ಕಾರ್ಮಿಕರ ಬಳಿ ಕ್ಷಮೆಯಾಚಿಸಿದ ವಿಸ್ಟ್ರಾನ್: ತಲೆಮರಿಸಿಕೊಂಡವರು ಮರಳಿ ಬನ್ನಿ ಅಂದ್ರು ಸಂಸದ ಮುನಿಸ್ವಾಮಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 20, 2020 | 8:29 PM

ಕಾರ್ಮಿಕರು ನಡೆಸಿರುವ ದಾಂದಲೆ ಯಾರೂ ಒಪ್ಪಿಕೊಳ್ಳುವಂತದಲ್ಲ. ಆದರೆ, ಇದರಲ್ಲಿ ಅಮಾಯಕರಿಗೆ ತೊಂದರೆ ಯಾಗದಂತೆ ನೋಡಿಕೊಳ್ಳಲಾಗುತ್ತದೆ. ಘಟನೆಯಿಂದ ಊರು ಬಿಟ್ಟಿರುವ ಕಾರ್ಮಿಕರು ಮತ್ತೆ ವಾಪಸ್ಸು ಬರುವಂತೆ ಸಂಸದ ಮುನಿಸ್ವಾಮಿ ಕರೆ ನೀಡಿದ್ದಾರೆ.

ಕಾರ್ಮಿಕರ ಬಳಿ ಕ್ಷಮೆಯಾಚಿಸಿದ ವಿಸ್ಟ್ರಾನ್: ತಲೆಮರಿಸಿಕೊಂಡವರು ಮರಳಿ ಬನ್ನಿ ಅಂದ್ರು ಸಂಸದ ಮುನಿಸ್ವಾಮಿ
ಸಂಸದ ಮುನಿಸ್ವಾಮಿ
Follow us on

ಕೋಲಾರ: ವಿಶ್ವದ ಪ್ರತಿಷ್ಠಿತ ಕಂಪನಿಗಳಲ್ಲಿ ಒಂದಾದ ವಿಸ್ಟ್ರಾನ್​​ನಲ್ಲಿ ಕಾರ್ಮಿಕರ ದಾಂದಲೆ ಪ್ರಕರಣ ನಡೆದು ಒಂದು ವಾರ ಕಳೆದಿದೆ. ದಿನಕ್ಕೊಂದು ಬೆಳವಣಿಗೆ ನಡೆಯುತ್ತಿರುವ ಬೆನ್ನಲ್ಲೇ ವಿಸ್ಟ್ರಾನ್​ ಕಂಪನಿ ತನ್ನಿಂದಾದ ತಪ್ಪನ್ನು ಒಪ್ಪಿಕೊಂಡಿದ್ದು, ಕಾರ್ಮಿಕರ ಬಳಿ ಕ್ಷಮೆ ಯಾಚಿಸಿದೆ. ಇತ್ತ ಸರ್ಕಾರವೂ ಹೂಡಿಕೆದಾರರನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿವೆ.

ಸರಿಯಾಗಿ ವೇತನ ನೀಡಿಲ್ಲವೆಂದು ಆರೋಪಿಸಿ ಡಿಸೆಂಬರ್​-12 ರಂದು ಕೋಲಾರ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿನ ವಿಸ್ಟ್ರಾನ್​ ಕಂಪನಿಯಲ್ಲಿ ಕಾರ್ಮಿಕರು ದಾಂದಲೆ ನಡೆಸಿದ್ದರು. ಕಂಪನಿಯಲ್ಲಿ ದಾಂದಲೆ ನಡೆಸಿದ ಕಾರ್ಮಿಕರನ್ನು ಈಗಾಗಲೇ ಬಂಧಿಸಲಾಗಿದೆ. ವಿಸ್ಟ್ರಾನ್​ ಆಡಳಿತ ಮಂಡಳಿ ಹಾಗೂ ಆ್ಯಪಲ್​ ತನಿಖಾ ತಂಡ ಘಟನಾ ಸ್ಥಳಕ್ಕೆ ಬಂದು ವಾಸ್ತವಾಂಶ ತಿಳಿಯುವ ಪ್ರಯತ್ನ ಮಾಡಿತ್ತು. ಈ ಬೆನ್ನಲ್ಲೇ ವಿಸ್ಟ್ರಾನ್​ ಕಂಪನಿ ಕಾರ್ಮಿಕರಲ್ಲಿ ಕ್ಷಮೆ ಕೇಳಿದೆ. ಜೊತೆಗೆ ಕಾರ್ಮಿಕರ ಬಾಕಿ ಇರುವ ವೇತನ ಅತಿ ಶೀಘ್ರದಲ್ಲಿ ಇತ್ಯರ್ಥಪಡಿಸುವ ಭರವಸೆ ನೀಡಿದೆ. ಆದಷ್ಟು ಬೇಗ ಇಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಿ ಮತ್ತೆ ಕಾರ್ಯಾರಂಭ ಮಾಡುವುದಾಗಿ ಹೇಳಿದೆ.

