ಕಬಾಬ್​ ಮೇ ಹಡ್ಡಿ ಆಗ್ತಾನೆ ಅಂತಾ.. ಭಾವಿ ಪತಿಯನ್ನೇ ಕೊಲೆಗೈದ ಖತರ್ನಾಕ್​ ಯುವತಿ ಅಂದರ್​!

|

Updated on: Dec 01, 2020 | 1:11 PM

ಪ್ರಿಯಕರನ ಜೊತೆ ಸೇರಿ ಯುವತಿಯೊಬ್ಬಳು ತನ್ನ ಭಾವಿ ಪತಿಯನ್ನೇ ಹತ್ಯೆಗೈದಿರುವ ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ರೋಡಲಬಂಡ ಗ್ರಾಮದಲ್ಲಿ ನಡೆದಿದೆ.

ಕಬಾಬ್​ ಮೇ ಹಡ್ಡಿ ಆಗ್ತಾನೆ ಅಂತಾ.. ಭಾವಿ ಪತಿಯನ್ನೇ ಕೊಲೆಗೈದ ಖತರ್ನಾಕ್​ ಯುವತಿ ಅಂದರ್​!
ಮೆಹಬೂಬ್‌, ಆರೋಪಿ ಖಾಜಾಬಿ (ಎಡ); ಪ್ರಿಯಕರ ಶಬ್ಬೀರ್‌ (ಬಲ)
Follow us on

ರಾಯಚೂರು: ಪ್ರಿಯಕರನ ಜೊತೆ ಸೇರಿ ಯುವತಿಯೊಬ್ಬಳು ತನ್ನ ಭಾವಿ ಪತಿಯನ್ನೇ ಹತ್ಯೆಗೈದಿರುವ ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ರೋಡಲಬಂಡ ಗ್ರಾಮದಲ್ಲಿ ನಡೆದಿದೆ. ಭಾಬಿ ಮದುಮಗ ಮೆಹಬೂಬ್(30) ಕೊಲೆಯಾದ ದುರ್ದೈವಿ.

ಸಿರವಾರ ಪಟ್ಟಣದ ನಿವಾಸಿಯಾಗಿದ್ದ ಮಹಬೂಬ್ ಜೊತೆ ಡಿ.3ರಂದು ಗ್ರಾಮದ ಖಾಜಾಬಿ ಮದುವೆ ನಿಶ್ಚಯವಾಗಿತ್ತು. ಆದರೆ, ಖಾಜಾಬಿ ಅದೇ ಗ್ರಾಮದ ಶಬ್ಬೀರ್‌ನನ್ನು ಪ್ರೀತಿಸುತ್ತಿದ್ದಳು. ಹೀಗಾಗಿ, ಶಬ್ಬೀರ್ ಜೊತೆ ಸೇರಿ ಖಾಜಾಬಿ ಮೆಹಬೂಬ್‌ ಹತ್ಯೆಗೆ ಸ್ಕೆಚ್​​ ಹಾಕಿದಳು.

ಅದರಂತೆ ಶಬ್ಬೀರ್, ಮೆಹಬೂಬ್‌ನನ್ನ ಅಪಹರಿಸಿ ಕೊಲೆಗೈದಿದ್ದ. ಬಳಿಕ ತೊಗರಿ ಹೊಲದಲ್ಲಿ ಮೆಹಬೂಬ್​ ಶವ ಹೂತಿಟ್ಟು ಇಬ್ಬರು ಪ್ರೇಮಿಗಳು ಪರಾರಿಯಾಗಿದ್ರು. ಈ ಕುರಿತು ಸಿರವಾರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಕೇಸ್ ದಾಖಲಾಗಿತ್ತು.

ಸದ್ಯ, ಖಾಜಾಬಿ ಮೊಬೈಲ್ ಡಾಟಾ ಆಧರಿಸಿ ಪೊಲೀಸರು ಅವರನ್ನು ಪತ್ತೆಹಚ್ಚಿದ್ದಾರೆ. ಖಾಜಾಬಿ ಮತ್ತು ಆಕೆಯ ಪ್ರಿಯಕರ ಶಬ್ಬೀರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಕೊಲೆಗೆ ಸಹಕರಿಸಿದ್ದ ಶಬ್ಬೀರ್​ನ ಇಬ್ಬರು ಸ್ನೇಹಿತರಿಗಾಗಿ ಪೊಲೀಸರು ಜಾಲ ಬೀಸಿದ್ದಾರೆ.

Published On - 1:06 pm, Tue, 1 December 20