ಬೆಂಗಳೂರು: ಕೊರೊನಾ ವಿರುದ್ಧದ ಹೋರಾಟಕ್ಕೆ ಇಡೀ ದೇಶವೇ ಲಾಕ್ಡೌನ್ ಆಗಿದೆ. ಅಗತ್ಯ ವಸ್ತುಗಳು ಬಿಟ್ಟರೆ ಬೇರೆನೂ ಸಿಗುತ್ತಿಲ್ಲ. ಈ ನಡುವೆ ಯುವತಿಯರಿಬ್ಬರು ನಗರದಲ್ಲಿ ವೀಕೆಂಡ್ ಪಾರ್ಟ್ ಮಾಡಿ ಮೋಜು ಮಸ್ತಿಯಲ್ಲಿ ತೇಳಾಡಿದ್ದಾರೆ. ಈ ವೇಳೆ ಕಾರು ನಿಲ್ಲಿಸಿದ್ದಕ್ಕೆ ಪೊಲೀಸರನ್ನೇ ಕಕ್ಕಾಬಿಕ್ಕಿಯಾಗುವಂತೆ ಮಾಡಿದ್ದಾರೆ.
ಲಾಕ್ಡೌನ್ ನಡುವೆಯೇ ಬೆಂಗಳೂರಿನಲ್ಲಿ ಯುವತಿಯರು ಪುಂಡಾಟ ಮೆರೆದಿದ್ದಾರೆ. ನಶೆಯಲ್ಲಿದ್ದ ಯುವತಿಯರು ಖಾಲಿ ರೋಡ್ಗಳಲ್ಲಿ ಱಷ್ ಡ್ರೈವಿಂಗ್ ಮಾಡಿದ್ದಾರೆ ಈ ವೇಳೆ ಲೀಲಾ ಪ್ಯಾಲೇಸ್ ಚೆಕ್ ಪೋಸ್ಟ್ಬಳಿ ಜೆ.ಬಿ ನಗರ ಪೊಲೀಸರು ಕಾರನ್ನು ತಡೆದು ನಿಲ್ಲಿಸಿದ್ದಾರೆ. ಖಾಕಿಗೆ ನಮ್ ಹತ್ರ ಪಾಸ್ ಇದೆ, ನಮಗೆ ಮೇಲಾಧಿಕಾರಿಗಳು ಗೊತ್ತು ಎಂದು ಆವಾಜ್ ಹಾಕಿದ್ದಾರೆ. ಪ್ರಶ್ನಿಸಿದ ಯುವಕರೊಂದಿಗೂ ವಾಗ್ವಾದ ನಡೆಸಿದ್ದಾರೆ. ಸಾಧ್ಯವಾದ್ರೆ ಹಿಡಿಯಿರಿ ಅಂತಾ ಸ್ಥಳದಿಂದ ಕಾರಿನಲ್ಲಿ ಪರಾರಿಯಾಗಲು ಮುಂದಾಗಿದ್ದಾರೆ.
ಈ ವೇಳೆ ಕಾರನ್ನು ತಡೆಯಲು ಬಂದ ಇನ್ಸ್ಪೆಕ್ಟರ್ ಮೇಲೆ ಕಾರ್ ಹತ್ತಿಸಲು ಯತ್ನಿಸಿ ಪರಾರಿಯಾಗಿದ್ದಾರೆ. ಪೊಲೀಸರು ಯುವತಿಯರಿಗಾಗಿ ಒಂದು ಕಿಲೋ ಮೀಟರ್ ಚೇಸ್ ಮಾಡಿದ್ದಾರೆ. ಆದರೆ ನಶೆಯಲ್ಲಿದ್ದ ಯುವತಿಯರು ಎಸ್ಕೇಪ್ ಆಗಿದ್ದು, ಯುವತಿಯರಿಗಾಗಿ ಪೊಲೀಸರು ಶೋಧ ಮುಂದುವರೆಸಿದ್ದಾರೆ.