ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್​ಜಿ, ನಟ ಸುದೀಪ್​, ಡಾ.ದೇವಿಪ್ರಸಾದ್ ಶೆಟ್ಟಿಗೆ ಪತ್ರಕರ್ತರಿಂದ ವಿಶೇಷ ಗೌರವ

2020ನೇ ಸಾಲಿನ ಪ್ರೆಸ್​ ಕ್ಲಬ್ ಪ್ರಶಸ್ತಿಯ ಪಟ್ಟಿ ಪ್ರಕಟವಾಗಿದ್ದು ದೇಶದ ಪ್ರತಿಷ್ಠಿತ ಉದ್ಯಮಿ ಹಾಗೂ ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್​ಜಿ ಅವರಿಗೆ ಬೆಂಗಳೂರು ಪ್ರೆಸ್​ ಕ್ಲಬ್ ವತಿಯಿಂದ ವರ್ಷದ ವ್ಯಕ್ತಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ.

ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್​ಜಿ, ನಟ ಸುದೀಪ್​, ಡಾ.ದೇವಿಪ್ರಸಾದ್ ಶೆಟ್ಟಿಗೆ ಪತ್ರಕರ್ತರಿಂದ ವಿಶೇಷ ಗೌರವ
ಅಜೀಂ ಪ್ರೇಮ್​ಜಿ, ಸುದೀಪ್​, ಡಾ.ದೇವಿಪ್ರಸಾದ್ ಶೆಟ್ಟಿಗೆ ಪತ್ರಕರ್ತರಿಂದ ವಿಶೇಷ ಗೌರವ
Follow us
KUSHAL V
|

Updated on: Jan 18, 2021 | 8:28 PM

ಬೆಂಗಳೂರು: 2020ನೇ ಸಾಲಿನ ಪ್ರೆಸ್​ ಕ್ಲಬ್ ಪ್ರಶಸ್ತಿಯ ಪಟ್ಟಿ ಪ್ರಕಟವಾಗಿದ್ದು ದೇಶದ ಪ್ರತಿಷ್ಠಿತ ಉದ್ಯಮಿ ಹಾಗೂ ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್​ಜಿ ಅವರಿಗೆ ಬೆಂಗಳೂರು ಪ್ರೆಸ್​ ಕ್ಲಬ್ ವತಿಯಿಂದ ವರ್ಷದ ವ್ಯಕ್ತಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ.

ಜೊತೆಗೆ, ನಟ ಸುದೀಪ್ ಮತ್ತು ನಾರಾಯಣ ಹೃದಯಾಲಯದ ಸಂಸ್ಥಾಪಕ ಡಾ.ದೇವಿಪ್ರಸಾದ್ ಶೆಟ್ಟಿ ಅವರಿಗೆ ಸಹ ವಿಶೇಷ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಇದಲ್ಲದೆ, 25 ಹಿರಿಯ ಪತ್ರಕರ್ತರಿಗೆ ಸಹ ವಾರ್ಷಿಕ ಪ್ರೆಸ್​ ಕ್ಲಬ್​ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಫೆಬ್ರವರಿ ಮೂರನೇ ವಾರದಲ್ಲಿ ನಡೆಯುವ ಕಾರ್ಯಕ್ರಮದ ವೇಳೆ ಮೂವರು ಗಣ್ಯರಿಗೆ ಪ್ರಶಸ್ತಿ ಪ್ರದಾನ ಮಾಡುವರು.