‘ತಲೆಮರೆಸಿಕೊಂಡಿರುವವರು ಕೂಡಲೇ ಬನ್ನಿ’
ಕಾರ್ಮಿಕರು ನಡೆಸಿರುವ ದಾಂದಲೆ ಯಾರೂ ಒಪ್ಪಿಕೊಳ್ಳುವಂಥದ್ದಲ್ಲ. ಆದರೆ, ಇದರಲ್ಲಿ ಅಮಾಯಕರಿಗೆ ತೊಂದರೆ ಯಾಗದಂತೆ ನೋಡಿಕೊಳ್ಳಲಾಗುತ್ತದೆ. ಘಟನೆಯ ನಂತರ ಊರು ಬಿಟ್ಟಿರುವ ಕಾರ್ಮಿಕರು ಮತ್ತೆ ವಾಪಸ್ಸು ಬನ್ನಿ. ಅಮಾಯಕ ಕಾರ್ಮಿಕರಿಗೆ ಶಿಕ್ಷೆಯಾಗದಂತೆ ನೋಡಿಕೊಳ್ಳಲಾಗುತ್ತದೆ ಎಂದು ಸಂಸದ ಮುನಿಸ್ವಾಮಿ ಹೇಳಿದರು.

ವಿಸ್ಟ್ರಾನ್​ ಗಲಭೆಯನ್ನು ಚೀನಾ ಲಾಭ ಮಾಡಿಕೊಳ್ಳಲು ಬಿಡುವುದಿಲ್ಲ..!
ವಿಸ್ಟ್ರಾನ್​ ಮತ್ತೆ ನಮ್ಮ ದೇಶದಲ್ಲಿ ಕಾರ್ಯಾರಂಭ ಮಾಡಲು ಬೇಕಾದ ಅಗತ್ಯ ನೆರವನ್ನು ನೀಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಿದ್ಧವಿದೆ. ಅದಕ್ಕಾಗಿ ಈಗಾಗಲೇ ಕಾರ್ಮಿಕ ಸಚಿವರು ಹಾಗೂ ಕೈಗಾರಿಕಾ ಸಚಿವರು ಕಾರ್ಖಾನೆಗಳ ಮುಖಂಡರುಗಳ ಸಭೆ ಕರೆದು ಅವರ ಸಮಸ್ಯೆಗಳನ್ನು ಆಲಿಸುತ್ತೇವೆ. ಈ ಗಲಭೆಯಿಂದ ಚೀನಾಗೆ ಲಾಭ ಮಾಡಿಕೊಡಲು ಮೋದಿ ಸರ್ಕಾರ ಬಿಡುವುದಿಲ್ಲ. ಕಮ್ಯುನಿಸ್ಟ್​ ಸರ್ಕಾರಗಳಿಗೆ ಕೇವಲ ಕಾರ್ಖಾನೆಗಳಿಗೆ ಬೀಗ ಹಾಕಿ ಧರಣಿ ಮಾಡಿರೋದು ಮಾತ್ರ ಗೊತ್ತು. ಆದ್ರೆ ಕಾರ್ಮಿಕರು ಕಾರ್ಖಾನೆಗಳ ಉದ್ಧಾರ ಮಾಡಿರುವುದು ಗೊತ್ತಿಲ್ಲ ಎಂದು ಮುನಿಸ್ವಾಮಿ ಆರೋಪಿಸಿದ್ದಾರೆ.

ವಿಸ್ಟ್ರಾನ್ ಕಂಪನಿ ದಾಂಧಲೆ ಪ್ರಕರಣ: ಕಂಪನಿಯ ಉಪಾಧ್ಯಕ್ಷ ವಿನ್ಸೆಂಟ್​​ ಲೀ ತಲೆದಂಡ

ದಾಂಧಲೆಗೆ ತುತ್ತಾಗಿದ್ದ ವಿಸ್ಟ್ರಾನ್ ಕಂಪನಿ, ಶೀಘ್ರದಲ್ಲೇ ಕೆಲಸ ಪುನರಾರಂಭ

ವಿಸ್ಟ್ರಾನ್ ಕಂಪನಿ ದಾಂಧಲೆ ಪ್ರಕರಣ: ಕಂಪನಿಯ ಉಪಾಧ್ಯಕ್ಷ ವಿನ್ಸೆಂಟ್​​ ಲೀ ತಲೆದಂಡ