ಹೆಚ್.ಡಿ. ಕೋಟೆ ಬಳಿ ಕಾಡಿನಿಂದ ನಾಡಿಗೆ ಬಂದು ಕಂದಕಕ್ಕೆ ಬಿದ್ದಿದ್ದ ಕಾಡಾನೆ ಮರಿ ರಕ್ಷಣೆ

|

Updated on: Mar 23, 2021 | 10:54 AM

Wild Elephant rescued| ಎರಡು ಗಂಟೆ ಕಾರ್ಯಾಚರಣೆ ನಡೆಸಿ, ಜೆಸಿಬಿ ಯಂತ್ರದ ಸಹಾಯದಿಂದ ಆನೆ ಮರಿಯನ್ನು ರಕ್ಷಣೆ ಮಾಡಲಾಗಿದೆ. ಬಳಿಕ, ಆನೆ ಮರಿಯು ತನ್ನ ತಾಯಿಯ ಮಡಿಲು ಸೇರಿದೆ.

ಹೆಚ್.ಡಿ. ಕೋಟೆ ಬಳಿ ಕಾಡಿನಿಂದ ನಾಡಿಗೆ ಬಂದು ಕಂದಕಕ್ಕೆ ಬಿದ್ದಿದ್ದ ಕಾಡಾನೆ ಮರಿ ರಕ್ಷಣೆ
ಮೈಸೂರಿನಲ್ಲಿ ಕಾಡಿನಿಂದ ನಾಡಿಗೆ ಬಂದು ಕಂದಕಕ್ಕೆ ಬಿದ್ದಿದ್ದ ಕಾಡಾನೆ ಮರಿ ರಕ್ಷಣೆ
Follow us on

ಮೈಸೂರು: ಕೂರ್ಣೆಗಾಲ ಬಳಿ ಕಂದಕಕ್ಕೆ ಬಿದ್ದಿದ್ದ ಎರಡು ವರ್ಷದ ಗಂಡು ಕಾಡಾನೆ ಮರಿಯನ್ನು ರಕ್ಷಣೆ ಮಾಡಲಾಗಿದೆ. ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಕೂರ್ಣೆಗಾಲ ಬಳಿ ಅರಣ್ಯ ಇಲಾಖೆ ಸಿಬ್ಬಂದಿ ಕಾಡಾನೆ ಮರಿಯನ್ನು ರಕ್ಷಿಸಿದ್ದಾರೆ.

ಮೈಸೂರಿನಲ್ಲಿ ಕಾಡಿನಿಂದ ನಾಡಿಗೆ ಬಂದು ಕಂದಕ್ಕೆ ಬಿದ್ದು ಹೊರ ಬರಲಾಗದೆ ಒದ್ದಾಡುತ್ತಿದ್ದ ಆನೆ ಮರಿಯನ್ನು ರಕ್ಷಿಸಲಾಗಿದೆ. ಹೆಚ್ ಡಿ ಕೋಟೆ ತಾಲ್ಲೂಕಿನ ಕೂರ್ಣೆಗಾಲ ಗ್ರಾಮದ ಬಳಿ ಈ ಘಟನೆ ನಡೆದಿದೆ. ಎರಡು ವರ್ಷದ ಗಂಡು ಆನೆ ಮರಿಯನ್ನು ಅರಣ್ಯ ಇಲಾಖೆ ಯಶಸ್ವಿ ಕಾರ್ಯಾಚರಣೆಯಿಂದ ರಕ್ಷಿಸಲಾಗಿದೆ.

ಎರಡು ಗಂಟೆ ಕಾರ್ಯಾಚರಣೆ ನಡೆಸಿ, ಜೆಸಿಬಿ ಯಂತ್ರದ ಸಹಾಯದಿಂದ ಆನೆ ಮರಿಯನ್ನು ರಕ್ಷಣೆ ಮಾಡಲಾಗಿದೆ. ಬಳಿಕ, ಆನೆ ಮರಿಯು ತನ್ನ ತಾಯಿಯ ಮಡಿಲು ಸೇರಿದೆ.

ಇದನ್ನೂ ಓದಿ – ಕಾಡಾನೆ ದಾಳಿ: ತಪ್ಪಿಸಿಕೊಳ್ಳುವ ಬರದಲ್ಲಿ ಹಳ್ಳಕ್ಕೆ ಬಿದ್ದು ಕೂಲಿ ಕಾರ್ಮಿಕ ಸ್ಥಳದಲ್ಲೇ ಸಾವು

Published On - 10:41 am, Tue, 23 March 21