AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಾಕ್​ಡೌನ್​ನಲ್ಲಿ ಸೃಷ್ಟಿಯಾದ ಸುಂದರ ಸಸ್ಯಕಾಶಿ; ಮನೆಯ ಮೇಲೆಯೇ ನಿರ್ಮಾಣವಾಗಿದೆ ಕಿಚನ್ ಗಾರ್ಡನ್

ಸಾವಯವ ಪದ್ಧತಿಯಲ್ಲಿ ತರಕಾರಿಯನ್ನು ಬೆಳದಿದ್ದು, ಇದನ್ನೇ ಮನೆಯ ಅಡುಗೆಗೆ ಬಳಸುತ್ತಿದ್ದಾರೆ. ಆ ಮೂಲಕ ಕೆಮಿಕಲ್ ಮುಕ್ತ ತಾಜಾ ತರಕಾರಿಯನ್ನು ಮನೆಯಲ್ಲೇ ಬೆಳೆಯುತ್ತಿದ್ದಾರೆ.

ಲಾಕ್​ಡೌನ್​ನಲ್ಲಿ ಸೃಷ್ಟಿಯಾದ ಸುಂದರ ಸಸ್ಯಕಾಶಿ; ಮನೆಯ ಮೇಲೆಯೇ ನಿರ್ಮಾಣವಾಗಿದೆ ಕಿಚನ್ ಗಾರ್ಡನ್
ಸಾಂದರ್ಭಿಕ ಚಿತ್ರ
preethi shettigar
| Updated By: ಮದನ್​ ಕುಮಾರ್​|

Updated on: Apr 18, 2021 | 8:50 AM

Share

ಕಲಬುರಗಿ: ಬೇಸಿಗೆಯ ಸಂದರ್ಭದಲ್ಲಿ ಕಲಬುರಗಿ ಜಿಲ್ಲೆಯಲ್ಲಿ ನೆತ್ತಿ ಸುಡುವ ಬಿಸಿಲು ಜನರನ್ನು ಹೈರಾಣು ಮಾಡುತ್ತದೆ. ಆದರೆ ಬಿಸಿಲಿನ ಬೇಗೆಯಿಂದ ಹೊರಬರಲು ಸ್ವಲ್ಪ ಸಮಯವನ್ನು ನೀಡಿದರೆ ಸಾಕು ತಂಪಾದ ವಾತವರಣವನ್ನು ಸೃಷ್ಟಿಸಿಕೊಳ್ಳಬಹುದು ಎಂದು ಕಲಬುರಗಿ ನಗರದಲ್ಲಿರುವ ಒಂದು ಕುಟುಂಬ ನಿರೂಪಿಸಿದೆ. ಮನೆಯನ್ನೇ ಸಸ್ಯಕಾಶಿ ಮಾಡಿಕೊಂಡಿರುವ ಈ ಕುಟುಂಬ, ಮನೆಯನ್ನು ತಂಪಾಗಿ ಇಟ್ಟುಕೊಳ್ಳಲು ಮನೆಯ ಮೇಲೆಯೇ ಟೆರಸ್ ಗಾರ್ಡನ್ ಮತ್ತು ಕಿಚನ್ ಗಾರ್ಡನ್ ನಿರ್ಮಾಣ ಮಾಡಿದ್ದಾರೆ. ಇನ್ನು ವಿಶೇಷವೆಂದರೆ ಮನೆಗೆ ಬೇಕಾದ ತರಕಾರಿಯನ್ನು ಕೂಡಾ ಇವರೇ ಬೆಳೆಯುತ್ತಿದ್ದಾರೆ.

