Shakti Yojana: ಅಂತರಾಜ್ಯದಲ್ಲಿ 20 ಕಿಮೀ ಮಾತ್ರ ಉಚಿತ ಪ್ರಯಾಣ, ಆದ್ರೆ ಷರತ್ತು ಅನ್ವಯ: ಸಿದ್ದರಾಮಯ್ಯ
ಶಕ್ತಿ ಯೋಜನೆ ಅಡಿ ಕರ್ನಾಟಕದಲ್ಲಿ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರು ಉಚಿತ ಪ್ರಯಾಣ ಮಾಡಬಹುದು. ಜೊತೆಗೆ ನೆರೆಯ ರಾಜ್ಯಗಳಲ್ಲಿ 20 ಕಿ.ಮೀ ವರೆಗೆ ಉಚಿತ ಪ್ರಯಾಣವನ್ನು ಮಾಡಬಹುದಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರು: ಶಕ್ತಿ ಯೋಜನೆ ಅಡಿ ಕರ್ನಾಟಕದಲ್ಲಿ ಸರ್ಕಾರಿ ಬಸ್‌ಗಳಲ್ಲಿ (Government Bus) ಮಹಿಳೆಯರು ಉಚಿತ ಪ್ರಯಾಣ ಮಾಡಬಹುದು. ಜೊತೆಗೆ ನೆರೆಯ ರಾಜ್ಯಗಳಲ್ಲಿ 20 ಕಿ.ಮೀ ವರೆಗೆ ಉಚಿತ ಪ್ರಯಾಣವನ್ನು ಮಾಡಬಹುದಾಗಿದೆ. ಅಂದರೆ ಬಳ್ಳಾರಿಯಂತಹ (Bellary) ಸ್ಥಳಗಳ ಮಹಿಳೆಯರು ಆಂಧ್ರ ಪ್ರದೇಶದಲ್ಲಿ (Andhra Pradesh) 20 ಕಿಮೀ ದೂರದವರೆಗೆ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದು ಯೋಜನೆಗೆ ಚಾಲನೆ ನೀಡುವ ಮುನ್ನವೇ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. ಆದಾಗ್ಯೂ, ಕೆಲಸಕ್ಕಾಗಿ ಬೆಂಗಳೂರಿನಿಂದ ಹೊಸೂರಿಗೆ ಪ್ರಯಾಣಿಸುವ ಮಹಿಳೆಯರು 20 ಕಿಮೀ ಮಿತಿಯನ್ನು ಮೀರಿರುವುದರಿಂದ ಉಚಿತ ಪ್ರಯಾಣದ ನಿಬಂಧನೆಯಿಂದ ಪ್ರಯೋಜನ ಪಡೆಯುವುದಿಲ್ಲ.
ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫಲಾನುಭವಿಗಳು ನೆರೆಯ ರಾಜ್ಯಗಳಲ್ಲಿ 20 ಕಿ.ಮೀ ವರೆಗೆ ಪ್ರಯಾಣಿಸಬಹುದು. ಉದಾಹರಣೆಗೆ, ಬಳ್ಳಾರಿಯಿಂದ ಆಂಧ್ರಪ್ರದೇಶದ ಒಳಗೆ 20 ಕಿ.ಮೀ ವರೆಗೆ ಪ್ರಯಾಣಿಸುವ ಮಹಿಳೆಯರು ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದು ಸಿದ್ದರಾಮಯ್ಯ ಎಂದು ಹೇಳಿದರು.
