ಮ್ಯಾಟ್ರಿಮೋನಿಯಲ್ಲೇ ಗಾಳ ಹಾಕಿ ಹನಿಟ್ರ್ಯಾಪ್ ಮಾಡ್ತಿದ್ದಳು.. ದೂರು ನೀಡಲು ಹೋಗಿ ಪೊಲೀಸರ ಬಲೆಗೆ ಬಿದ್ದ ಖತರ್ನಾಕ್ ಮಹಿಳೆ

ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ಕವಿತಾ. ಕೆಲಸ ಬಿಟ್ಟು ಹನಿಟ್ರ್ಯಾಪ್ ದಂಧೆಗಿಳಿದಿದ್ದಾಳೆ. ಅವಿವಾಹಿತ ಹಾಗೂ ವಿಚ್ಛೇದಿತ ಪುರುಷರನ್ನೇ ಟಾರ್ಗೆಟ್ ಮಾಡಿ ಮ್ಯಾಟ್ರಿಮೋನಿಯಲ್ಲೇ ಗಾಳ ಹಾಕಿ ಮೋಸ ಮಾಡುತ್ತಿದ್ದ ಮಾಜಿ ಟೀಚರ್, ಐನಾತಿ ಮಹಿಳೆಯನ್ನು ಇಂದಿರಾನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಮ್ಯಾಟ್ರಿಮೋನಿಯಲ್ಲೇ ಗಾಳ ಹಾಕಿ ಹನಿಟ್ರ್ಯಾಪ್ ಮಾಡ್ತಿದ್ದಳು.. ದೂರು ನೀಡಲು ಹೋಗಿ ಪೊಲೀಸರ ಬಲೆಗೆ ಬಿದ್ದ ಖತರ್ನಾಕ್ ಮಹಿಳೆ
ಬಂಧಿತ ಆರೋಪಿ ಕವಿತಾ
Follow us
ಆಯೇಷಾ ಬಾನು
|

Updated on: Jan 04, 2021 | 9:09 AM

ಬೆಂಗಳೂರು: ಅವಿವಾಹಿತ ಹಾಗೂ ವಿಚ್ಛೇದಿತ ಪುರುಷರನ್ನೇ ಟಾರ್ಗೆಟ್ ಮಾಡಿ ಮ್ಯಾಟ್ರಿಮೋನಿಯಲ್ಲೇ ಗಾಳ ಹಾಕಿ ಮೋಸ ಮಾಡುತ್ತಿದ್ದ ಮಾಜಿ ಟೀಚರ್, ಐನಾತಿ ಮಹಿಳೆಯನ್ನು ಇಂದಿರಾನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯ ಹೆಸರು ಕವಿತಾ. ಈಕೆ ಹೈಟೆಕ್ ಹನಿಟ್ರ್ಯಾಪ್ ದಂಧೆ ನಡೆಸುತ್ತಾಳೆ. ಈ ಹಿಂದೆ ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ಕವಿತಾ, ಕಾರಣಾಂತರಗಳಿಂದ ಶಿಕ್ಷಕ ವೃತ್ತಿ ಕಳೆದುಕೊಂಡಿದ್ದಳು. ಬಳಿಕ ಹನಿಟ್ರ್ಯಾಪ್ ದಂಧೆಗಿಳಿದು ಮ್ಯಾಟ್ರಿಮೋನಿಯಲ್ಲಿ ಅವಿವಾಹಿತ ಹಾಗೂ ವಿಚ್ಛೇದಿತ ಪುರುಷರನ್ನ ಪರಿಚಯ ಮಾಡಿಕೊಳ್ಳುತ್ತಿದ್ದಳು. ಅವರೊಂದಿಗಿನ ಖಾಸಗಿ ಕ್ಷಣಗಳನ್ನ ಚಿತ್ರಿಸಿಕೊಳ್ಳುತ್ತಿದ್ದಳು. ನಂತರ ಹಣಕ್ಕಾಗಿ ಡಿಮ್ಯಾಂಡ್ ಮಾಡ್ತಿದ್ದಳು.

