ರಾಜಧಾನಿ ಬೆಂಗಳೂರಿನ ಬೀದಿಯಲ್ಲಿ ಮಹಿಳೆಗೆ ಕಿರುಕುಳ, ದಾರುಣ ಘಟನೆ ಬಗ್ಗೆ ಎಕ್ಸ್ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡ ಪತಿ

|

Updated on: Nov 16, 2023 | 11:05 AM

ಅಲ್ಲಿ ಏನಾಯಿತೆಂದರೆ ದುಷ್ಕರ್ಮಿಗಳು ಕಾರಿನಲ್ಲಿದ್ದವರನ್ನು ಕೆಳಗಿಳಿಸುವಂತೆ ಕೇಳಿದರು. ಅದಕ್ಕೆ ನನ್ನ ಪತ್ನಿ ಒಪ್ಪಲಿಲ್ಲ ಎಂದು ಟ್ವೀಟ್ ಮಾಡಿರುವ ಶೆಟ್ಟಿ ಹೇಳಿದ್ದಾರೆ. ಆ ಮೇಲೆ, ಕೆಲವು ಟೆಂಪೋ ಚಾಲಕರು ಕಾರಿಗೆ ಗುದ್ದಿ ಕಾರಲ್ಲಿದ್ದವರನ್ನು ಕೆಳಗೆ ಇಳಿಯುವಂತೆ ಒತ್ತಡ ಹೇರಿದರು. ಈ ವೇಳೆ ದಾರಿಹೋಕರು ಯಾರೂ ಕಾರಿನಲ್ಲಿದ್ದ ಮೂವರು ಮಹಿಳೆಯರು ಮತ್ತು ಒಬ್ಬ ಪುರುಷನ ಸಹಾಯಕ್ಕೆ ಬರಲಿಲ್ಲ ಎಂದಿದ್ದಾರೆ.

ರಾಜಧಾನಿ ಬೆಂಗಳೂರಿನ ಬೀದಿಯಲ್ಲಿ ಮಹಿಳೆಗೆ ಕಿರುಕುಳ, ದಾರುಣ ಘಟನೆ ಬಗ್ಗೆ ಎಕ್ಸ್ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡ ಪತಿ
ರಾಜಧಾನಿ ಬೆಂಗಳೂರಿನ ಬೀದಿಯಲ್ಲಿ ಮಹಿಳೆಗೆ ಕಿರುಕುಳ, ದಾರುಣ ಘಟನೆ ಬಗ್ಗೆ ಎಕ್ಸ್ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡ ಪತಿ
Follow us on