ಆದರೆ, ಅಂತಾರಾಜ್ಯ ಬಸ್‌ಗಳನ್ನು ಬಳಸುವ ಮಹಿಳೆಯರಿಗೆ ಈ ಸೇವೆ ಅನ್ವಯಿಸುವುದಿಲ್ಲ. “ಮಹಿಳೆಯೊಬ್ಬರು ತಿರುಪತಿಗೆ ಹೋಗಲು ಬಯಸಿದರೆ, ಅವರು ಉಚಿತವಾಗಿ ಪ್ರಯಾಣಿಸಲು ಸಾಧ್ಯವಿಲ್ಲ”. ಅವರು ಮುಳಬಾಗಲು (ಕೋಲಾರ ಜಿಲ್ಲೆ ಆಂದ್ರ ಪ್ರದೇಶ ಗಡಿ) ವರೆಗೆ ಮಾತ್ರ ಉಚಿತವಾಗಿ ಹೋಗಬಹುದು. ನಂತರ ಇನ್ನೊಂದು ಬಸ್‌ನಲ್ಲಿ ಹೋಗಬೇಕು. ಅಂತೆಯೇ, ಬೆಂಗಳೂರಿನಿಂದ ಹೊಸೂರಿಗೆ ಕೆಲಸಕ್ಕಾಗಿ ಸುಮಾರು 40 ಕಿ.ಮೀ ಪ್ರಯಾಣಿಸುವ ನೂರಾರು ಮಹಿಳೆಯರಿಗೆ ಈ ಯೋಜನೆ ಪ್ರಯೋಜನವಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Shakti Yojana: ಇಂದು ರಾಜ್ಯಾದ್ಯಂತ ಏಕಕಾಲದಲ್ಲಿ ಶಕ್ತಿ ಯೋಜನೆಗೆ ಚಾಲನೆ
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರೊಂದಿಗೆ ಭಾನುವಾರ ಯೋಜನೆಗೆ ಚಾಲನೆ ನೀಡಲಿದ್ದೇನೆ. ಎಲ್ಲಾ ಮಹಿಳೆಯರು ಎಸಿ ಮತ್ತು ವೋಲ್ವೋ ಹೊರತುಪಡಿಸಿ ಎಲ್ಲಾ ಸರ್ಕಾರಿ ಸ್ವಾಮ್ಯದ ಬಸ್‌ಗಳಲ್ಲಿ ಎಕ್ಸ್‌ಪ್ರೆಸ್ ಬಸ್ ಸೇವೆಗಳು ಸೇರಿದಂತೆ ರಾಜ್ಯದೊಳಗೆ ಉಚಿತವಾಗಿ ಪ್ರಯಾಣಿಸಲು ಅರ್ಹರಾಗಿರುತ್ತಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಜುಲೈ 1 ರಂದು ಕಲಬುರಗಿಯಲ್ಲಿ ಗೃಹ ಜ್ಯೋತಿ ಚಾಲನೆ
ಜುಲೈ 1 ರಂದು ಕಲಬುರಗಿಯಲ್ಲಿ ಗೃಹ ಜ್ಯೋತಿಯನ್ನು ಪ್ರಾರಂಭಿಸಲಾಗುವುದು. ಅದೇ ದಿನ, ಮೈಸೂರಿನಿಂದ ಬಿಪಿಎಲ್ ಕುಟುಂಬಗಳಿಗೆ 10 ಕೆಜಿ ಉಚಿತ ಅಕ್ಕಿ ಅಥವಾ ಆಹಾರ ಧಾನ್ಯಗಳನ್ನು ನೀಡುವ ಅನ್ನ ಭಾಗ್ಯ ಯೋಜನೆಯನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದ್ದಾರೆ.
ಗೃಹ ಲಕ್ಷ್ಮಿ ಯೋಜನೆ (ಮನೆಯೊಂದರ ಮಹಿಳೆಗೆ ಮಾಸಿಕ 2,000 ರೂಪಾಯಿಗಳ ಆರ್ಥಿಕ ಸಹಾಯವನ್ನು ನೀಡುವುದರ) ಕುರಿತು ಮಾತನಾಡಿ ಇದನ್ನು ಆಗಸ್ಟ್ 16 ರಂದು ಬೆಳಗಾವಿಯ ಜಿಲ್ಲಾ ಕೇಂದ್ರದಿಂದ ಪ್ರಾರಂಭಿಸಲಾಗುವುದು ಎಂದು ಹೇಳಿದರು.
ಪದವೀಧರರಿಗೆ 3,000 ರೂ. ಮತ್ತು ಡಿಪ್ಲೊಮಾ ಹೊಂದಿರುವವರಿಗೆ 1,500 ರೂ. ನಿರುದ್ಯೋಗ ಭತ್ಯೆ ನೀಡುವ ಯುವ ನಿಧಿ ಯೋಜನೆಗೆ 2022-23 ರಲ್ಲಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪದವೀಧರರು ಮತ್ತು ಡಿಪ್ಲೋಮಾ ಪಧವೀದರರು ಅರ್ಹರಾಗಿರುತ್ತಾರೆ. 24 ತಿಂಗಳವರೆಗೆ ಭತ್ಯೆ ಸಿಗುತ್ತದೆ. ಸರ್ಕಾರಿ ಅಥವಾ ಖಾಸಗಿ ವಲಯದಲ್ಲಿ ಕೆಲಸ ಸಿಕ್ಕರೆ ಭತ್ಯೆ ನಿಲ್ಲಿಸಲಾಗುವುದು ಎಂದು ಸಿಎಂ ಸ್ಪಷ್ಟಪಡಿಸಿದರು.
ಫಲಾನುಭವಿಗೆ ಕೆಲಸ ಸಿಕ್ಕಿದೆಯೇ ಎಂಬುದನ್ನು ಸರ್ಕಾರ ಹೇಗೆ ಖಚಿತಪಡಿಸುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ನಾವು ಎಲ್ಲಾ ಮಾಹಿತಿಯನ್ನು ಸಂಗ್ರಹಿಸುತ್ತೇವೆ. ಸುಳ್ಳು ಘೋಷಣೆ ಮಾಡುವವರ ವಿರುದ್ಧ ನಾವು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:03 am, Sun, 11 June 23