ಶಿವ ಲಿಂಗದ ಮೇಲೆ ಪ್ರತ್ಯಕ್ಷನಾದ ನಾಗ..
ಹುಣಸೂರು ತಾಲೂಕಿನ ಬಿಳಿಕೆರೆ ಗ್ರಾಮದ ಮಲ್ಲಪ್ಪ ದೇವಸ್ಥಾನದ ಶಿವ ಲಿಂಗದ ಮೇಲೆ ನಾಗರ ಹಾವು ಪ್ರತ್ಯಕ್ಷವಾಗಿದೆ.
ಮೈಸೂರು: ಹಾವನ್ನ ಕಂಡರೆ ಯಾರಿಗೆ ಭಯವಿಲ್ಲ ಹೇಳಿ. ದೂರದಲ್ಲಿದ್ದ ಹಾವನ್ನು ನೋಡಿ ಕಾಲು ಕೀಳುವುದು ಸಹಜ. ಆದರೆ ಇಲ್ಲಿ ಶಿವ ಮೂರ್ತಿ ಮೇಲೆ ನಾಗರ ಹಾವನ್ನು ಕಂಡ ಭಕ್ತರು ದೇವರೇ ಕಣ್ಣೆದುರು ಬಂದಂತೆ ಪೂಜೆ ಸಲ್ಲಿಸಿದ್ದಾರೆ.
ಹೌದು, ಜಿಲ್ಲೆಯ ಹುಣಸೂರು ತಾಲೂಕಿನ ಬಿಳಿಕೆರೆ ಗ್ರಾಮದ ಮಲ್ಲಪ್ಪ ದೇವಸ್ಥಾನದ ಶಿವ ಲಿಂಗದ ಮೇಲೆ ನಾಗರ ಹಾವು ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿದ್ದು, ಭಕ್ತರಿಗೆ ಅಚ್ಚರಿ ಮೂಡಿಸಿದೆ. ನಾಗರ ಹಾವನ್ನು ಕಂಡ ಭಕ್ತರು ಪರಮಾತ್ಮನೇ ಕಾಣಿಸುತ್ತಿದ್ದಾನೆಂದು ಶ್ರದ್ದಾ ಭಕ್ತಿಯಿಂದ ಹಾವಿಗೆ ಪೂಜೆ ಸಲ್ಲಿಸಿದ್ದಾರೆ.
Published On - 11:54 am, Thu, 31 December 20