ಆಸ್ತಿಗಾಗಿ ಸುಪಾರಿ ಕೊಟ್ಟು ಮಾವನನ್ನು ಮುಗಿಸಿದ ಸೊಸೆ! ಮೆಡಿಕಲ್ ರಿಪೋರ್ಟ್​ನಲ್ಲಿ ಅಡಗಿತ್ತು ಸತ್ಯ..

|

Updated on: Apr 18, 2021 | 9:58 AM

ದೊಡ್ಡ ಮಗ ಮನೋಜ್​ಗೆ ಮನೆ ಕಟ್ಟಿಸಿಕೊಟ್ಟಿದ್ದು, ಎರಡನೇ ಮಗ ಸುರೇಶ್ ನಾಯ್ಕನಿಗೆ ಮನೆ ಕಟ್ಟಿಸಿಕೊಡಬೇಕು ಎಂದು ಚಿಕ್ಯಾನಾಯ್ಕ ತೀರ್ಮಾನಿಸಿದ್ದರು. ಮನೆ ಕಟ್ಟಿಸಿದರೆ ಯಾವುದೇ ಆಸ್ತಿ ಸಿಗುವುದಿಲ್ಲ ಎಂದು ವನಜಾಕ್ಷಿ ಕೊಲೆ ಮಾಡುವ ತೀರ್ಮಾನಕ್ಕೆ ಬಂದಿದ್ದಾಳೆ ಎನ್ನಲಾಗಿದೆ.

ಆಸ್ತಿಗಾಗಿ ಸುಪಾರಿ ಕೊಟ್ಟು ಮಾವನನ್ನು ಮುಗಿಸಿದ ಸೊಸೆ! ಮೆಡಿಕಲ್ ರಿಪೋರ್ಟ್​ನಲ್ಲಿ ಅಡಗಿತ್ತು ಸತ್ಯ..
ಬಂಧಿತರು
Follow us on

ದಾವಣಗೆರೆ: ಚನ್ನಗಿರಿ ಠಾಣಾ ವ್ಯಾಪ್ತಿಯ ಶ್ರೀನಿವಾಸಪುರದಲ್ಲಿ ಆಸ್ತಿಯ ಸಲುವಾಗಿ ಸೊಸೆಯೇ ಸುಪಾರಿ ನೀಡಿ ಮಾವನ ಕೊಲೆ ಮಾಡಿಸಿರುವ ಮಾಹಿತಿ ತಿಳಿದುಬಂದಿದ್ದು, ಸೊಸೆ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ನಿವೃತ್ತ ಶಿಕ್ಷಕ ಚಿಕ್ಯನಾಯ್ಕ ಕೊಲೆಯಾದ ವ್ಯಕ್ತಿ. ಸೊಸೆ ವನಜಾಕ್ಷಿ, ಈಕೆಯ ಪ್ರಿಯಕರ ಮೇಸ್ತ್ರಿ ಹನುಮಂತ ಹಾಗೂ ನಾಗರಾಜ ಬಂಧನಕ್ಕೊಳಗಾಗಿದ್ದಾರೆ. ಚಿಕ್ಯಾನಾಯ್ಕ ತನ್ನ ಪತ್ನಿ, ಮಕ್ಕಳು ಹಾಗೂ ಸೊಸೆಯೊಂದಿಗೆ ತೋಟ, ಮನೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.

ದೊಡ್ಡ ಮಗ ಮನೋಜ್​ಗೆ ಮನೆ ಕಟ್ಟಿಸಿಕೊಟ್ಟಿದ್ದು, ಎರಡನೇ ಮಗ ಸುರೇಶ್ ನಾಯ್ಕನಿಗೆ ಮನೆ ಕಟ್ಟಿಸಿಕೊಡಬೇಕು ಎಂದು ಚಿಕ್ಯಾನಾಯ್ಕ ತೀರ್ಮಾನಿಸಿದ್ದರು. ಮನೆ ಕಟ್ಟಿಸಿದರೆ ಯಾವುದೇ ಆಸ್ತಿ ಸಿಗುವುದಿಲ್ಲ ಎಂದು ವನಜಾಕ್ಷಿ ಕೊಲೆ ಮಾಡುವ ತೀರ್ಮಾನಕ್ಕೆ ಬಂದಿದ್ದಾಳೆ ಎನ್ನಲಾಗಿದೆ.