ಕಲಬುರಗಿ ನಗರದ ಸಂಗಮೇಶ್ವರ ಕಾಲೋನಿಯಲ್ಲಿರುವ ರಾಮು ಅವರಸಂಗ್ ಎನ್ನುವವರು ತಮ್ಮ ಮನೆಯ ಮೇಲೆ ಮಿನಿ ಗಾರ್ಡನ್ ಮತ್ತು ಕಿಚನ್ ಗಾರ್ಡನ್ ಬೆಳಸಿದ್ದಾರೆ. ತಮ್ಮದೆ ಆದ ಜಾಹಿತಾರು ಏಜನ್ಸಿಯನ್ನು ನಡೆಸುವ ರಾಮು ಮತ್ತು ಅವರ ಕುಟುಂಬದವರು ಮನೆಯಲ್ಲಿದ್ದ ಅನೇಕ ನಿರುಪಯೋಗಿ ವಸ್ತುಗಳನ್ನು ಹುಡುಕಿ, ಅವುಗಳನ್ನೆ ಬಳಸಿಕೊಂಡು ಪಾಟ್ಗ​ಳನ್ನಾಗಿ ಮಾಡಿದ್ದಾರೆ. ಈ ಪಾಟ್​ನಲ್ಲಿ ಅನೇಕ ಬಗೆಯ ಅಲಂಕಾರಿಕ ಸಸಿಗಳನ್ನು ಬೆಳಸಿದ್ದು, ಕೆಲವು ಪಾಟ್​ಗಳು ಮತ್ತು ಬಕೆಟ್​ಗಳಲ್ಲಿ ಮಣ್ಣು ಹಾಕಿ ವಿವಿಧ ರೀತಿಯ ಹಣ್ಣಿನ ಗಿಡಗಳು, ತರಕಾರಿಯನ್ನು ಬೆಳದಿದ್ದಾರೆ. ಟೆರಸ್ ಮೇಲೆ ಬೆಳೆದಿರುವ ಕಿಚನ್ ಗಾರ್ಡನ್​ನಲ್ಲಿ ಟೊಮೆಟೋ, ಮೆಣಸಿನಕಾಯಿ, ಬದನೆಕಾಯಿ, ಮೂಲಂಗಿ, ಕರಿಬೇವು, ಪುದಿನಾ ಸೇರಿದಂತೆ ಅನೇಕ ತರಕಾರಿಗಳನ್ನು ಬೆಳೆದಿದ್ದಾರೆ.

ಸಾವಯವ ಪದ್ಧತಿಯಲ್ಲಿ ಬೆಳೆಯುತ್ತಿರುವ ತರಕಾರಿ ಮತ್ತು ಹಣ್ಣು ಸಾವಯವ ಪದ್ಧತಿಯಲ್ಲಿ ತರಕಾರಿಯನ್ನು ಬೆಳದಿದ್ದು, ಇದನ್ನೇ ಮನೆಯ ಅಡುಗೆಗೆ ಬಳಸುತ್ತಿದ್ದಾರೆ. ಆ ಮೂಲಕ ಕೆಮಿಕಲ್ ಮುಕ್ತ ತಾಜಾ ತರಕಾರಿಯನ್ನು ಮನೆಯಲ್ಲೇ ಬೆಳೆಯುತ್ತಿದ್ದಾರೆ. ಇನ್ನು ಅನೇಕ ಹಣ್ಣಿನ ಗಿಡಗಳು, ಹೂವಿನ ಗಿಡಗಳು, ಅಲಂಕಾರಿಕ ಗಿಡಗಳು ಸೇರಿದಂತೆ ಪುಟ್ಟ ಜಾಗದಲ್ಲಿ 150ಕ್ಕೂ ಹೆಚ್ಚು ಬಗೆಯ ಗಿಡಗಳನ್ನು ಬೆಳದಿದ್ದಾರೆ . ಮನೆಯ ಮೇಲೆ ಇರುವ ಮೂವತ್ತು ಅಡಿ ಜಾಗದಲ್ಲಿಯೇ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಗಿಡಗಳನ್ನು ಬೆಳೆದಿದ್ದಾರೆ ಎನ್ನುವುದು ವಿಶೇಷ.

