಮಂತ್ರಿ ಬಿ.ಎಸ್.​ ಯಡಿಯೂರಪ್ಪ ಹಾಗೂ ಸಚಿವ ಮುರುಗೇಶ್ ನಿರಾಣಿ ಬಂಧಿಸದಂತೆ ತನಿಖಾಧಿಕಾರಿಗಳಿಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಆದರೆ, ತನಿಖೆಗೆ ತಡೆ ನೀಡಲು ಕೋರ್ಟ್​ ನಿರಾಕರಿಸಿದೆ.

ದೇವನಹಳ್ಳಿಯಲ್ಲಿ ವಸತಿ ಯೋಜನೆಯ ಭೂಮಿಯನ್ನು 2011ರಲ್ಲಿ ಮುಖ್ಯಮಂತ್ರಿ ಬಿ.ಎಸ್.​ ಯಡಿಯೂರಪ್ಪ ಹಿಂಪಡೆದಿದ್ದರು. ನಕಲಿ ಸಹಿಮಾಡಿ 26 ಎಕರೆ ಜಮೀನು ಹಿಂಪಡೆಯಲಾಗಿದೆ ಎಂದು ಉದ್ಯಮಿ ಆಲಂ ಪಾಷಾ ಆರೋಪಿಸಿದ್ದರು. ಈ ಪ್ರಕರಣ ಸಂಬಂಧ ಲೋಕಾಯುಕ್ತದಲ್ಲಿ ಆಲಂ ಪಾಷಾ ದೂರು ದಾಖಲಿಸಿದ್ದರು.

ಪ್ರಕರಣ ರದ್ದುಗೊಳಿಸಲು ಬಿಎಸ್​ವೈ, ನಿರಾಣಿ ಹೈಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ತನಿಖೆಗೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಬಿಎಸ್​ವೈ, ನಿರಾಣಿ ಸುಪ್ರೀಂಕೋರ್ಟ್​​ಗೆ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್​, ಸಿಎಂ ಯಡಿಯೂರಪ್ಪ, ಸಚಿವ ನಿರಾಣಿ ಬಂಧಿಸದಂತೆ ಸೂಚನೆ ನೀಡಿದೆ.

ನೀವು ರಾಜ್ಯದ ಸಿಎಂ. ನಿಮ್ಮ ವಿರುದ್ಧ ಯಾರು ವಾರಂಟ್ ಹೊರಡಿಸುತ್ತಾರೆ? ಅವರು ಬೇಕಿದ್ದರೆ ಮನವಿ ಪತ್ರ ಜಾರಿ ಮಾಡಬಹುದು ಎಂದು ಸುಪ್ರೀಂಕೋರ್ಟ್​ ಹೇಳಿದೆ. ಜತೆಗೆ ತನಿಖೆ ಮುಂದುವರಿಸಲು ಸೂಚಿಸಿದೆ.

ಕೆಐಎಡಿಬಿ ಭೂ ಹಂಚಿಕೆ ವಿವಾದ: ಪ್ರಕರಣ ರದ್ದು ಕೋರಿ ಮುಖ್ಯಮಂತ್ರಿ ಸುಪ್ರೀಂಕೋರ್ಟ್​ಗೆ ಯಡಿಯೂರಪ್ಪ ಅರ್ಜಿ