ಭಾರತದ ಐಟಿ ರಾಜಧಾನಿಯಾಗಿರುವ ಬೆಂಗಳೂರು (Bengaluru) ತನ್ನ ವಿಶಿಷ್ಟವಾದ ಉದ್ಯೋಗ ಸಂಸ್ಕೃತಿಗೆ ಹೆಸರುವಾಸಿಯಾಗಿದೆ. ಆದರೆ ಇದರಿಂದ ಸಾಮಾನ್ಯವಾಗಿ ಕೆಲ ಉದ್ಯೋಗಿಗಳಿಗೆ ಅಕಾಲಿಕ ಮತ್ತು ಕಠಿಣ ಪಾಳಿಪಟ್ಟಿಯನ್ನು ಸೃಷ್ಟಿಸಿ, ಕಿರಿಕಿರಿ ಉಂಟುಮಾಡುತ್ತದೆ. ಗಾರ್ಡನ್ ಸಿಟಿಯಲ್ಲಿ ನಡೆದಿರುವ ಈ ಪ್ರಸಂಗ ಈಗ ವೈರಲ್ ಆಗಿದೆ. ಬೆಂಗಳೂರಿನಲ್ಲಿ ನೆಲೆಸಿರುವ ವ್ಯಕ್ತಿಯೊಬ್ಬರು ತಮ್ಮ ಪತ್ನಿ (wife) ಅನುಭವಿಸಿರುವ ಆ ಭಯಾನಕ ಘಟನೆಯ ಬಗ್ಗೆ ಟ್ವಿಟ್ಟರ್​ ಸಾಮಾಜಿಕ ಜಾಲತಾಣದಲ್ಲಿ (viral X post, formerly Twitter) ಹಂಚಿಕೊಂಡಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಹೇಳುವಂತೆ ರಾತ್ರಿ 10 ಗಂಟೆಗೆ ಸರ್ಜಾಪುರದಲ್ಲಿ (Sarjapur) ನಕಲಿ ಅಪಘಾತವೆಂದು ಬಿಂಬಿಸಿ, ದುಷ್ಕರ್ಮಿಗಳು ಕಾರಿನಲ್ಲಿದ್ದ ಜನರನ್ನು ಬ್ಲಾಕ್‌ಮೇಲ್ ಮಾಡಲು ಯತ್ನಿಸಿದ ದೃಶ್ಯಗಳು ಅದರಲ್ಲಿದೆ. ನವೆಂಬರ್ 8 ರಂದು, ಸರ್ಜಾಪುರದಿಂದ ಕ್ಯಾಬ್ ಪಡೆಯುವುದು ಕಷ್ಟಕರವೆಂದು ಪರಿಗಣಿಸಿ ನನ್ನ ಹೆಂಡತಿ ಇತರ ಕೆಲವು ಸಹೋದ್ಯೋಗಿಗಳನ್ನು (ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷ) ಡ್ರಾಪ್ ಮಾಡಲು ಮುಂದಾದಳು. ಅವರ ಕಾರನ್ನು ಕೆಲವು ಕಿಲೋ ಮೀಟರುಗಳಷ್ಟು ಪುರುಷರ ಗುಂಪೊಂದು ಹಿಂಬಾಲಿಸಿದೆ. ಅಪಾಯದ ಮುನ್ಚೂಚನೆ ಸಿಗುತ್ತಿದ್ದಂತೆ ನನ್ನ ಪತ್ನಿ ಮುಖ್ಯ ರಸ್ತೆಯಲ್ಲಿಯೇ ವಾಹನವನ್ನು ನಿಲ್ಲಿಸಿ, ಸಾಧ್ಯವಾದಷ್ಟು ಬೇಗ ಪೊಲೀಸರಿಗೆ (Bangalore police) ತಿಳಿಸಲು ಮುಂದಾದಳು.

ಅಲ್ಲಿ ಏನಾಯಿತೆಂದರೆ ಆ ದುಷ್ಕರ್ಮಿಗಳು ಕಾರಿನಲ್ಲಿದ್ದವರನ್ನು ಕೆಳಗಿಳಿಸುವಂತೆ ಕೇಳಿದರು. ಆದರೆ ನನ್ನ ಪತ್ನಿ ಅದಕ್ಕೆ ಒಪ್ಪಲಿಲ್ಲ ಎಂದು ಟ್ವೀಟ್ ಮಾಡಿರುವ ಶೆಟ್ಟಿ (Srijan R Shetty) ಹೇಳಿದ್ದಾರೆ. ಆ ಮೇಲೆ, ಕೆಲವು ಟೆಂಪೋ ಚಾಲಕರು ಕಾರಿಗೆ ಗುದ್ದಿ ನನ್ನ ಪತ್ನಿ ಮತ್ತು ಅವರ ಸಹೋದ್ಯೋಗಿಗಳನ್ನು ಕೆಳಗೆ ಇಳಿಯುವಂತೆ ಒತ್ತಡ ಹೇರಿದರು. ಆದರೆ ದಾರಿಹೋಕರು ಯಾರೂ ಕಾರಿನಲ್ಲಿದ್ದ ಮೂವರು ಮಹಿಳೆಯರು ಮತ್ತು ಒಬ್ಬ ಪುರುಷನ ಸಹಾಯಕ್ಕೆ ಬರಲಿಲ್ಲ.

ಪ್ರತಿಕೂಲ ಪರಿಸ್ಥಿತಿಯಲ್ಲಿ, ನನ್ನ ಪತ್ನಿ ಮುಖ್ಯ ರಸ್ತೆಯ ಮೇಲೆ ಕಾರನ್ನು ಚಲಾಯಿಸುವ ಮೂಲಕ ತ್ವರಿತ ನಿರ್ಧಾರ ಪ್ರದರ್ಶಿಸಿದರು ಮತ್ತು ತಕ್ಷಣವೇ ಪೊಲೀಸರನ್ನು ಎಚ್ಚರಿಸಿದರು ಎಂದು ಟ್ವೀಟ್​​ನಲ್ಲಿ ಶೆಟ್ಟಿ ಹೇಳಿದ್ದಾರೆ. ಒಂದು ವೇಳೆ ಪೊಲೀಸರಿಗೆ ಕರೆ ಮಾಡದೆ ಇದ್ದಿದ್ದರೆ ಆಕೆ ಮತ್ತು ಆಕೆಯ ಸ್ನೇಹಿತರು ಘಟನೆಯು ಬೇರೆಯದೇ ತಿರುವು ಪಡೆದುಕೊಳ್ಳಬಹುದಿತ್ತು.

