ಮಂಡ್ಯದಿಂದ ನಿಖಿಲ್ ಯಾಕೆ ಸ್ಪರ್ಧಿಸಬೇಕು? ಪಕ್ಷದಲ್ಲಿ ಬೇರೆ ಗಂಡಸಿರಲ್ಲವೇ? ಕದಲೂರು ಉದಯ್ ಗೌಡ, ಕಾಂಗ್ರೆಸ್ ಶಾಸಕ

|

Updated on: Feb 08, 2024 | 6:13 PM

ಕಳೆದ ಬಾರಿ ಹೀನಾಯ ಸೋಲು ಅನುಭವಿಸಿದರೂ ಜೆಡಿಎಸ್ ನಾಯಕರಿಗೆ ಬುದ್ಧಿ ಬಂದಿಲ್ಲ ಎಂದು ಅವರು ವಾಸ್ತವ ಸ್ಥಿತಿಯ ಬಗ್ಗೆ ಅವರಿಗೆ ಅರಿವಿಲ್ಲ, ನೂರಾರು ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡು ವಿಲೀನಗೊಳ್ಳಲು ತಯಾರಾಗಿದ್ದಾರೆ, ಚುನಾವಣೆ ಹತ್ತಿರ ಬರುತ್ತಿದ್ದ ಹಾಗೆ ಇನ್ನೂ ಹಲವಾರು ಕಾರ್ಯಕರ್ತರು ಕಾಂಗ್ರೆಸ್ ಸೇರಲಿದ್ದಾರೆ ಎಂದು ಅವರು ಹೇಳಿದರು.

ಮಂಡ್ಯ: ಹಿಂದೊಮ್ಮೆ ಮಂಡ್ಯ ಭಾಗದಲ್ಲಿ ಜೆಡಿಎಸ್ ಪಕ್ಷದ ಪ್ರಭಾವಿ ನಾಯಕರಾಗಿದ್ದ ಕದಲೂರು ಉದಯ್ ಗೌಡ (Kadaluru Uday Gowda) ಅವರು ಈಗ ಮದ್ದೂರು ಕ್ಷೇತ್ರದ ಕಾಂಗ್ರೆಸ್ ಶಾಸಕ. ಇಂದು ಮಂಡ್ಯದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಮುಂಬರುಬವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ (BJP JDS alliance) ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಹೆಸರು ಪ್ರಸ್ತಾಪ ಆಗುತ್ತಿರುವುದನ್ನು ಲೇವಡಿ ಮಾಡಿದರು. ಜೆಡಿಎಸ್ ಪಕ್ಷದ ಮಂಡ್ಯ ಘಟಕದಲ್ಲಿ ಯಾರೂ ಗಂಡಸರೇ ಇಲ್ಲವೇ? ನಿಖಿಲ್ ಗೆ ಯಾಕೆ ಟಿಕೆಟ್ ಕೊಡಬೇಕು? ಅವರು ಮಂಡ್ಯ ಜಿಲ್ಲೆಯವರಾ? ಸ್ಥಳೀಯ ಕಾರ್ಯಕರ್ತನಿಗೆ ಟಿಕೆಟ್ ನೀಡಲಿ ಎಂದು ಉದಯ ಗೌಡ ಹೇಳಿದರು. ಕಳೆದ ಬಾರಿ ಹೀನಾಯ ಸೋಲು ಅನುಭವಿಸಿದರೂ ಜೆಡಿಎಸ್ ನಾಯಕರಿಗೆ ಬುದ್ಧಿ ಬಂದಿಲ್ಲ ಎಂದು ಅವರು ವಾಸ್ತವ ಸ್ಥಿತಿಯ ಬಗ್ಗೆ ಅವರಿಗೆ ಅರಿವಿಲ್ಲ, ನೂರಾರು ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡು ವಿಲೀನಗೊಳ್ಳಲು ತಯಾರಾಗಿದ್ದಾರೆ, ಚುನಾವಣೆ ಹತ್ತಿರ ಬರುತ್ತಿದ್ದ ಹಾಗೆ ಇನ್ನೂ ಹಲವಾರು ಕಾರ್ಯಕರ್ತರು ಕಾಂಗ್ರೆಸ್ ಸೇರಲಿದ್ದಾರೆ ಎಂದು ಅವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