1702 ಅನಾಥ ಶವಗಳಿಗೆ ಮುಕ್ತಿ ಕೊಡಿಸಿರುವ ಅಪರೂಪದ ಮಹಿಳೆ.. ಯಾರಿರಬಹುದು?

ಶವ ಸುಡುವ ಕೆಲಸದಲ್ಲಿ ತೊಡಗುವವರು ಸಹ ಬಹಳಷ್ಟು ಕಡಿಮೆ. ಆದರೆ ಅದಕ್ಕೆ ಅಪವಾದವೆಂಬಂತೆ ರೇಷ್ಮೆ ನಗರಿ ರಾಮನಗರದಲ್ಲಿರುವ ಆಶಾ ಎಂಬ ಅಪರೂಪದ ಮಹಿಳೆ ಅನಾಥ ಶವಗಳಿಗೆ ಮುಕ್ತಿಕೊಡುವ ಕೆಲಸ ಮಾಡುತ್ತಿದ್ದಾರೆ. ಆಶಾ ಅವರು ರಾಮನಗರದದಲ್ಲಿ ಪದವಿಪೂರ್ವ ಶಿಕ್ಷಣ ವ್ಯಾಸಂಗ ಮಾಡಿದ್ದಾರೆ.

1702 ಅನಾಥ ಶವಗಳಿಗೆ ಮುಕ್ತಿ ಕೊಡಿಸಿರುವ ಅಪರೂಪದ ಮಹಿಳೆ.. ಯಾರಿರಬಹುದು?
ಆಶಾ
Follow us
sandhya thejappa
|

Updated on: Dec 31, 2020 | 10:29 AM

ರಾಮನಗರ: ಶವ ಸಂಸ್ಕಾರಕ್ಕೆ ಭಾರತೀಯ ಸಂಸ್ಕೃತಿಯಲ್ಲಿ ಅದರದ್ದೇ ಆದ ಮಹತ್ವವಿದೆ. ಪ್ರತಿಯೊಂದು ಧರ್ಮದವರು ತನ್ನದೇ ಆದ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶವ ಸಂಸ್ಕಾರ ಮಾಡುತ್ತಾರೆ. ಆದರೆ ಅನಾಥ ಶವಗಳಿಗೆ ವಾರಸುದಾರರಾಗಲು ಯಾರು ಮುಂದೆ ಬರುವುದಿಲ್ಲ. ಶವ ಸುಡುವ ಕೆಲಸದಲ್ಲಿ ತೊಡಗುವವರು ಸಹಾ ಬಹಳಷ್ಟು ಕಡಿಮೆ. ರೇಷ್ಮೆ ನಗರಿ ರಾಮನಗರದಲ್ಲಿರುವ ಆಶಾ ಎಂಬ ಅಪರೂಪದ ಮಹಿಳೆ ಅನಾಥ ಶವಗಳಿಗೆ ಮುಕ್ತಿಕೊಡುವ ಕೆಲಸ ಮಾಡುತ್ತಿದ್ದಾರೆ.

ಪ್ರೇರಣೆ ಆದ ಘಟನೆ ಮೂಲತಃ ರಾಮನಗರ ತಾಲೂಕಿನ ಜಯಪುರ ಗ್ರಾಮದವರಾದ ಆಶಾ, ಸ್ವಗ್ರಾಮ ಜಯಪುರದಲ್ಲಿ ಪ್ರಾಥಮಿಕ ಶಿಕ್ಷಣ, ಕೂಟಗಲ್ ಸರ್ಕಾರಿ ಶಾಲೆಯಲ್ಲಿ ಹೈಸ್ಕೂಲು ಹಾಗೂ ರಾಮನಗರದ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ವ್ಯಾಸಂಗ ಮಾಡಿದ್ದಾರೆ.

ಒಂದು ದಿನ ಭಾವ ಪ್ರವೀಣ್ ಜೊತೆಯಲ್ಲಿ ಆಂಬುಲೆನ್ಸ್​ನಲ್ಲಿ ಚನ್ನಪಟ್ಟಣದಿಂದ ರಾಮನಗರಕ್ಕೆ ಹೋಗುತ್ತಿದ್ದ ವೇಳೆ ರೈಲ್ವೆ ಪೊಲೀಸರ ಕರೆ ಮೇರೆಗೆ ಪ್ರವೀಣ್ ಸ್ಥಳಕ್ಕೆ ತೆರಳಿದ್ದರು. ತುಂಡಾದ ಮತ್ತು ರಕ್ತ ಸಿಕ್ತವಾದ ದೇಹವನ್ನು ಸಂಗ್ರಹಿಸಿ ಅನಾಥ ಶವವಾದ ಕಾರಣ ಅಂತ್ಯಸಂಸ್ಕಾರವನ್ನು ಮಾಡಲಾಗಿತ್ತು.

