AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಠೇವಣಿ ಹಣ ಹಿಂದಿರುಗಿಸದ ಧಾರವಾಡದ ಸೊಸೈಟಿಗೆ ದಂಡ, ಪರಿಹಾರಕ್ಕೆ ಗ್ರಾಹಕರ ಆಯೋಗ ಆದೇಶ

Dharwad Vikas Urban Credit Society: ದೂರು ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ, ಠೇವಣಿ ಅವಧಿ ಮುಗಿದ ಮೇಲೆ ಕರಾರಿನಂತೆ ಬಡ್ಡಿ ಸಮೇತ ಠೇವಣಿದಾರರಿಗೆ ಹಣ ಹಿಂದಿರುಗಿಸುವುದು ಸೊಸೈಟಿಯ ಕರ್ತವ್ಯ. ಆದರೆ, ಠೇವಣಿ ಅವಧಿ ಮುಗಿದು ಸುಮಾರು ಎರಡ್ಮೂರು ವರ್ಷಗಳು ಕಳೆದರೂ ಠೇವಣಿ ಹಣ ಅಥವಾ ಅದರ ಮೇಲಿನ ಬಡ್ಡಿ ಹಿಂದಿರುಗಿಸದೇ ಇರುವುದು ತಪ್ಪು ಎಂದಿದ್ದಾರೆ.

ಠೇವಣಿ ಹಣ ಹಿಂದಿರುಗಿಸದ ಧಾರವಾಡದ ಸೊಸೈಟಿಗೆ ದಂಡ, ಪರಿಹಾರಕ್ಕೆ ಗ್ರಾಹಕರ ಆಯೋಗ ಆದೇಶ
ಠೇವಣಿ ಹಣ ಹಿಂದಿರುಗಿಸದ ಧಾರವಾಡದ ಸೊಸೈಟಿಗೆ ದಂಡ ವಿಧಿಸಿದ ಗ್ರಾಹಕರ ಆಯೋಗ
ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Edited By: ಸಾಧು ಶ್ರೀನಾಥ್​|

Updated on: Feb 08, 2024 | 5:24 PM

Share

ಧಾರವಾಡ ನಗರದ ಕಮಲಾಪುರ ನಿವಾಸಿ ಅನ್ನಪೂರ್ಣಾ ಹುಲ್ಲಮನಿ ಅವರು ಧಾರವಾಡ ವಿಕಾಸ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸೊಸೈಟಿಯಲ್ಲಿ (Dharwad Vikas Urban Credit Society) 2020ರ ಫೆಬ್ರವರಿಯಲ್ಲಿ 17ರಂದು ರೂ 1.50 ಲಕ್ಷ ಮತ್ತು 2021ರ ಮೇ 7ರಂದು ರೂ.1 ಲಕ್ಷ ಹಣವನ್ನು ಒಂದು ವರ್ಷದ ಅವಧಿಗೆ ಠೇವಣಿ ಇಟ್ಟಿದ್ದರು. ಠೇವಣಿ ಅವಧಿ ಮುಗಿದ ಮೇಲೆ ಎರಡೂ ಠೇವಣಿಗಳ ಹಣ ಕೊಡುವಂತೆ ಸೊಸೈಟಿಗೆ ವಿನಂತಿಸಿದರೂ ಠೇವಣಿ ಹಣ (Deposit) ಅಥವಾ ಬಡ್ಡಿಯನ್ನು (Interest) ವಾಪಸ್ಸು ಕೊಟ್ಟಿರಲಿಲ್ಲ. ಈ ಹಿನ್ನೆಲೆಯಲ್ಲಿ ಅನ್ನಪೂರ್ಣಾ ಅವರು ಸೊಸೈಟಿ ವಿರುದ್ಧ ಗ್ರಾಹಕರ ಆಯೋಗದಲ್ಲಿ ( Dharwad Consumer Commission) ದೂರು ದಾಖಲು ಮಾಡಿದ್ದರು.

ದೂರು ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ, ಠೇವಣಿ ಅವಧಿ ಮುಗಿದ ಮೇಲೆ ಕರಾರಿನಂತೆ ಬಡ್ಡಿ ಸಮೇತ ಠೇವಣಿದಾರರಿಗೆ ಹಣ ಹಿಂದಿರುಗಿಸುವುದು ಸೊಸೈಟಿಯ ಕರ್ತವ್ಯ.

ಇದನ್ನೂ ಓದಿ: ಫ್ಯ್ಲಾಟ್‌ ನಿರ್ಮಿಸಿಕೊಡದ ಬಿಲ್ಡರ್‌! ಧಾರವಾಡ ಗ್ರಾಹಕರ ಆಯೋಗದ ಆದೇಶವೇನು?