ಮೇಸ್ತ್ರಿ ಹನುಮಂತನ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ವನಜಾಕ್ಷಿ, ಮಾವನನ್ನು ಕೊಲೆ ಮಾಡಿದರೆ 6 ಲಕ್ಷ ರೂ. ಹಣ ಕೊಡುವುದಾಗಿ ಹನುಮಂತನಿಗೆ ಸುಪಾರಿ ನೀಡಿದ್ದಳು. 1 ಲಕ್ಷವನ್ನು ಮುಂಗಡವಾಗಿ ನೀಡಿದ್ದಳು. ಹನುಮಂತ ತನ್ನ ಜೊತೆ ಕೆಲಸ ಮಾಡುತ್ತಿದ್ದ ನಾಗರಾಜನ ಸಹಾಯ ಪಡೆದು ಏಪ್ರಿಲ್ 4 ರಂದು ಸೀರೆ ತುಣುಕಿನಿಂದ ಚಿಕ್ಯಾನಾಯ್ಕ ಅವರ ಕುತ್ತಿಗೆಗೆ ಬಿಗಿದು ಕೊಲೆ ಮಾಡಿ ಸಾಕ್ಷ್ಯ ನಾಶಪಡಿಸಿದ್ದರು.

ಬಟ್ಟೆಯಿಂದ ಕುತ್ತಿಗೆಗೆ ಬಿಗಿದು ಸಾಯಿಸಿರುವುದು ಮೃತರ ಶವ ಪರೀಕ್ಷೆ ವೇಳೆ ದೃಢಪಟ್ಟಿದ್ದು, ಇದರ ಬೆನ್ನತ್ತಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ನಿಜ ಬಾಯ್ಬಿಟ್ಟಿದ್ದಾರೆ. ಚನ್ನಗಿರಿ ಉಪವಿಭಾಗದ ಡಿವೈಎಸ್​ಪಿ ಕೆ.ಎಂ. ಸಂತೋಷ್ ಮಾರ್ಗದರ್ಶನದಲ್ಲಿ ಚನ್ನಗಿರಿ ಪಿಎಸ್ಐ ಜಗದೀಶ್ (ಕಾನೂನು ಮತ್ತು ಸುವ್ಯವಸ್ಥೆ) ರೂಪ್ಲಿಬಾಯಿ (ಅಪರಾಧ), ಹೆಡ್​ಕಾನ್ಸ್ಟೆಬಲ್ ರುದ್ರೇಶ್, ಮೊಹಮ್ಮದ್ ಖಾನ್, ಧರ್ಮಪ್ಪ ಎಸ್, ಶ್ರೀನಿವಾಸಮೂರ್ತಿ, ಪರಶುರಾಮ್, ಅರುಣ್​ಕುಮಾರ್ ಹಾಗೂ ಜೀಪ್ ಚಾಲಕ ರೇವಣ ಸಿದ್ದಪ್ಪ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಪ್ರಕರಣ ಭೇದಿಸಿದ ತಂಡಕ್ಕೆ ಎಸ್​ಪಿ  ಹನುಮಂತರಾಯ, ಎಎಸ್​ಪಿ ಎಂ.ರಾಜೀವ್ ಅಭಿನಂದಿಸಿದ್ದಾರೆ.

ಇದನ್ನೂ ಓದಿ

ಒಮ್ಮೊಮ್ಮೆ ಕೊಲೆ ಮಾಡಬೇಕು ಅನಿಸುತ್ತೆ; ರಘು ಗೌಡ ಹೀಗೆ ಹೇಳಿದ್ದು ಯಾರಿಗೆ?

Black Lives Matter: ಜಾರ್ಜ್​ ಫ್ಲೈಡ್​ನನ್ನು ಕೊಂದ ನಗರದಲ್ಲೇ ಮತ್ತೋರ್ವ ಕಪ್ಪು ವರ್ಣೀಯನ ಕೊಲೆ, ಮಿನಿಯಾಪೊಲೀಸ್​ ಉದ್ವಿಗ್ನ

(woman had Supari for her Father in law murder at Davanagere)