ದೊಣ್ಣೆಯಿಂದ ತಲೆಗೆ ಹೊಡೆದು ಮಹಿಳೆಯ ಬರ್ಬರ ಹತ್ಯೆ: ಆರೋಪಿಗಾಗಿ ಪೊಲೀಸರಿಂದ ಹುಡುಕಾಟ
ಫಿರ್ಮಾಗೆ ಯಾದಗಿರಿಯ ಮೆಹಬೂಬ್ ಪರಿಚಯವಾಗಿದ್ದು, ಶನಿವಾರ ಫಿರ್ಮಾ ಮನೆಗೆ ಮೆಹಬೂಬ್ ಬಂದಿದ್ದಾನೆ. ಈ ವೇಳೆ ಇಬ್ಬರ ನಡುವೆ ಜಗಳವಾಗಿ ಕೊಲೆ ಮಾಡಿರುವ ಶಂಕೆ ಇದೆ. ಸದ್ಯ ಪರಾರಿಯಾಗಿರುವ ಮೆಹಬೂಬ್‌ಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.
ಬೆಂಗಳೂರು: ದೊಣ್ಣೆಯಿಂದ ತಲೆಗೆ ಹೊಡೆದು ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ನಡೆದಿದೆ. ಯಾದಗಿರಿ ಮೂಲದ 38 ವರ್ಷದ ಫಿರ್ಮಾ ಕೊಲೆಯಾದ ಮಹಿಳೆ. ನಗರದಲ್ಲಿ ಕೆಲಸಕ್ಕೆ ಸೇರಿಕೊಂಡು ಪರಪ್ಪನ ಅಗ್ರಹಾರದಲ್ಲಿ ನೆಲೆಸಿದ ಫಿರ್ಮಾಳನ್ನು ಮಗ ಕೆಲಸಕ್ಕೆ ಹೋಗಿದ್ದಾಗ ಮೆಹಬೂಬ್ ಎಂಬಾತ ಕೊಲೆ ಮಾಡಿರುವ ಶಂಕೆ ಇದೆ.
ಫಿರ್ಮಾಗೆ ಯಾದಗಿರಿಯ ಮೆಹಬೂಬ್ ಪರಿಚಯವಾಗಿದ್ದು, ಶನಿವಾರ ಫಿರ್ಮಾ ಮನೆಗೆ ಮೆಹಬೂಬ್ ಬಂದಿದ್ದಾನೆ. ಈ ವೇಳೆ ಇಬ್ಬರ ನಡುವೆ ಜಗಳವಾಗಿ ಕೊಲೆ ಮಾಡಿರುವ ಶಂಕೆ ಇದೆ. ಸದ್ಯ ಪರಾರಿಯಾಗಿರುವ ಮೆಹಬೂಬ್‌ಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಮಹಿಳೆ ಮಗ ಪರಪ್ಪನ ಅಗ್ರಹಾರ ಠಾಣೆಯಲ್ಲಿ ದೂರು ನೀಡಿದ್ದಾನೆ.