ಈ ನಗರವು ಪ್ರಶಾಂತವಾದ ನಗರವಾಗಿದೆ. ಆದರೂ ಇಂತಹ ಘಟನೆ ನಡೆದಿದೆ. ನಮಗೆ ಭದ್ರತೆ ಬೇಕು, ಅದರ ಜರೂರತ್ತು ಈಗ ಹೆಚ್ಚಾಗಿದೆ. ಸರ್ಜಾಪುರ ಈ ಘಟನೆಗಳಿಗೆ ಹಾಟ್‌ಸ್ಪಾಟ್ ಆಗುತ್ತಿದ್ದು, ಮುಂದೆ ಅಪಾಯಗಳನ್ನು ತಡೆಯಲು ನಾವು ಈಗಲೇ ಪರಿಹಾರ ಕಂಡುಕೊಳ್ಳಬೇಕು ಎಂದು ಶೆಟ್ಟಿ ಎಚ್ಚರಿಸಿದ್ದಾರೆ.

ಸದರಿ ಟ್ವಿಟ್ಟರ್ ಪೋಸ್ಟ್ ಆನ್‌ಲೈನ್‌ನಲ್ಲಿ ಜನರ ಗಮನ ಸೆಳೆಯುತ್ತಿದೆ: ಪೊಲೀಸರು 112 ಕರೆ ಮಾಡಿದ ನಂತರ ಕೃತ್ಯದ ಸ್ಥಳ ತಲುಪಿದಾಗ ಅದು ಭದ್ರತೆ ಲೋಪದ ವಿಷಯ ಅನಿಸುವುದಿಲ್ಲ; ಬದಲಿಗೆ ಅಂತಹ ಅಪರಾಧಗಳಿಗೆ ಶಿಕ್ಷೆಯಾಗುವ ಬಗ್ಗೆ ನೋಡಿಕೊಲ್ಳಬೇಕು. ಎಫ್‌ಐಆರ್ ನೋಂದಾಯಿಸಿಕೊಳ್ಳಿ (ಕೇವಲ ಪೊಲೀಸ್ ದೂರು ಅಥವಾ ಎನ್‌ಸಿಆರ್ ಅಲ್ಲ). ಆದರಿಂದ ಇಂತಹ ಅಪರಾಧಿಗಲಿಗೆ/ ಅಪರಾದಗಳಿಗೆ ತಕ್ಕ ಪಾಠವಾಗುವಂತೆ ಮಾಡಬಹುದು. ಈ ಬಗ್ಗೆ ನಿಮಗೆ (ಪೊಲೀಸ್​​) ಯಾವುದೇ ಬೆಂಬಲ ಬೇಕಾದರೆ, ದಯವಿಟ್ಟು ನನ್ನನ್ನು ಡಿಎಂ ಮಾಡಿ ಎಂದು ಮತ್ತೊಬ್ಬ ಬಳಕೆದಾರರು ಇದಕ್ಕೆ ಪ್ರತಿಕ್ರಿಯೆಯಾಗಿ ಬರೆದಿದ್ದಾರೆ.

ಕೆಲವು ಬಳಕೆದಾರರು ಬೆಂಗಳೂರು ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಪೊಲೀಸರು ಘಟನೆ ನಡೆದ ನಿರ್ದಿಷ್ಟ ಸ್ಥಳದ ವಿವರಗಳು ಮತ್ತು ನಿಮ್ಮ ಸಂಪರ್ಕ ವಿವರಗಳನ್ನು DM ಮೂಲಕ ದಯವಿಟ್ಟು ಒದಗಿಸಿ ಎಂದು X ಟ್ವಿಟ್ಟರ್​​ ನಲ್ಲಿ ಹೇಳಿದ್ದಾರೆ.

Published On - 11:00 am, Thu, 16 November 23