ಅದನ್ನು ನೋಡಿದ ಆಶಾ, ನಾನು ಕೂಡ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕೆಂದು ಅನಾಥ ಶವದ ಅಂತ್ಯಸಂಸ್ಕಾರ ಮಾಡಲು ಮುಂದಾದರು. ಹೀಗೆ ಕಳೆದ ನಾಲ್ಕು ವರ್ಷಗಳಿಂದಲೂ ಸುಮಾರು 1,702 ಅನಾಥ ಶವಗಳಿಗೆ ಸಂಸ್ಕಾರ ಮಾಡುವ ಮೂಲಕ ಮುಕ್ತಿ ನೀಡಿದ್ದಾರೆ.

ಸಮಯದ ನಿಯಮವಿಲ್ಲ ಅನಾಥ ಶವಗಳಿಗೆ ಮುಕ್ತಿ ನೀಡುವ ಕಾರ್ಯಕ್ಕೆ ಆಶಾ ಸಮಯವನ್ನು ನಿಗದಿಪಡಿಸಿಕೊಂಡಿಲ್ಲ. ಯಾವುದೇ ಸಮಯದಲ್ಲಿ ಯಾರೇ ಕರೆ ಮಾಡಿದರೂ ಕೆಂಗೇರಿಯಿಂದ ಮಂಡ್ಯ ತನಕ, ರೈಲಿಗೆ ಸಿಲುಕಿ ಅಥವಾ ಆತ್ಮಹತ್ಯೆ ಮಾಡಿಕೊಳ್ಳುವ, ಇನ್ನು ನಗರ ಪ್ರದೇಶದಲ್ಲಿ ಅನಾಥರು ಸಾವನ್ನಪ್ಪುವ ಅನಾಥ ಶವಗಳಿಗೆ ಮುಕ್ತಿ ನೀಡುತ್ತಾರೆ.

ಯಾವುದೇ ಅಂಜಿಕೆ, ಭಯವಿಲ್ಲದೇ ಮುಂದೇ ಹೋಗಿ ಅನಾಥ ಶವಗಳನ್ನು ಎತ್ತಿಕೊಂಡು ಬಂದು ರಾಮನಗರದಲ್ಲಿ ಸಂಸ್ಕಾರ ಮಾಡುತ್ತಾರೆ. ಹೀಗಾಗಿಯೇ ಯಾವುದೇ ಅನಾಥ ಶವಗಳು ಪತ್ತೆಯಾದರೇ, ಪೊಲೀಸರು ಮೊದಲು ಆಶಾರಿಗೆ ಕರೆ ಮಾಡುತ್ತಾರೆ.

ಅನ್ನದಾನ ಅನಾಥ ಶವಗಳ ಅಂತ್ಯಸಂಸ್ಕಾರ ಮಾಡುವ ಸಲುವಾಗಿಯೇ ಜೀವ ರಕ್ಷಾ ಚಾರಿಟಬಲ್ ಟ್ರಸ್ಟ್ ಸ್ಥಾಪನೆ ಮಾಡಿರುವ ಈಕೆ ತಂಡ ರಚನೆ ಮಾಡಿ ಶವಸಂಸ್ಕಾರ ಮಾಡುತ್ತಿದ್ದಾರೆ. ಇದರ ಹೊರತಾಗಿಯೂ ಲಾಕ್ಡೌನ್ ಸಂದರ್ಭದಲ್ಲೂ ಈಕೆ ಕೈಗೊಂಡ ಅನ್ನದಾನ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೂ ಪಾತ್ರವಾಯಿತು. ತಮ್ಮ ಟ್ರಸ್ಟ್ ಮೂಲಕ 40 ದಿನಗಳ ಕಾಲ ಒಂದು ದಿನವೂ ತಪ್ಪದೆ ಬೆಳಗ್ಗೆ ಹಾಗೂ ಸಂಜೆ ಹೊತ್ತು ಬಸ್ ನಿಲ್ದಾಣ, ರಸ್ತೆ ಬದಿ, ಶಾಪಿಂಗ್ ಕಾಂಪ್ಲೆಕ್ಸ್​​ಗಳ ಬಳಿ ವಾಸವಾಗಿದ್ದ ನಿರ್ಗತಿಕರಿಗೆ, ಅನಾಥರಿಗೆ ಪ್ರಚಾರವಿಲ್ಲದೆ ಆಶಾ ಅನ್ನದಾನ ಮಾಡಿದರು.