ಹಲವು ವರ್ಷಗಳ ಹಿಂದೆಯೇ ಫಿರ್ಮಾಳ ಗಂಡ ಆಕೆಯನ್ನು ಬಿಟ್ಟು ಹೋಗಿದ್ದ. ಹಾಗಾಗಿ ಫಿರ್ಮಾ ತನ್ನ ಊರು ಯಾದಗಿರಿ ಬಿಟ್ಟು ಬೆಂಗಳೂರಿನ ಪರಪ್ಪನ ಅಗ್ರಹಾರದ ಸಮೀಪವಿರುವ ನಾಯ್ದು ಲೇಔಟ್ನಲ್ಲಿ ವಾಸವಾಗಿದ್ದಳು. ಈಕೆಗೆ ಮೂವರು ಮಕ್ಕಳಿದ್ದಾರೆ. ಈ ಪೈಕಿ ತನ್ನ ಎರಡನೇ ಮಗ ಹುಸೇನ್ನೊಂದಿಗೆ ನೆಲೆಸಿದ್ದಳು. ಈಕೆ ಗಾರೆ ಕೆಲಸ ಮಾಡಿ ತನ್ನ ಜೀವನ ಸಾಗಿಸುತ್ತಿದ್ದಳು. ಈ ನಡುವೆ ಯಾದಗಿರಿ ಮೂಲಕ ಮೆಹಬೂಬ್ ಎಂಬಾತ ಆಗಾಗ ಫಿರ್ಮಾಳ ಮನೆಗೆ ಬಂದು ಹೋಗುತ್ತಿದ್ದ. ಶನಿವಾರ ಕೂಡ ಹುಸೇನ್ ಕೆಲಸಕ್ಕೆ ಹೋಗಿದ್ದಾಗ ಮೆಹಬೂಬ್ ಫಿರ್ಮಾಳ ಮನೆಗೆ ಬಂದಿದ್ದಾನೆ. ಈ ವೇಳೆ ಇವರಿಬ್ಬರ ನಡುವೆ ಜಗಳ ಶುರುವಾಗಿದೆ. ಮೆಹಬೂಬ್ ಬಂದು ಹೋದ ಎರಡು ಗಂಟೆಗಳ ಬಳಿಕ ಮನೆಯಿಂದ ಕೂಗಾಡ, ಚೀರಾಟ ಕೇಳಿ ಬಂದಿತ್ತು. ಕೆಲ ಹೊತ್ತಾದ ಮೇಲೆ ಆ ಶಬ್ದ ನಿಂತು ಹೋಗಿದೆ. ಬಳಿಕ ಮೆಹಬೂಬ್ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಮನೆ ಬಳಿ ಬಂದು ನೋಡಿದ ಅಕ್ಕಪಕ್ಕದ ಮನೆಯವರಿಗೆ ಫಿರ್ಮಾಳ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ.
ತಕ್ಷಣವೇ ಹುಸೇನ್ಗೆ ಕರೆ ಮಾಡಿ ಈ ವಿಷಯ ತಿಳಿಸಿದ್ದಾರೆ. ಬಳಿಕ ಫಿರ್ಮಾಳ ಮಗ ಹುಸೇನ್ ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಫಿರ್ಮಾಳ ಕೊಲೆ ಮುನ್ನ ಮೆಹಬೂಬ್ ಬಂದು ಹೋಗಿದ್ದು ಮೆಹಬೂಬ್ ಮೇಲೆ ಶಂಕೆ ವ್ಯಕ್ತವಾಗಿದೆ. ಸದ್ಯ ಪೊಲೀಸರು ಆರೋಪಿಯ ಹುಡುಕಾಟದಲ್ಲಿದ್ದಾರೆ.
ವಿಜಯಪುರದಲ್ಲಿ ಅಡ್ಡಬಂದ ಬೈಕ್‌ಗೆ ಡಿಕ್ಕಿ ತಪ್ಪಿಸಲು ಹೋಗಿ ಕಾರು ಪಲ್ಟಿ: ರಸ್ತೆಯಲ್ಲಿ ಅಡ್ಡ ಬಂದ ಬೈಕ್ ತಪ್ಪಿಸಲು ಹೋಗಿ ಕಾರ್ ಪಲ್ಟಿಯಾದ ಘಟನೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದ ಹೊರ ಭಾಗದಲ್ಲಿನ ರಾಷ್ಟ್ರೀಯ ಹೆದ್ದಾರಿ 218 ರಲ್ಲಿ ನಡೆದಿದೆ. ಕಾರಿನಲ್ಲಿದ್ದ ತಂದೆ ಮತ್ತು ಮಗ ಅದೃಷ್ಟವಶಾತ್ ಪಾರಾಗಿದ್ದಾರೆ. ಹೆದ್ದಾರಿ ಪಕ್ಕದಲ್ಲಿದ್ದ ಮರದ ಮೇಲೆ ಕಾರ್ ಎರಗಿದ್ದರ ಪರಿಣಾಮ ಮರ ಎರಡು ಹೋಳಾಗಿ ಬಿದ್ದಿದೆ.
ಕಲಬುರಗಿಯಿಂದ ವಿಜಯಪುರಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದ್ದು, ರುದ್ರಗೌಡ ಪಾಟೀಲ್ ಹಾಗೂ ಅವರ ಪುತ್ರ ಸಾಯಿಪ್ರಸಾದ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:
Published On - 11:19 am, Tue, 23 March 21