ಇದೇ ರೀತಿ ಕವಿತಾ ಡಿ.22ರಂದು ಯುವಕನೊಬ್ಬನ ಮೇಲೆ ಅತ್ಯಾಚಾರದ ಆರೋಪ ಮಾಡಿದ್ದಳು. ಸಂತ್ರಸ್ತ ಯುವಕ ಅತ್ಯಾಚಾರವೆಸಗಿ ವಿಡಿಯೋ ಚಿತ್ರೀಕರಿಸಿದ್ದಾನೆ ಎಂದು ಆರೋಪಿಸಿ ಪೊಲೀಸರನ್ನ ಕರೆಸಿ ಅವರ ಸಮ್ಮುಖದಲ್ಲೇ ಖಾಸಗಿ ವಿಡಿಯೋ ಡಿಲಿಟ್ ಮಾಡಿಸಿದ್ದಳು. ಯುವಕನ ವಿರುದ್ಧ ದೂರು ನೀಡದಿರಲು 2 ಲಕ್ಷ ಹಣಕ್ಕೆ ಆತನ ಬಳಿ ಡಿಮ್ಯಾಂಡ್ ಮಾಡಿದ್ದಳು. ಆದ್ರೆ ಸಂತ್ರಸ್ತ ಯುವಕ ಹಣ ನೀಡದಿದ್ದಾಗ ಡಿ.31ರಂದು ಆತನ ವಿರುದ್ಧ ಇಂದಿರಾನಗರ ಠಾಣೆಗೆ ದೂರು ನೀಡಿದ್ದಳು.

ದೂರು ನೀಡಿ ತಾನೇ ಬಂಧಿಯಾದ್ಳು ಅಸಲಿಗೆ ವಿಡಿಯೋ ಡಿಲಿಟ್ ಮಾಡಲಾಗಿದೆ. ಆದರೂ ಈ ಪ್ರಕರಣ ಸಂಬಂಧ ಯುವಕನ ಮೇಲೆ ಕವಿತಾ ದೂರು ದಾಖಲಿಸಿದ್ಳು. ಇತ್ಯರ್ಥ ಎಂದುಕೊಂಡ ಪ್ರಕರಣ ಮತ್ತೆ ಠಾಣಾ ಮೆಟ್ಟಿಲೇರಿದ್ದಾಗ ಪೊಲೀಸರಿಗೆ ಅನುಮಾನ ಬಂದಿದೆ. ಆಗ ಕವಿತಾಳ ಮೊಬೈಲ್ ಪಡೆದು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಆಕೆಯ ಕಳ್ಳಾಟ ಬಯಲಾಗಿದೆ. ವಿಡಿಯೋ ಪರಿಶೀಲಿಸಿದಾಗ ಪರಸ್ಪರ ಒಪ್ಪಿಯೇ ದೈಹಿಕ ಸಂಪರ್ಕ ಹೊಂದಿದ್ದು ತಿಳಿದು ಬಂದಿದೆ. ಕವಿತಾಳ ಬಣ್ಣ ಬಯಲಾಗುತ್ತಿದ್ದಂತೆ ಇಂದಿರಾನಗರ ಠಾಣಾ ಪೊಲೀಸರು ತೀವ್ರ ವಿಚಾರಣೆ ನಡೆಸಿ ದೂರುದಾರಳಾಗಿದ್ದ ಕವಿತಾಳ ಖತರ್ನಾಕ್ ಕೃತ್ಯವನ್ನು ತಿಳಿದುಕೊಂಡಿದ್ದಾರೆ.

ಇನ್ನು ಈ ಐನಾತಿ ಕವಿತಾ ಇದೇ ಪ್ರಕರಣ ಸಂಬಂಧ ಯುವಕನ ಮೇಲೆ 2 ವಿವಿಧ ಠಾಣೆಗಳಲ್ಲಿ ದೂರು ನೀಡಿದ್ದಳು. ಹಾಗೂ ಮಲ್ಲೇಶ್ವರಂ, ಮಹಾದೇವಪುರ ಠಾಣೆಯಲ್ಲಿ ಈ ಹಿಂದೆ ಇದೇ ರೀತಿ ದೂರು ನೀಡಿದ್ದಳು. ಒಂದು ಪ್ರಕರಣದಲ್ಲಂತೂ ಸಂತ್ರಸ್ತ ಯುವಕನನ್ನ ಬಂಧನ ಮಾಡಿಸಿದ್ದಳು.

ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್