home garden

ಸಾವಯಾವ ಪದ್ಧತಿ ಅನುಸರಿಸಿ ಮನೆಯ ಮೇಲೆ ಸಸ್ಯ ಬೆಳೆ

ಪಕ್ಷಿಗಳಿಗೆ ಮನೆಯಾದ ಟೆರಸ್ ಗಾರ್ಡನ್ ಇನ್ನು ನಗರ ಬೆಳೆದಂತೆ ಗಿಡಮರಗಳು ಮಾಯವಾಗುತ್ತಿವೆ. ಹೀಗಾಗಿ ಪಕ್ಷಿಗಳು ನೀರು ಆಹಾರವಿಲ್ಲದೆ, ಮರಗಿಡಗಳಿಲ್ಲದೆ ತೊಂದರೆ ಅನುಭವಿಸುತ್ತಿವೆ. ಆದರೆ ರಾಮು ಅವರು ಮಾಡಿರುವ ಟೆರಸ್ ಗಾರ್ಡನ್​ನಿಂದಾಗಿ ಅನೇಕ ಪಕ್ಷಿಗಳು ಟೆರಸ್ ಗಾರ್ಡನ್​ನತ್ತ ಬರುತ್ತಿವೆ. ಗುಬ್ಬಿ, ಪಾರಿವಾಳ, ಕಾಗೆ ಸೇರಿದಂತೆ ಅನೇಕ ಪಕ್ಷಿಗಳು ಬರುತ್ತಿದ್ದು, ಮುಂಜಾನೆ ಪಕ್ಷಿಗಳ ಚಿಲಿಪಿಲಿ ಸದ್ದನ್ನು ಕೇಳಿ ಮನಸಿಗೆ ಆನಂದವಾಗುತ್ತಿದೆ ಎಂದು ರಾಮು ಕುಟಂಬಸ್ಥರು ಹೇಳಿದ್ದಾರೆ. ಇನ್ನು ಪಕ್ಷಿಗಳಿಗೆ ಅನಕೂಲವಾಗಲಿ ಎನ್ನುವ ಉದ್ದೇಶದಿಂದ ಟೆರಸ್ ಗಾರ್ಡನ್​ನಲ್ಲಿ ನೀರು ಮತ್ತು ಕಾಳಿನ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ.

ಇನ್ನು ರಾಮು ಮನೆಯ ಟೆರಸ್ ಮೇಲೆ ಮಾಡಿರುವ ಮಿನಿ ಗಾರ್ಡನ್ ನೋಡಲು, ನಗರದ ಅನೇಕ ಜನರು ಬರುತ್ತಿದ್ದು, ಕಡಿಮೆ ಜಾಗದಲ್ಲಿ, ಕಡಿಮೆ ಹಣ ಖರ್ಚು ಮಾಡಿ, ಹೇಗೆ ಗೀಡಗಳನ್ನು ಬೆಳೆಸಬಹುದು ಎಂಬ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.

ಕಳೆದ ವರ್ಷ ಲಾಕ್​ಡೌನ್ ಸಮಯದಲ್ಲಿ ಮನೆಯಲ್ಲಿ ಸಮಯವನ್ನು ಕಳೆಯೋದು ಹೇಗೆ ಎನ್ನುವ ಚಿಂತೆ ಪ್ರಾರಂಭವಾದಾಗ ಹೊಳೆದಿದ್ದೆ ಈ ಟೆರಸ್ ಗಾರ್ಡನ್. ಕುಟುಂಬದವರೆಲ್ಲಾ ಸೇರಿ ಮನೆಯ ಮೇಲೆಯೇ ಅನೇಕ ರೀತಿಯ ನಿರುಪಯುಕ್ತ ವಸ್ತುಗಳನ್ನು ಬಳಸಿಕೊಂಡು ವಿವಿಧ ಬಗೆಯ ತರಕಾರಿ, ಹಣ್ಣಿನ ಗಿಡಗಳು, ಅಲಂಕಾರಿಕ ಗಿಡಗಳನ್ನು ಬೆಳೆದಿದ್ದೆವೆ. ಇದೀಗ ಅವು ಫಲ ನೀಡುತ್ತಿವೆ. ಇದರಿಂದ ಮನೆಯು ಕೂಡ ತಂಪಾಗಿದೆ. ಕಡಿಮೆ ಹಣ ಖರ್ಚು ಮಾಡಿ, ಸ್ವಲ್ಪ ಸಮಯವನ್ನು ನೀಡಿದರೆ ಪ್ರತಿಯೊಬ್ಬರು ತಮ್ಮ ಮನೆಯನ್ನು ಸಸ್ಯಕಾಶಿ ಮಾಡಿಕೊಳ್ಳಬಹುದು ಎಂದು ರಾಮು ಅವರಸಂಗ್ ಹೇಳಿದ್ದಾರೆ.

ಇದನ್ನೂ ಓದಿ:

ನಿವೃತ್ತ ಕಂದಾಯ ಅಧಿಕಾರಿಯ ಹಸಿರು ಪ್ರೇಮ; ಮನೆಯ ಮಹಡಿಯ ಮೇಲೆ ನಿರ್ಮಾಣವಾಗಿದೆ ಮಿನಿ ಲಾಲ್​ಬಾಗ್

( Kalburgi family built a garden on the top floor of house)