ಅತ್ತೆ, ಗಂಡ ಬೈದ್ರು ಅಂತಾ.. ಮಹಿಳಾ ದಿನಾಚರಣೆಯಂದೇ ಕಂದಮ್ಮನನ್ನು ಕೊಂದು ಮಹಿಳೆ ನೇಣಿಗೆ ಶರಣು
ಮಹಿಳಾ ದಿನಾಚರಣೆಯಂದೇ ಮಗಳನ್ನು ಕೊಂದು ತಾಯಿಯೊಬ್ಬಳು ನೇಣಿಗೆ ಶರಣಾಗಿರುವ ಮನಕಲುಕುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಊದುತಿ ಗ್ರಾಮದಲ್ಲಿ ಸಂಭವಿಸಿದೆ. ತನ್ನ 2 ವರ್ಷದ ಪುಟ್ಟ ಮಗಳು ಮನುಜಾಳನ್ನು ಕೊಂದ ಆಕೆಯ ತಾಯಿ ರಾಧಾ(28) ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚಿಕ್ಕಬಳ್ಳಾಪುರ: ಮಹಿಳಾ ದಿನಾಚರಣೆಯಂದೇ ಮಗಳನ್ನು ಕೊಂದು ತಾಯಿಯೊಬ್ಬಳು ನೇಣಿಗೆ ಶರಣಾಗಿರುವ ಮನಕಲುಕುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಊದುತಿ ಗ್ರಾಮದಲ್ಲಿ ಸಂಭವಿಸಿದೆ. ತನ್ನ 2 ವರ್ಷದ ಪುಟ್ಟ ಮಗಳು ಮನುಜಾಳನ್ನು ಕೊಂದ ಆಕೆಯ ತಾಯಿ ರಾಧಾ(28) ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಅತ್ತೆ ಹಾಗೂ ಗಂಡ ಬೈದರು ಅಂತಾ ಬೇಸರಗೊಂಡ ರಾಧಾ, ಮಗಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ, ಮೃತ ಮಹಿಳೆಯ ಅತ್ತೆ ಅಶ್ವತ್ಥಮ್ಮ ಹಾಗೂ ಗಂಡ ಮಂಜುನಾಥ್ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಗುಡ್ಡದ ಮಣ್ಣು ಕುಸಿದು ನಾಲ್ವರು ಕಾರ್ಮಿಕರ ದುರ್ಮರಣ ಗುಡ್ಡದ ಮಣ್ಣು ಕುಸಿದು ನಾಲ್ವರು ಕಾರ್ಮಿಕರು ದುರ್ಮರಣ ಹೊಂದಿರು ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಸಂತೇಬೈಲ್ ಇಡಗುಂದಿ ಗ್ರಾಮದ ಬಳಿ ನಡೆದಿದೆ. ಕೆಲಸಕ್ಕೆ ತೆರಳಿದ್ದ ಕಾರ್ಮಿಕರ ಮೇಲೆ ಗುಡ್ಡದ ಮಣ್ಣು ಕುಸಿದುಬಿದ್ದಿದೆ. ಮೃತರನ್ನು ಮಾಳು ಡೋಯಿಪಡೆ(21), ಲಕ್ಷ್ಮೀ ಡೋಯಿಪಡೆ(38), ಸಂತೋಷ್ ಡೋಯಿಪಡೆ(18), ಭಾಗ್ಯಶ್ರೀ(21) ಎಂದು ಗುರುತಿಸಲಾಗಿದೆ.
ಸಾವನ್ನಪ್ಪಿದವರೆಲ್ಲ ಕಿರುವತ್ತಿ ಬಳಿಯ ಹೊಸಳ್ಳಿ ಗ್ರಾಮದವರು. ತೋಟದ ಕೆಲಸ ಮಾಡುತ್ತಿದ್ದ 7 ಜನ ಕಾರ್ಮಿಕರಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಮಂಜುನಾಥ್ ನಾಗಪ್ಪ ಭಟ್ ಅವರ ತೊಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಬೆಣ್ಣೆನಗರಿಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ ವೇಳೆ ಅವಘಡ: ಹೋರಿ ತಿವಿದು ಯುವಕ ಸಾವು
Published On - 5:45 pm, Mon, 8 March 21