ನಾಯಿಗಳಿಗೂ ಕೂಡ ಇವರೇ ಆಸರೆ ಕೇವಲ ಆನಾಥ ಶವಗಳಿಗೆ ಮಾತ್ರ ಆಶಾ ಮುಕ್ತಿ ನೀಡುತ್ತಿಲ್ಲ. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು, ತಮ್ಮ ಮೂಕರೋಧನೆ ಹೇಳಿಕೊಳ್ಳಲು ಸಾಧ್ಯವಾಗದೇ ತೊಂದರೆ ಅನುಭವಿಸುತ್ತಿರುವ ಬೀದಿ ನಾಯಿಗಳ ಪಾಲಿಗೂ ಆಶಾ ಆಸರೆಯಾಗಿದ್ದಾರೆ. ಬಿಡದಿಯಿಂದ ರಾಮನಗರದವರೆಗಿನ ಹೆದ್ದಾರಿ ಮಧ್ಯೆ ಅಪಘಾತದಲ್ಲಿ ಗಾಯಗೊಂಡ ಬೀದಿ ನಾಯಿಗಳಿಗೆ ಚಿಕಿತ್ಸೆ ಕೊಡಿಸಿ, ಬೆಂಗಳೂರಿನ ಕೆಂಗೇರಿಯಲ್ಲಿ ಬೀದಿ ನಾಯಿಗಳನ್ನು ಸಾಕುತ್ತಿರುವ ಮಹೇಶ್ ಎಂಬುವವರ ಬಳಿ ಬಿಡುತ್ತಾರೆ.

ವ್ಯವಸಾಯವೇ ಇವರ ಕಸುಬು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಆಶಾ, ಮಾಡುವ ಕೆಲಸ ವ್ಯವಸಾಯ. ಒಂದು ಎಕರೆ ಜಮೀನು ಇಲ್ಲದಿದ್ದರು ಬೇರೆಯವರ ಜಮೀನನ್ನು ಭೋಗ್ಯಕ್ಕೆ ತೆಗೆದುಕೊಂಡು ಅಲ್ಲಿ ಬೆಳೆ ಬೆಳೆಯುತ್ತಾರೆ. ಈ ಬಾರಿ ರಾಗಿ, ಟೊಮೆಟೊ, ಸೌತೆಕಾಯಿಯನ್ನು ಬೆಳೆದಿದ್ದಾರೆ. ನಿತ್ಯ ತಮ್ಮ ಕಾಯಕದ ಜೊತೆಗೆ ಅನಾಥ ಶವಗಳ ಸಂಸ್ಕಾರ ಮಾಡುತ್ತಿರುವುದು ಎಲ್ಲರ ಪ್ರಶಂಸೆಗೆ ಕಾರಣವಾಗಿದೆ.

ಸದ್ಯ ರಾಮನಗರದ ರಾಯರದೊಡ್ಡಿ ನಗರದಲ್ಲಿ ವಾಸವಾಗಿರುವ ಆಶಾ, ಕೇವಲ ರಾಮನಗರ ಜಿಲ್ಲೆಗೆ ಮಾತ್ರ ಸೀಮಿತವಾಗದೇ ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ತಾಲೂಕುಗಳಲ್ಲೂ ತಂಡಗಳನ್ನು ಕಟ್ಟಿಕೊಂಡು ಅನಾಥ ಶವಗಳಿಗೆ ಮುಕ್ತಿ ನೀಡುವ ಕೆಲಸವನ್ನು ಮಾಡಬೇಕೆಂದು ನಿರ್ಧರಿಸಿದ್ದಾರೆ. ಹೀಗಾಗಿ ಹಲವು ಜಿಲ್ಲೆಗಳಲ್ಲಿ ಇದೀಗ ತಂಡವನ್ನು ಕಟ್ಟಲು ಮುಂದಾಗಿದ್ದಾರೆ.

ಇದೊಂದು ಪುಣ್ಯದ ಕೆಲಸ. ಕೆಲವೊಮ್ಮೆ ನಮ್ಮ ಜೀವನದಲ್ಲಿ ನಡೆಯುವ ಘಟನೆಗಳು ನಮ್ಮ ಬದುಕನ್ನು ಬದಲಾಯಿಸುತ್ತದೆ. ಈ ಹಿನ್ನೆಲೆಯಲ್ಲಿ ಅನಾಥ ಶವಗಳಿಗೆ ಮುಕ್ತಿ ನೀಡುತ್ತಿದ್ದೇನೆ. ಮುಂದೇಯೂ ಇದೇ ರೀತಿ ಆನಾಥ ಶವಗಳಿಗೆ ಮುಕ್ತಿ ನೀಡುವ ಕಾಯಕದಲ್ಲಿ ತೊಡಗಿಕೊಳ್ಳುತ್ತೇನೆ ಎಂದು ಆಶಾ ತಿಳಿಸಿದ್ದಾರೆ.

ಬಾನಂಗಳದಲ್ಲಿ ಬಣ್ಣದ ಚಿತ್ತಾರ.. ಮಕ್ಕಳ ಮೊಗದಲ್ಲಿ ಮಂದಹಾಸ!

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್