ಆದರೆ, ಠೇವಣಿ ಅವಧಿ ಮುಗಿದು ಸುಮಾರು ಎರಡ್ಮೂರು ವರ್ಷಗಳು ಕಳೆದರೂ ಠೇವಣಿ ಹಣ ಅಥವಾ ಅದರ ಮೇಲಿನ ಬಡ್ಡಿ ಹಿಂದಿರುಗಿಸದೇ ಇರುವುದು ತಪ್ಪು. ಹಾಗಾಗಿ ಠೇವಣಿ ಹಣ ಒಟ್ಟು ರೂ. 2.50 ಲಕ್ಷ ಹಾಗೂ ಅದರ ಮೇಲೆ ಶೇ 13.5ರಷ್ಟು ಠೇವಣಿ ಇಟ್ಟ ದಿನಾಂಕದಿಂದ ಲೆಕ್ಕ ಹಾಕಿ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಹಿಂದಿರುಗಿಸುವಂತೆ ಆಯೋಗ ಸೊಸೈಟಿಗೆ ನಿರ್ದೇಶಿಸಿದೆ.

ಇದನ್ನೂ ಓದಿ:  ಹುಬ್ಬಳ್ಳಿ -ಡೆಪಾಸಿಟ್​ ಹಿಂದಿರುಗಿಸದ ಸರಸ್ವತಿ ಕೋ ಆಪ್​​ ಸೊಸೈಟಿಗೆ 11 ಲಕ್ಷ ರೂ ದಂಡ ವಿಧಿಸಿದ ಕೋರ್ಟ್​​

ದೂರುದಾರರಿಗೆ ಆಗಿರುವ ಅನಾನುಕೂಲ ಹಾಗೂ ಮಾನಸಿಕ ಹಿಂಸೆಗಾಗಿ ರೂ. 25 ಸಾವಿರ ಪರಿಹಾರ ಮತ್ತು ಅವರ ಪ್ರಕರಣ ಖರ್ಚು ವೆಚ್ಚವೆಂದು ರೂ. 10 ಸಾವಿರ ಕೊಡುವಂತೆ ಎದುರುದಾರ ಸೊಸೈಟಿಯವರಿಗೆ ಆಯೋಗ ಆದೇಶಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Narasimha Murti Pyati
Narasimha Murti Pyati

ಕೊಪ್ಪಳದವರಾದ ನರಸಿಂಹಮೂರ್ತಿ ಪ್ಯಾಟಿ ಸದ್ಯ ಟಿವಿ9 ವಾಹಿನಿಯ ಧಾರವಾಡ ಜಿಲ್ಲಾ ಹಿರಿಯ ವರದಿಗಾರರು. ಮೆಕ್ಯಾನಿಕಲ್ ಇಂಜನಿಯರಿಂಗ್ ಮುಗಿಸಿರುವ ಇವರು, ಕೆಲವರ್ಷ ಕೊಪ್ಪಳ ಜಿಲ್ಲೆಯಲ್ಲಿ ಐಟಿಐ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 23 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದು, ಮೊದಲು ಕೊಪ್ಪಳ ಜಿಲ್ಲೆ, ನಂತರ ಧಾರವಾಡ ಜಿಲ್ಲಾ ಹಿರಿಯ ವರದಿಗಾರರಾಗಿ ಕಳೆದ 17 ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರಿಕೆಯ ಜೊತೆಗೆ ಪ್ರಬಂಧ ರಚನೆ ಇವರ ಆಸಕ್ತಿಯಾಗಿದ್ದು ಈಗಾಗಲೇ 'ಬ್ರಾಹ್ಮಣ ಕುರುಬ' ಮತ್ತು 'ಕೃಷ್ಣಾಚಾರ್ @ ಕಿಷ್ಕಿಂಧಾ ಬಾರ್' ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಪ್ರಬಂಧಗಳು ಕಥನದ ಚೆಲುವು, ಸೊಬಗು ಮತ್ತು ಅರ್ಥವ್ಯಾಪ್ತಿಯಿಂದಾಗಿ ಓದುಗನ ಮನ ತಣಿಸುತ್ತವೆ ಎಂದು ವಿಮರ್ಶಕರು ಗುರುತಿಸಿದ್ದಾರೆ. ಸಾವಯವ ಹಾಗೂ ಅರಣ್ಯ ಕೃಷಿಕರೂ ಆಗಿರುವ ನರಸಿಂಹಮೂರ್ತಿ ಪ್ಯಾಟಿ ಸಂಗೀತ, ಟ್ರೆಕ್ಕಿಂಗ್, ಪ್ರವಾಸಗಳಲ್ಲೂ ಆಸಕ್ತಿ ಹೊಂದಿದ್ದಾರೆ.

Read More